- Kannada News Photo gallery Cricket photos T20 World Cup 2024: India remains No. 1 in ICC rankings before T20 WC
T20 World Cup 2024: ವಿಶ್ವಕಪ್ಗೂ ಮುನ್ನ ಟಿ20 ತಂಡಗಳ ರ‍್ಯಾಂಕಿಂಗ್ ಪ್ರಕಟ
T20 World Cup 2024: ಈ ಬಾರಿಯ ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದೆ. 9ನೇ ಆವೃತ್ತಿಯ ಚುಟುಕು ಕ್ರಿಕೆಟ್ ಕದನಕ್ಕೆ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ಆತಿಥ್ಯವಹಿಸಲಿದೆ. ಅದರಂತೆ ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ಜರುಗಲಿದೆ.
Updated on: May 30, 2024 | 12:58 PM

T20 World Cup 2024: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಐಸಿಸಿ ನೂತನ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. 20 ತಂಡಗಳ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದ್ದರೆ, ಪಪುವಾ ನ್ಯೂಗಿನಿಯಾ ತಂಡ ಕೊನೆಯ ಸ್ಥಾನದಲ್ಲಿದೆ. ಅದರಂತೆ ನೂತನ ಟಿ20 ತಂಡಗಳ ಶ್ರೇಯಾಂಕ ಪಟ್ಟಿ ಈ ಕೆಳಗಿನಂತಿದೆ...

1- ಭಾರತ: ಟೀಮ್ ಇಂಡಿಯಾ 264 ಅಂಕಗಳೊಂದಿಗೆ ಟಿ20 ತಂಡಗಳ ನೂತನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

2- ಆಸ್ಟ್ರೇಲಿಯಾ: ಈ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ದ್ವಿತೀಯ ಸ್ಥಾನದಲ್ಲಿದ್ದು, ಒಟ್ಟು 257 ಅಂಕಗಳನ್ನು ಹೊಂದಿದೆ.

3- ಇಂಗ್ಲೆಂಡ್: ಮೂರನೇ ಸ್ಥಾನದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವಿದ್ದು, ಒಟ್ಟು 254 ಅಂಕಗಳನ್ನು ಕಲೆಹಾಕಿದೆ.

4- ವೆಸ್ಟ್ ಇಂಡೀಸ್: ಈ ಪಟ್ಟಿಯಲ್ಲಿ 252 ಅಂಕಗಳನ್ನು ಹೊಂದಿರುವ ವೆಸ್ಟ್ ಇಂಡೀಸ್ ತಂಡವು 4ನೇ ಸ್ಥಾನದಲ್ಲಿದೆ.

5- ನ್ಯೂಝಿಲೆಂಡ್: 250 ಅಂಕಗಳನ್ನು ಹೊಂದಿರುವ ನ್ಯೂಝಿಲೆಂಡ್ ತಂಡವು ಈ ಶ್ರೇಯಾಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

6- ಪಾಕಿಸ್ತಾನ್: ಪಾಕ್ ತಂಡವು ಒಟ್ಟು 244 ಅಂಕಗಳನ್ನು ಹೊಂದಿದ್ದು, ಈ ಮೂಲಕ ಟಿ20 ತಂಡಗಳ ಶ್ರೇಯಾಂಕದಲ್ಲಿ 6ನೇ ಸ್ಥಾನದಲ್ಲಿದೆ.

7- ಸೌತ್ ಆಫ್ರಿಕಾ: 244 ಅಂಕಗಳನ್ನು ಹೊಂದಿರುವ ಸೌತ್ ಆಫ್ರಿಕಾ ತಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

8- ಶ್ರೀಲಂಕಾ: ಲಂಕಾ ಪಡೆಯು ಒಟ್ಟು 232 ಅಂಕಗಳನ್ನು ಹೊಂದಿದ್ದು, ಟಿ20 ತಂಡಗಳ ನೂತನ ಶ್ರೇಯಾಂಕದಲ್ಲಿ 8ನೇ ಸ್ಥಾನ ಅಲಂಕರಿಸಿದೆ.

9- ಬಾಂಗ್ಲಾದೇಶ್: 226 ಅಂಕಗಳನ್ನು ಹೊಂದಿರುವ ಬಾಂಗ್ಲಾದೇಶ್ ತಂಡವು ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

10- ಅಫ್ಘಾನಿಸ್ತಾನ್: ಅಫ್ಘಾನ್ ಪಡೆಯು ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ 217 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇನ್ನು ಐರ್ಲೆಂಡ್ (197), ಝಿಂಬಾಬ್ವೆ (192), ನಮೀಬಿಯಾ (189), ಸ್ಕಾಟ್ಲೆಂಡ್ (189), ನೆದರ್ಲ್ಯಾಂಡ್ಸ್ (184), ಯುಎಇ (176), ನೇಪಾಳ (171), ಯುಎಸ್ಎ (165), ಒಮಾನ್ (165) ಮತ್ತು ಪಪುವಾ ನ್ಯೂಗಿನಿಯಾ (147) ತಂಡಗಳು ಕ್ರಮವಾಗಿ 11 ರಿಂದ 20ರವರೆಗಿನ ಸ್ಥಾನಗಳನ್ನು ಅಲಂಕರಿಸಿದೆ.



















