T20 World Cup 2024: 3 ಸೆಮಿಫೈನಲ್‌ ಪಂದ್ಯಗಳಲ್ಲಿ ಅರ್ಧಶತಕ; ಇಂದು ಅಬ್ಬರಿಸ್ತಾರಾ ಕಿಂಗ್ ಕೊಹ್ಲಿ?

|

Updated on: Jun 27, 2024 | 4:40 PM

Virat Kohli: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಬ್ಯಾಟ್ ಇದುವರೆಗೆ ಸದ್ದು ಮಾಡಿಲ್ಲ. ಅವರ ಬ್ಯಾಟ್‌ನಿಂದ ಒಂದೇ ಒಂದು ಇನ್ನಿಂಗ್ಸ್ 50 ರನ್ ಬಂದಿಲ್ಲ. ಇದಲ್ಲದೆ ಎರಡು ಬಾರಿ ಖಾತೆ ತೆರೆಯದೆ ಔಟಾಗಿ ಪೆವಿಲಿಯನ್‌ಗೆ ಮರಳಿದ್ದಾರೆ. ಆದರೆ ಈ ಹಿಂದೆ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿ ಇಷ್ಟು ಕಳಪೆ ಪ್ರದರ್ಶನ ನೀಡಿರಲಿಲ್ಲ.

1 / 8
9ನೇ ಆವೃತ್ತಿಯ ಟಿ20 ವಿಶ್ವಕಪ್​ನ 2ನೇ ಸೆಮಿಫೈನಲ್ ಪಂದ್ಯ ಇಂದು ರಾತ್ರಿ 8 ಗಂಟೆಗೆ ಆರಂಭವಾಗಲಿದೆ.  ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಇಂಗ್ಲೆಂಡ್‌ ತಂಡವನ್ನು ಎದುರಿಸುತ್ತಿದೆ. 11 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಟೀಂ ಇಂಡಿಯಾಕ್ಕೆ ಇದು ಸುವರ್ಣಾವಕಾಶವಾಗಿದೆ.

2 / 8
ಆದರೆ ಈ ಮಹತ್ವದ ಪಂದ್ಯಕ್ಕೂ ಟೀಂ ಇಂಡಿಯಾದ ಆರಂಭಿಕ ಜೋಡಿಯ ಕಳಪೆ ಜೊತೆಯಾಟ ತಂಡಕ್ಕೆ ಸಂಕಷ್ಟ ತಂದೊಡ್ಡಿದೆ. ನಾಯಕ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ತಮ್ಮ ಫಾರ್ಮ್​ ಕಂಡುಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಇನ್ನು ಫಾರ್ಮ್​ಗೆ ಬಂದಿಲ್ಲ. ಇದು ಉಳಿದ ಆಟಗಾರರ ಮೇಲೆ ಒತ್ತಡ ಹೇರುತ್ತಿದೆ. ಇಂದು ಭಾರತ ಗೆಲ್ಲಬೇಕೆಂದರೆ ಕೊಹ್ಲಿ ಬ್ಯಾಟ್​ನಿಂದ ಮ್ಯಾಚ್ ವಿನ್ನಿಂಗ್ಸ್ ಹೊರಬರಬೇಕಾಗಿದೆ.

3 / 8
ಇದಕ್ಕೆ ಪೂರಕವಾಗಿ ನೋಡುವುದಾದರೆ... ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸಿರುವುದನ್ನು ನಾವು ಕಾಣಬಹುದಾಗಿದೆ. ಇದುವರೆಗೆ ಮೂರು ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯಗಳನ್ನು ಆಡಿರುವ ಕೊಹ್ಲಿ ಆಡಿರುವ ಮೂರೂ ಪಂದ್ಯಗಳು ಅರ್ಧಶತಕದ ಇನ್ನಿಂಗ್ಸ್ ಆಡಿರುವುದು ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

4 / 8
ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಬ್ಯಾಟ್ ಇದುವರೆಗೆ ಸದ್ದು ಮಾಡಿಲ್ಲ. ಅವರ ಬ್ಯಾಟ್‌ನಿಂದ ಒಂದೇ ಒಂದು ಇನ್ನಿಂಗ್ಸ್ 50 ರನ್ ಬಂದಿಲ್ಲ. ಇದಲ್ಲದೆ ಎರಡು ಬಾರಿ ಖಾತೆ ತೆರೆಯದೆ ಔಟಾಗಿ ಪೆವಿಲಿಯನ್‌ಗೆ ಮರಳಿದ್ದಾರೆ. ಆದರೆ ಈ ಹಿಂದೆ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿ ಇಷ್ಟು ಕಳಪೆ ಪ್ರದರ್ಶನ ನೀಡಿರಲಿಲ್ಲ.

5 / 8
ಕಳೆದ ಬಾರಿ ನಡೆದ ಟಿ20ವಿಶ್ವಕಪ್​ ಇದಕ್ಕೆ ಉದಾಹರಣೆಯಾಗಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ತಲುಪಿತ್ತು. ಅಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಈ  ಪಂದ್ಯದಲ್ಲಿ ಕೊಹ್ಲಿ 40 ಎಸೆತಗಳಲ್ಲಿ 50 ರನ್ ಗಳಿಸಿ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದರು. ಇದರ ಹೊರತಾಗಿಯೂ ಭಾರತ ತಂಡ ಸೋಲನುಭವಿಸಿತು.

6 / 8
ವಾಸ್ತವವಾಗಿ ವಿರಾಟ್ ಕೊಹ್ಲಿ 2012 ರಿಂದಲೂ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಆದರೆ ಅವರಿಗೆ ಕೇವಲ ಮೂರು ಬಾರಿ ಸೆಮಿಫೈನಲ್ ಆಡುವ ಅವಕಾಶ ಸಿಕ್ಕಿದೆ. ಈ ಮೂರು ಪಂದ್ಯಗಳಲ್ಲಿ ಕೊಹ್ಲಿ ಖಂಡಿತವಾಗಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ.

7 / 8
2014ರಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ಆಡಿದ್ದ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ 44 ಎಸೆತಗಳಲ್ಲಿ 72 ರನ್ ಸಿಡಿಸಿದ್ದರು. ಇದೇ ಕಾರಣಕ್ಕೆ ಟೀಂ ಇಂಡಿಯಾ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಫೈನಲ್‌ನಲ್ಲಿ ಸೋಲನುಭವಿಸಬೇಕಾಯಿತು ಎಂಬುದು ಬೇರೆ ಮಾತು.

8 / 8
ಇದಾದ ಬಳಿಕ ಕೊಹ್ಲಿ 2016ರಲ್ಲಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡಿದ್ದರು. ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ, 47 ಎಸೆತಗಳಲ್ಲಿ 89 ರನ್‌ಗಳ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ, ಈ ಪಂದ್ಯದಲ್ಲಿ ಭಾರತ ತಂಡ ಸೋತಿದ್ದು, ಫೈನಲ್ ಹಾದಿಯೂ ಮುಚ್ಚಿ ಹೋಗಿತ್ತು ಎಂಬುದು ಬೇರೆ ಮಾತು.