ಗೌತಮ್ ಗಂಭೀರ್ ಕೋಚ್ ಹುದ್ದೆಗೆ ಕಂಟಕ
Gautam Gambhir: ಗೌತಮ್ ಗಂಭೀರ್ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ 10 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇದರಲ್ಲಿ 6 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು ಮೂರು ಏಕದಿನ ಪಂದ್ಯಳಲ್ಲಿ 2 ಸೋಲು ಹಾಗೂ 1 ಡ್ರಾ ಸಾಧಿಸಿದೆ. ಹಾಗೆಯೇ 10 ಟಿ20 ಪಂದ್ಯಗಳಲ್ಲಿ 9 ಮ್ಯಾಚ್ಗಳಲ್ಲೂ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ಇಲ್ಲಿ ಗಂಭೀರ್ ಗರಡಿಯಲ್ಲಿ ಭಾರತ ತಂಡವು ಏಕದಿನ ಮತ್ತು ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
1 / 5
ಭಾರತ ತಂಡದ ಹೀನಾಯ ಪ್ರದರ್ಶನದ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಕಂಟಕ ಎದುರಾಗಿದೆ. ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲಿನ ಬಳಿಕ ಗಂಭೀರ್ ಅವರ ಕೋಚಿಂಗ್ ಶೈಲಿ ವಿರುದ್ಧ ಪ್ರಶ್ನೆಗಳೆದ್ದಿದ್ದು, ಈ ಬಗ್ಗೆ ಬಿಸಿಸಿಐ ಪರಿಶೀಲನಾ ಸಭೆಯಲ್ಲೂ ಚರ್ಚೆ ನಡೆದಿದೆ.
2 / 5
ಪ್ರಸ್ತುತ ಮಾಹಿತಿ ಪ್ರಕಾರ, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿನ ಟೀಮ್ ಇಂಡಿಯಾದ ಪ್ರದರ್ಶನದ ಆಧಾರದ ಮೇಲೆ ಗೌತಮ್ ಗಂಭೀರ್ ಅವರ ಕೋಚ್ ಸ್ಥಾನವನ್ನು 'ಮರು ಮೌಲ್ಯಮಾಪನ' ಮಾಡಲಾಗುತ್ತದೆ. ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಗಂಭೀರ್ ಅವರ ಕೋಚ್ ಸ್ಥಾನ ನಿರ್ಧಾರವಾಗಲಿದೆ.
3 / 5
ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ತಂಡ ಹೀನಾಯ ಪ್ರದರ್ಶನ ನೀಡಿದರೆ, ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಗಂಭೀರ್ ಅವರನ್ನು ಕೆಳಗಿಳಿಸುವ ಸಾಧ್ಯತೆ ಹೆಚ್ಚು. ಒಂದು ವೇಳೆ ಸೆಮಿಫೈನಲ್ ಮತ್ತು ಫೈನಲ್ವರೆಗೆ ಉತ್ತಮ ಪ್ರದರ್ಶನ ನೀಡಿದರೆ, 2027ರ ಏಕದಿನ ವಿಶ್ವಕಪ್ವರೆಗೆ ಅವರು ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
4 / 5
ಅಂದರೆ ಗೌತಮ್ ಗಂಭೀರ್ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ಅಗ್ನಿ ಪರೀಕ್ಷೆ ಎನ್ನಬಹುದು. ಏಕೆಂದರೆ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡವು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಅದರಲ್ಲೂ ಅವರ ಗರಡಿಯಲ್ಲಿ ಭಾರತ ತಂಡ ಅತ್ಯಂತ ಹೀನಾಯ ಸೋಲಗಳನ್ನು ಅನುಭವಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.
5 / 5
ಇದರ ಜೊತೆ ಗೌತಮ್ ಗಂಭೀರ್ ಹಾಗೂ ಹಿರಿಯ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿನ ಭಾರತ ತಂಡದ ಪ್ರದರ್ಶನದ ಆಧಾರದ ಮೇಲೆ ಗೌತಮ್ ಗಂಭೀರ್ ಅವರ ಕೋಚ್ ಹುದ್ದೆಯ ಭವಿಷ್ಯ ನಿರ್ಧಾರವಾಗಲಿದೆ.