ಇದೀಗ ವಿಶ್ರಾಂತಿಯಲ್ಲಿರುವ ಜಡೇಜಾ ಮುಂಬರುವ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಇದೇ ತಿಂಗಳು ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಜಡೇಜಾ ಅವರ ಗಾಯದ ಚೇತರಿಕೆ ಬಗ್ಗೆ ಅಪ್ಡೇಟ್ ಪಡೆಯಲಿದ್ದು, ಗಾಯ ವಾಸಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿದ್ದರೆ ತಂಡದಿಂದ ಕೈ ಬಿಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.