Team India: ರಾಹುಲ್​ಗಿಂತ ಶಮಿ ಬೆಸ್ಟ್​, ಕೊಹ್ಲಿಗಿಂತ ಅಕ್ಷರ್ ಉತ್ತಮ: ಇಲ್ಲಿದೆ ಟೆಸ್ಟ್ ರನ್ ಸರಾಸರಿ ಪಟ್ಟಿ

| Updated By: ಝಾಹಿರ್ ಯೂಸುಫ್

Updated on: Feb 26, 2023 | 2:47 PM

Team India: ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸಂಪೂರ್ಣ ವಿಫಲರಾಗಿರುವ ಕೆಲ ಆಟಗಾರರಿಗೆ ಮೂರನೇ ಟೆಸ್ಟ್​ನಲ್ಲಿ ಕೊನೆಯ ಚಾನ್ಸ್ ನೀಡಬಹುದು. ಇದರಲ್ಲೂ ವಿಫಲರಾದರೆ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚು.

1 / 13
India vs Australia Test: ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ಭರದಿಂದ ಸಾಗುತ್ತಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. 4 ಪಂದ್ಯಗಳ ಸರಣಿಯ ಮೂರನೇ ಪಂದ್ಯವು ಮಾರ್ಚ್ 1 ರಿಂದ ಶುರುವಾಗಲಿದೆ. ವಿಶೇಷ ಎಂದರೆ ಈ ಸರಣಿಯ ಕೊನೆಯ ಎರಡು ಪಂದ್ಯಗಳ ಮೂಲಕ ಕೆಲ ಆಟಗಾರರ ಭವಿಷ್ಯ ಕೂಡ ನಿರ್ಧಾರವಾಗಲಿದೆ.

2 / 13
ಏಕೆಂದರೆ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸಂಪೂರ್ಣ ವಿಫಲರಾಗಿರುವ ಕೆಲ ಆಟಗಾರರಿಗೆ ಮೂರನೇ ಟೆಸ್ಟ್​ನಲ್ಲಿ ಕೊನೆಯ ಚಾನ್ಸ್ ನೀಡಬಹುದು. ಇದರಲ್ಲೂ ವಿಫಲರಾದರೆ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಅದರಲ್ಲೂ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ.

3 / 13
ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯವು ಕಳೆದ ಒಂದು ವರ್ಷದಿಂದ ಮುಂದುವರೆದಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್​ನಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

4 / 13
ರವೀಂದ್ರ ಜಡೇಜಾ: ವಿಶ್ವದ ನಂಬರ್ ಒನ್ ಟೆಸ್ಟ್ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿರುವ ರವೀಂದ್ರ ಜಡೇಜಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜಡ್ಡು ಕಳೆದ ವರ್ಷದಲ್ಲಿ ಟೆಸ್ಟ್ ಮಾದರಿಯಲ್ಲಿ 70.7 ಸರಾಸರಿ ಹೊಂದಿದ್ದಾರೆ. ಅಂದರೆ ಒಟ್ಟಾರೆ ರನ್​ಗಳಿಕೆಯನ್ನು ಪ್ರತಿ ಪಂದ್ಯದ ಸರಾಸರಿಯಲ್ಲಿ ವಿಭಜಿಸಿದರೆ ಜಡೇಜಾ 70 ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ.

5 / 13
ರಿಷಭ್ ಪಂತ್: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಪ್ರಸ್ತುತ ತಂಡದಲ್ಲಿಲ್ಲ. ಇದಾಗ್ಯೂ ಕಳೆದ ಒಂದು ವರ್ಷದಲ್ಲಿ ಅವರು 67 ರ ಸರಾಸರಿಯಲ್ಲಿ ರನ್ ಪೇರಿಸಿರುವುದು ವಿಶೇಷ.

6 / 13
ಶ್ರೇಯಸ್ ಅಯ್ಯರ್: ಆಸ್ಟ್ರೇಲಿಯಾ ಸರಣಿಯ ಎರಡನೇ ಪಂದ್ಯದಲ್ಲಿ ಗಾಯದಿಂದ ವಾಪಸಾದ ಶ್ರೇಯಸ್ ಅಯ್ಯರ್ ಕೂಡ ಟೆಸ್ಟ್ ಕ್ರಿಕೆಟ್​ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದರಂತೆ ಕಳೆದ ವರ್ಷದಲ್ಲಿ ಅಯ್ಯರ್ 48.7 ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ.

7 / 13
ಚೇತೇಶ್ವರ್ ಪೂಜಾರ: ಟೀಮ್ ಇಂಡಿಯಾದ ಟೆಸ್ಟ್​ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷದಲ್ಲಿ ಅವರು 48.2 ರನ್ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.

8 / 13
ರವಿಚಂದ್ರನ್ ಅಶ್ವಿನ್: ಪ್ರಸ್ತುತ ಟೆಸ್ಟ್ ಶ್ರೇಯಾಂಕದಲ್ಲಿ ವಿಶ್ವದ 2ನೇ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು 37 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.

9 / 13
ಅಕ್ಷರ್ ಪಟೇಲ್: ಟೀಮ್ ಇಂಡಿಯಾದ ಯುವ ಆಲ್​ರೌಂಡರ್ ಅಕ್ಷರ್ ಪಟೇಲ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಕಳೆದ 12 ತಿಂಗಳಲ್ಲಿ ಅಕ್ಷರ್ 32.6 ರನ್ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.

10 / 13
ಮೊಹಮ್ಮದ್ ಶಮಿ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ರನ್​ಗಳಿಕೆಯ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಶಮಿ ಕಳೆದೊಂದು ವರ್ಷದಲ್ಲಿ 21.8 ಸರಾಸರಿಯಲ್ಲಿ ಸ್ಕೋರ್​ಗಳಿಸಿದ್ದಾರೆ.

11 / 13
ವಿರಾಟ್ ಕೊಹ್ಲಿ: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವುದೇ ಅಚ್ಚರಿ. ಕಳೆದೊಂದು ವರ್ಷದಲ್ಲಿ ಟೆಸ್ಟ್​ನಲ್ಲಿ ಕೇವಲ 21.2 ರನ್ ಸರಾಸರಿಯಲ್ಲಿ ಮಾತ್ರ ಕೊಹ್ಲಿ ರನ್​ಗಳಿಸಿದ್ದಾರೆ.

12 / 13
ಕೆಎಲ್ ರಾಹುಲ್: ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ 9ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕಳೆದೊಂದು ವರ್ಷದಲ್ಲಿ ಕೇವಲ 13.6 ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಇದಾಗ್ಯೂ ರಾಹುಲ್​ಗೆ ಸತತವಾಗಿ ಅವಕಾಶ ನೀಡುತ್ತಿರುವ ಬಗ್ಗೆ ಇದೀಗ ಪ್ರಶ್ನೆಗಳೆದ್ದಿವೆ.

13 / 13
ಈ ಅಂಕಿ ಅಂಶಗಳನ್ನು ಗಮನಿಸಿದರೆ, ಕಳೆದೊಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್​ನಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳೇ ಹೆಚ್ಚು ರನ್​ಗಳಿಸಿದ್ದಾರೆ. ಅದರಲ್ಲೂ ಆಲ್​ರೌಂಡರ್​ಗಳು ಮಿಂಚಿರುವುದು ಸ್ಪಷ್ಟ. ಅದೇ ಸಮಯದಲ್ಲಿ ಅಗ್ರ ಕ್ರಮಾಂಕದ ಕೆಲ ಅಗ್ರ ಬ್ಯಾಟ್ಸ್‌ಮನ್‌ಗಳ ಸರಾಸರಿ ಬೌಲರ್‌ಗಳಿಗಿಂತ ಕಡಿಮೆ ಇರುವುದೇ ಅಚ್ಚರಿ..!

Published On - 2:45 pm, Sun, 26 February 23