AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೊಸ ತಂಡದ ವಿರುದ್ಧ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ

Asia Cup 2025: ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತ ತಂಡವು ಪಾಕಿಸ್ತಾನ್, ಯುಎಇ ಹಾಗೂ ಒಮಾನ್ ತಂಡಗಳನ್ನು ಎದುರಿಸಲಿದೆ. ಈ ಮೂರು ತಂಡಗಳ ವಿರುದ್ಧ ಗೆಲುವು ದಾಖಲಿಸಿದರೆ ಟೀಮ್ ಇಂಡಿಯಾ ಸೂಪತರ್-4 ಹಂತಕ್ಕೇರಲಿದೆ.

ಝಾಹಿರ್ ಯೂಸುಫ್
|

Updated on: Aug 24, 2025 | 8:24 AM

Share
ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಶುರುವಾಗಿ ಬರೋಬ್ಬರಿ 93 ವರ್ಷಗಳಾಗಿವೆ. ಈ 93 ವರ್ಷಗಳಲ್ಲಿ ಟೀಮ್ ಇಂಡಿಯಾ ಹಲವು ತಂಡಗಳನ್ನು ಎದುರಿಸಿದೆ. ಆದರೆ ಇದೇ ಮೊದಲ ಬಾರಿಗೆ ಏಷ್ಯಾದ ತಂಡವೊಂದರ ವಿರುದ್ಧ ಕಣಕ್ಕಿಳಿಯಲು ಸೂರ್ಯಕುಮಾರ್ ಯಾದವ್ ಪಡೆ ಸಜ್ಜಾಗುತ್ತಿದೆ. ಅದು ಕೂಡ ಏಷ್ಯಾಕಪ್​ನಲ್ಲಿ..!

1 / 6
ಹೌದು, ಭಾರತ ತಂಡವು ಇದೇ ಮೊದಲ ಬಾರಿಗೆ ಒಮಾನ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಅಂದರೆ ಕಳೆದ 93 ವರ್ಷಗಳಲ್ಲಿ ಒಮಾನ್ ತಂಡವು ಒಮ್ಮೆಯೂ ಟೀಮ್ ಇಂಡಿಯಾಗೆ ಎದುರಾಳಿಯಾಗಿ ಸಿಕ್ಕಿರಲಿಲ್ಲ. ಆದರೆ ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಒಮಾನ್ ತಂಡವು ಅರ್ಹತೆ ಪಡೆದುಕೊಂಡಿದೆ.

2 / 6
ಅದರಂತೆ ಏಷ್ಯಾಕಪ್​ 2025ರ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಒಮಾನ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಒಮಾನ್ ಪಾಲಿಗೆ ಸ್ಮರಣೀಯ ಮ್ಯಾಚ್. ಏಕೆಂದರೆ 2014 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಒಮಾನ್ ತಂಡವು ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ತಂಡವನ್ನು ಎದುರಿಸುತ್ತಿದೆ. ಹೀಗಾಗಿ ಸೆಪ್ಟೆಂಬರ್ 19 ಒಮಾನ್ ಕ್ರಿಕೆಟ್​ ಪಾಲಿಗೆ ಸ್ಮರಣೀಯ ದಿನವಾಗಿ ಮಾರ್ಪಡಲಿದೆ. ಇನ್ನು ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ವೇಳಾಪಟ್ಟಿ ಈ ಕೆಳಗಿನಂತಿದೆ…

3 / 6
ಸೆಪ್ಟೆಂಬರ್ 10: ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 10 ರಂದು ದುಬೈನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ 2025 ರಲ್ಲಿ ಶುಭಾರಂಭ ಮಾಡಲಿದೆ.

4 / 6
ಸೆಪ್ಟೆಂಬರ್ 14: ಟೀಮ್ ಇಂಡಿಯಾದ ಎರಡನೇ ಎದುರಾಳಿ ಪಾಕಿಸ್ತಾನ್. ಇಂಡೋ-ಪಾಕ್ ನಡುವಣ ಈ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈನ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ಜರುಗಲಿದೆ.

5 / 6
ಸೆಪ್ಟೆಂಬರ್ 19: ಭಾರತ ತಂಡವು ತನ್ನ ಮೂರನೇ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ. ಸೆಪ್ಟೆಂಬರ್ 19 ರಂದು ಅಬುಧಾಬಿಯಲ್ಲಿ ಜರುಗಲಿರುವ ಈ ಮ್ಯಾಚ್​ನಲ್ಲೂ ಟೀಮ್ ಇಂಡಿಯಾ ಗೆಲ್ಲುವ ನಿರೀಕ್ಷೆಯಿದೆ. ಈ ಮೂರು ಪಂದ್ಯಗಳಲ್ಲಿ ಭಾರತ ತಂಡವು 2 ಜಯ ಸಾಧಿಸಿದರೆ ಸೂಪರ್-4 ಹಂತಕ್ಕೇರಲಿದೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ