Team India: 55 ವರ್ಷಗಳ ಬಳಿಕ ಯಾಕೆ ಹೀಗಾಯ್ತು..!

Team India: ಭಾರತದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಝಿಲೆಂಡ್ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಐತಿಹಾಸಿಕ ಸರಣಿ ಗೆಲುವಿನೊಂದಿಗೆ ಕಿವೀಸ್ ಪಡೆ ತವರಿಗೆ ಹಿಂತಿರುಗಿದರೆ, ಇತ್ತ ಭಾರತ ತಂಡವು ತವರಿನಲ್ಲಿ ಹೀನಾಯ ದಾಖಲೆಯೊಂದನ್ನು ಬರೆದಿದೆ.

|

Updated on: Nov 06, 2024 | 8:30 AM

ಕೋಚ್ ಗೌತಮ್ ಗಂಭೀರ್ ಕೇಳಿದ ತಂಡ, ನಾಯಕ ರೋಹಿತ್ ಶರ್ಮಾ ಅವರ ಮಾಸ್ಟರ್ ಪ್ಲ್ಯಾನ್, ತಂಡದಲ್ಲಿ ಅನುಭವಿ/ಯುವ ಆಟಗಾರರ ಸಮತೋಲನ... ಹೀಗಿದ್ದರೂ ತವರಿನಲ್ಲಿ ಭಾರತ ತಂಡ 55 ವರ್ಷಗಳ ಬಳಿಕ ಒಂದೇ ವರ್ಷ 4 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಅಂದರೆ ಕಳೆದ ಐವತ್ತೈದು ವರ್ಷಗಳಲ್ಲಿ ಕಂಡರಿಯದಂತೆ ಟೀಮ್ ಇಂಡಿಯಾ ತವರಿನಲ್ಲಿ ಮುಗ್ಗರಿಸಿದೆ.

1 / 6
ಇದಕ್ಕೂ ಮುನ್ನ 1969 ರಲ್ಲಿ ಭಾರತ ತಂಡ ತವರಿನಲ್ಲಿ ಒಂದೇ ವರ್ಷ 4 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಆ ವರ್ಷ ಒಟ್ಟು 8 ಪಂದ್ಯಗಳನ್ನಾಡಿದ್ದ ಟೀಮ್ ಇಂಡಿಯಾ 2 ಮ್ಯಾಚ್ ಗಳಲ್ಲಿ ಗೆದ್ದರೆ, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಅಲ್ಲದೆ 4 ಪಂದ್ಯಗಳಲ್ಲಿ ಸೋಲುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

2 / 6
ಇದಾಗಿ ಬರೋಬ್ಬರಿ 55 ವರ್ಷಗಳ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷ 4 ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿದೆ. ಈ ನಾಲ್ಕು ಪಂದ್ಯಗಳಲ್ಲಿ ಒಂದು ಮ್ಯಾಚ್ ಇಂಗ್ಲೆಂಡ್ ವಿರುದ್ಧ ಸೋತರೆ, ಉಳಿದ ಮೂರು ಪಂದ್ಯಗಳನ್ನು ನ್ಯೂಝಿಲೆಂಡ್ ವಿರುದ್ಧ ಸೋತಿದೆ. ಹೀಗಾಗಿಯೇ ಈ ಬಾರಿ ಭಾರತ ತಂಡದ ಪ್ರದರ್ಶನ ಅತ್ಯಂತ ಕೆಳಮಟ್ಟದಲ್ಲಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

3 / 6
ಈ ವಿಶ್ಲೇಷಣೆ ಸರಿಯಾಗಿದೆ ಎಂಬುದಕ್ಕೆ  ನ್ಯೂಝಿಲೆಂಡ್ ತಂಡದ ಸರಣಿ ಗೆಲುವು ಸಾಕ್ಷಿ. ಏಕೆಂದರೆ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ಒಮ್ಮೆಯೂ ತವರಿನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತಿರಲಿಲ್ಲ. ಆದರೆ ಈ ಬಾರಿ ಇತಿಹಾಸ ರಚಿಸುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ.

4 / 6
ಅದು ಕೂಡ 3-0 ಅಂತರದಿಂದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ. ಅಂದರೆ, ಭಾರತ ತಂಡವು ಇದೇ ಮೊದಲ ಬಾರಿಗೆ ತವರಿನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುವಿಸಿದೆ. ಹೀಗಾಗಿಯೇ ಎಲ್ಲವೂ ಇದ್ದು, ತವರಿನಲ್ಲಿ ಬೇಕಾದಂತಹ ಪಿಚ್ ಸಹ ಇದ್ದು... 55 ವರ್ಷಗಳ ಬಳಿಕ ಯಾಕೆ ಹೀಗಾಯ್ತು ಎಂಬ ಪ್ರಶ್ನೆ ಎದುರಾಗಿದೆ.

5 / 6
ಪ್ರಶ್ನೆಯ ನಡುವೆಯೇ ಇದೀಗ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಯ ಮೂಲಕ ಭಾರತದಲ್ಲಿನ ಸೋಲಿಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಉತ್ತರ ಕಂಡುಕೊಳ್ಳಲಿದೆಯಾ ಕಾದು ನೋಡಬೇಕಿದೆ.

6 / 6
Follow us
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?

Nithya Bhavishya: ಈ ರಾಶಿಯವರು ಇಂದು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವರು

ಬೆಂಗಳೂರಿನಲ್ಲಿ ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

ಕಾಲಿಗೆ ಸರಪಳಿ ಹಾಕಿದರೂ ಕೈದಿ ಪರಾರಿ; ಪೊಲೀಸರಿಗೆ ಟೆನ್ಷನ್

ಮಾನಸಾ ಬಗ್ಗೆ ನೆಗೆಟಿವ್ ಟ್ರೋಲ್; ಪ್ರತಿಕ್ರಿಯೆ ನೀಡಿದ ತುಕಾಲಿ ಸಂತೋಷ್

ತೆಲಂಗಾಣದ ಶಂಶಾಬಾದ್‌ನಲ್ಲಿ ಹನುಮಾನ್ ಮಂದಿರ ಧ್ವಂಸ

ಕುಮಾರಣ್ಣನ ನೋಟು ಯೋಗೇಶ್ವರ್​ಗೆ ವೋಟು ನಿಮ್ಮ ಮಂತ್ರವಾಗಿರಬೇಕು: ಸುರೇಶ್

ಹನುಮಂತ ಮುಗ್ಧನಾ? ಕಿಲಾಡಿಯಾ? ಬಿಗ್​ಬಾಸ್​ನಿಂದ ಹೊರಬಂದ ಮಾನಸ ಮಾತು

ನಾಗೇಂದ್ರ ಯಾರಿಗೂ ಮೋಸ ಮಾಡಿಲ್ಲ, ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಶಿವಕುಮಾರ

ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕಾಗಿ ಹೋರಾಡುತ್ತೇನೆ: ದೇವೇಗೌಡ