Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
T20 World Cup 2024: ಈ ಬಾರಿಯ ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಸರಣಿಗಳನ್ನು ಆಡಲಿದೆ. ಅಂದರೆ ಮುಂದಿನ ಐಪಿಎಲ್ವರೆಗೂ ಭಾರತ ತಂಡವು ಹಲವು ತಂಡಗಳ ವಿರುದ್ಧ ಮಹತ್ವದ ಸರಣಿಗಳಲ್ಲಿ ಕಣಕ್ಕಿಳಿಯಲಿದೆ.
1 / 10
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ (Team India) ಇದೀಗ ಟಿ20 ವಿಶ್ವಕಪ್ಗಾಗಿ ಸಿದ್ಧತೆಗಳನ್ನು ಆರಂಭಿಸಿದೆ. ಮುಂದಿನ ತಿಂಗಳಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನ ಒಂದು ತಿಂಗಳುಗಳ ಕಾಲ ನಡೆಯಲಿದ್ದು, ಇದಾದ ಬಳಿಕ ಭಾರತ ತಂಡವು ಹಲವು ಸರಣಿಗಳನ್ನು ಆಡಲಿದೆ. ಅದರಂತೆ ಮುಂದಿನ ಐಪಿಎಲ್ವರೆಗಿನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ...
2 / 10
ಟಿ20 ವಿಶ್ವಕಪ್ 2024: ಜೂನ್ 2 ರಿಂದ ಜೂನ್ 29 ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ವೆಸ್ಟ್ ಇಂಡೀಸ್-ಯುಎಸ್ಎ ಆತಿಥ್ಯವಹಿಸಲಿರುವ ಈ ವಿಶ್ವಕಪ್ ಬಳಿಕವಷ್ಟೇ ಭಾರತ ತಂಡ ಸರಣಿ ಆಡಲಿದೆ.
3 / 10
ಭಾರತ vs ಝಿಂಬಾಬ್ವೆ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಝಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಗಾಗಿ ತೆರಳಲಿದೆ. ಜುಲೈ 6 ರಿಂದ ಶುರುವಾಗಲಿರುವ ಈ ಸರಣಿಯು ಜುಲೈ 14 ಕ್ಕೆ ಮುಗಿಯಲಿದೆ.
4 / 10
ಭಾರತ vs ಶ್ರೀಲಂಕಾ: ಭಾರತ ತಂಡವು ಶ್ರೀಲಂಕಾ ವಿರುದ್ಧ 6 ಪಂದ್ಯಗಳ ಸರಣಿ ಆಡಲಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಉಭಯ ತಂಡಗಳು 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. ಈ ಪಂದ್ಯಕ್ಕೆ ಶ್ರೀಲಂಕಾ ಆತಿಥ್ಯವಹಿಸಲಿದೆ.
5 / 10
ಭಾರತ vs ಬಾಂಗ್ಲಾದೇಶ್: ಸೆಪ್ಟೆಂಬರ್ ತಿಂಗಳಲ್ಲಿ ಭಾರತ ತಂಡವು ಬಾಂಗ್ಲಾದೇಶ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಪಂದ್ಯಗಳು ಭಾರತದಲ್ಲೇ ನಡೆಯಲಿದೆ.
6 / 10
ಭಾರತ vs ನ್ಯೂಝಿಲೆಂಡ್: ಅಕ್ಟೋಬರ್ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಸರಣಿಗೂ ಭಾರತವೇ ಆತಿಥ್ಯವಹಿಸಲಿದೆ.
7 / 10
ಭಾರತ vs ಆಸ್ಟ್ರೇಲಿಯಾ: ನವೆಂಬರ್-ಡಿಸೆಂಬರ್ನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ನಡೆಯಲಿದ್ದು, ಈ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ ಸರಣಿಯು ಆಸ್ಟ್ರೇಲಿಯಾದಲ್ಲಿ ಜರುಗಲಿದೆ.
8 / 10
ಭಾರತ vs ಇಂಗ್ಲೆಂಡ್: 2025 ರಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಮೊದಲ ಸರಣಿ ಆಡಲಿದೆ. ಜನವರಿ-ಫೆಬ್ರವರಿ ನಡುವೆ ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ, 5 ಟಿ20 ಪಂದ್ಯಗಳನ್ನಾಡಲಿದೆ.
9 / 10
ಚಾಂಪಿಯನ್ಸ್ ಟ್ರೋಫಿ 2025: ಫೆಬ್ರವರಿ-ಮಾರ್ಚ್ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ.
10 / 10
ಐಪಿಎಲ್ 2025: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಸೀಸನ್ ಜರುಗಲಿದೆ.
Published On - 7:23 am, Thu, 30 May 24