- TV9 Kannada Kannada News Photos Cricket Photos RCB celebrated like they won the IPL 2024: Ambati Rayudu
RCB ಕಪ್ ಗೆದ್ದೋರ ಥರ ಆಡಿದ್ರು: ಅಂಬಾಟಿ ರಾಯುಡು ವ್ಯಂಗ್ಯ
IPL 2024 RCB: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 15 ಪಂದ್ಯಗಳನ್ನಾಡಿದೆ. ಈ ಹದಿನೈದು ಮ್ಯಾಚ್ಗಳಲ್ಲಿ ಆರ್‌ಸಿಬಿ ಗೆದ್ದಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ಇದಾಗ್ಯೂ ಸಿಎಸ್ಕೆ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೋಲನುಭವಿಸಿತು.
Updated on: May 30, 2024 | 12:07 PM

ಐಪಿಎಲ್ ಸೀಸನ್ 17 ಮುಕ್ತಾಯವಾಗಿದೆ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟಾರ್ಗೆಟ್ ಮಾಡುತ್ತಿರುವುದು ಮಾತ್ರ ನಿಂತಿಲ್ಲ. ಈ ಹಿಂದೆ ಹಲವು ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದ ರಾಯುಡು ಇದೀಗ ಆರ್‌ಸಿಬಿ ತಂಡದ ಸಂಭ್ರಮವನ್ನು ವ್ಯಂಗ್ಯವಾಡಿದ್ದಾರೆ.

ಮೇ 19 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ತಂಡ 27 ರನ್ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಆರ್‌ಸಿಬಿ ಆಟಗಾರರು ಸಖತ್ತಾಗೇ ಸಂಭ್ರಮಿಸಿದ್ದರು.

ಚಾನೆಲ್ ಚರ್ಚೆಯೊಂದರಲ್ಲಿ ಈ ಸಂಭ್ರಮವನ್ನು ವ್ಯಂಗ್ಯವಾಡಿ ಮಾತನಾಡಿದ ರಾಯುಡು, ಆ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಶೇಕ್ ಹ್ಯಾಂಡ್ ಮಾಡಲು ಕಾಯುತ್ತಿದ್ದರು. ಆದರೆ ಆರ್‌ಸಿಬಿ ಆಟಗಾರರ ಸಂಭ್ರಮ ನೋಡಿದ್ರೆ ಕಪ್ ಗೆದ್ದವರ ಥರ ಆಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಕೇವಲ ಒಂದು ಪಂದ್ಯ ಗೆಲ್ಲುವಷ್ಟರಲ್ಲಿ ಕಪ್ ಗೆದ್ದಂತೆ ಆಡಿದ್ರೆ ಹೆಂಗೆ, ನೀವು ಮೊದಲು ಧೋನಿಗೆ ಶೇಕ್ ಹ್ಯಾಂಡ್ ಮಾಡ್ಬೇಕಿತ್ತು. ಅದು ನೀವು ತೋರಿಸಬೇಕಾಗಿದ್ದ ಗೌರವ. ಆದರೆ ಆರ್‌ಸಿಬಿ ಆಟಗಾರರು ಪಂದ್ಯ ಗೆಲ್ಲುತ್ತಿದ್ದಂತೆ ಒಳ್ಳೆ ಕಪ್ ಗದ್ದೋರ ಥರ ಆಡ್ತಿದ್ದರು ಎಂದು ರಾಯುಡು ಕಿಚಾಯಿಸಿದ್ದಾರೆ.

ಒಂದು ಪಂದ್ಯ ಗೆದ್ದು ಕಪ್ ಗೆದ್ದೋರ ಥರ ಆಡಿದ್ರು ಈ ಬಾರಿ ಆರ್‌ಸಿಬಿ ಟ್ರೋಫಿ ಗೆದ್ದಿಲ್ಲ. ಅವರ ಸಂಭ್ರಮ ಆ ಪಂದ್ಯದಲ್ಲೇ ಕೊನೆಗೊಂಡಿತು. ಅಲ್ಲದೆ ಆರ್‌ಸಿಬಿ ಅವರು ಇನ್ನೂ ಕೂಡ ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ಅಂಬಾಟಿ ರಾಯುಡು ವ್ಯಂಗ್ಯದಿಂದ ಹೇಳಿದ್ದಾರೆ.

ಅಂದಹಾಗೆ ಮೇ 19 ರಂದು ನಡೆದ ಪಂದ್ಯವು ಆರ್‌ಸಿಬಿ-ಸಿಎಸ್ಕೆ ಪಾಲಿಗೆ ಪ್ಲೇಆಫ್ ಪ್ರವೇಶಕ್ಕೆ ನಿರ್ಣಾಯಕ ಪಂದ್ಯವಾಗಿತ್ತು. ಇದೇ ಕಾರಣದಿಂದ ಸಿಎಸ್ಕೆ ತಂಡವನ್ನು ಬಗ್ಗು ಬಡಿದು ಆರ್‌ಸಿಬಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಈ ಸಂಭ್ರಮವನ್ನೇ ಇದೀಗ ಅಂಬಾಟಿ ರಾಯುಡು ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



