AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧದ ಕುರಿತು ಮೌನ ಮುರಿದ ಗೌತಮ್ ಗಂಭೀರ್

Gautam Gambhir - Virat Kohli: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮುಖಾಮುಖಿಯಾದರೆ ಅಲ್ಲೊಂದಷ್ಟು ಕಿರಿಕ್, ಒಂದಷ್ಟು ದ್ವೇಷ ಮತ್ತೊಂದಷ್ಟು ವಾಗ್ವಾದ ಎಂಬುದು ಸಾಮಾನ್ಯವಾಗಿತ್ತು. ಹೀಗಾಗಿಯೇ RCB vs KKR ನಡುವಣ ಪಂದ್ಯವು ಎಲ್ ಪ್ರೈಮೆರೊ ಮ್ಯಾಚ್ ಆಗಿ ಗುರುತಿಸಿಕೊಂಡಿತ್ತು. ಈ ಹಿಂದೆ ಆರ್​ಸಿಬಿ-ಕೆಕೆಆರ್ ನಡುವಣ ಪಂದ್ಯದ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು. ಆದರೆ ಈ ಬಾರಿ ಇಬ್ಬರು ಅನೋನ್ಯವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: May 30, 2024 | 2:02 PM

Share
ವಿರಾಟ್ ಕೊಹ್ಲಿ (Virat Kohli) ಮತ್ತು ನನ್ನ ನಡುವಣ ಸಂಬಂಧ ಏನು ಎಂಬುದು ದೇಶಕ್ಕೆ ತಿಳಿಯಬೇಕಿಲ್ಲ. ಅದು ನಮ್ಮಿಬ್ಬರ ನಡುವಣ ಸಂಬಂಧ. ಅದನ್ನು ಇಡೀ ದೇಶದ ಮುಂದೆ ತೆರೆದಿಡಬೇಕಾದ ಅಗತ್ಯತೆಯು ಇಲ್ಲ ಎಂಬುದು ನನ್ನ ಅನಿಸಿಕೆ. ಹೀಗೆ ಹೇಳಿದ್ದು ಮತ್ಯಾರೂ ಅಲ್ಲ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir).

1 / 6
ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಕುರಿತಾದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ನನ್ನ ಮತ್ತು ಕೊಹ್ಲಿ ನಡುವೆ ಸಂಬಂಧ ಇಡೀ ದೇಶಕ್ಕೆ ತಿಳಿಯಬೇಕಿಲ್ಲ. ತಮ್ಮ ತಮ್ಮ ತಂಡಗಳನ್ನು ಗೆಲ್ಲುವಂತೆ ಮಾಡಲು ತನ್ನತನ ತೋರಿಸಲು ಇಬ್ಬರಿಗೂ ಹಕ್ಕಿದೆ. ಹೀಗಾಗಿ ಇಬ್ಬರೂ ಅಗ್ರೆಸಿವ್ ಆಗಿ ಕಾಣಿಸಿಕೊಂಡೆವು ಅಷ್ಟೇ ಎಂದು ಗಂಭೀರ್ ಹೇಳಿದ್ದಾರೆ.

2 / 6
ನಮ್ಮಿಬ್ಬರ ಸಂಬಂಧವು ನಿಮ್ಮೆಲ್ಲರ ಗ್ರಹಿಕೆಯ ವಾಸ್ತವದಿಂದ ತುಂಬಾ ದೂರವಿದೆ. ವಿರಾಟ್ ಕೊಹ್ಲಿಯೊಂದಿಗಿನ ನನ್ನ ಸಂಬಂಧಕ್ಕೆ ಸಾರ್ವಜನಿಕರು ಮಸಾಲಾ ಸೇರಿಸಿದರು. ಹಲವು ಸುದ್ದಿಗಳು ಸೃಷ್ಟಿಯಾದವು. ಆದರೆ ನಾವಿಬ್ಬರೂ ಹಾಗೆ ಇಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

3 / 6
ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ-ಕೆಕೆಆರ್ ನಡುವಣ ಪಂದ್ಯವು ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಕಾರಣದಿಂದ ಕುತೂಹಲದ ಕೇಂದ್ರವಾಗಿತ್ತು. ಆದರೆ ಪಂದ್ಯದ ನಡುವೆ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದರು. ಅಲ್ಲದೆ ಇದಾದ ಬಳಿಕ ಕೊಲ್ಕತ್ತಾದಲ್ಲಿ ನಡೆದ ಪಂದ್ಯದ ವೇಳೆ ಗಂಭೀರ್ ಮತ್ತು ಕೊಹ್ಲಿ ಜೊತೆಯಾಗಿ ಹರಟೆ ಹೊಡೆಯುತ್ತಿರುವುದು ಕೂಡ ಕಂಡು ಬಂತು.

4 / 6
ಈ ಎಲ್ಲಾ ಕಾರಣಗಳಿಂದಾಗಿಯೇ ಗೌತಮ್ ಗಂಭೀರ್, ನಿಮ್ಮ ಗ್ರಹಿಕೆಗಿಂತಲೂ ನಾನು ಮತ್ತು ವಿರಾಟ್ ಕೊಹ್ಲಿ ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಪುಷ್ಠೀಕರಿಸುವಂತೆ ಈ ಬಾರಿಯ ಐಪಿಎಲ್​ನಲ್ಲೂ ದೆಹಲಿಯ ಇಬ್ಬರು ಕ್ರಿಕೆಟಿಗರು ತುಂಬಾ ಅನೋನ್ಯವಾಗಿ ಕಾಣಿಸಿಕೊಂಡಿದ್ದರು.

5 / 6
ಇದೀಗ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಗೌತಮ್ ಗಂಭೀರ್ ಶ್ರೀಘ್ರದಲ್ಲೇ ಟೀಮ್ ಇಂಡಿಯಾದ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಗಂಭೀರ್-ಕೊಹ್ಲಿ ಜಗಲ್​ಬಂಧಿಯಲ್ಲಿ ಭಾರತ ತಂಡವು ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

6 / 6
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ