AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tilak Varma: ಏಷ್ಯಾಕಪ್ ಹೀರೋ ತಿಲಕ್ ವರ್ಮಾಗೆ ಒಲಿದ ನಾಯಕತ್ವ ಪಟ್ಟ

Tilak Varma Leads Hyderabad: ಏಷ್ಯಾಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ, ಇದೀಗ ಹೈದರಾಬಾದ್ ರಣಜಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. 2025ರ ರಣಜಿ ಟ್ರೋಫಿಗೆ ಹೈದರಾಬಾದ್ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದ್ದು, ತಿಲಕ್‌ಗೆ ನಾಯಕತ್ವದ ಜವಾಬ್ದಾರಿ ನೀಡಿದೆ. 22 ಪ್ರಥಮ ದರ್ಜೆ ಪಂದ್ಯಗಳಲ್ಲಿ 7 ಶತಕಗಳೊಂದಿಗೆ 1,562 ರನ್ ಗಳಿಸಿರುವ ತಿಲಕ್, ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಭರವಸೆ ಮೂಡಿಸಿದ್ದಾರೆ.

ಪೃಥ್ವಿಶಂಕರ
|

Updated on: Oct 10, 2025 | 9:18 PM

Share
ಟೀಂ ಇಂಡಿಯಾದ ಯುವ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಕೆಲವೇ ದಿನಗಳ ಹಿಂದೆ ನಡೆದ ಏಷ್ಯಾಕಪ್ 2025 ರ ಫೈನಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಇನ್ನಿಂಗ್ಸ್ ಆಡಿದರು. ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ತಿಲಕ್ ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ಏಷ್ಯಾಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

1 / 7
ಇದೀಗ ಏಷ್ಯಾಕಪ್ ಹೀರೋ ತಿಲಕ್ ವರ್ಮಾ ಅವರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ತಿಲಕ್ ಅವರನ್ನು ರಣಜಿ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಹೈದರಾಬಾದ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಪ್ರಸ್ತುತ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಅದಾದ ನಂತರ, ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ.

2 / 7
ಏತನ್ಮಧ್ಯೆ, ಭಾರತದಲ್ಲಿ ರಣಜಿ ಟ್ರೋಫಿ 2025 ಪಂದ್ಯಾವಳಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹೀಗಾಗಿ ಈ ದೇಶೀ ಟೂರ್ನಿ ರಣಜಿ ಟ್ರೋಫಿಗೆ ಹೈದರಾಬಾದ್ ಕ್ರಿಕೆಟ್ ಮಂಡಳಿ ಮೊದಲ 3 ಪಂದ್ಯಗಳಿಗೆ ತಂಡವನ್ನು ಘೋಷಿಸಿದೆ. ತಂಡದಲ್ಲಿ 15 ಆಟಗಾರರನ್ನು ಆಯ್ಕೆ ಮಾಡಿದೆ. 5 ಆಟಗಾರರಿಗೆ ಮೀಸಲು ಆಟಗಾರರಾಗಿ ಅವಕಾಶ ನೀಡಲಾಗಿದೆ.

3 / 7
ತಿಲಕ್ ವರ್ಮಾ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ. ರಾಹುಲ್ ಸಿಂಗ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ರೋಹಿತ್ ರಾಯುಡು ತಿಲಕ್ ವರ್ಮಾ ನೇತೃತ್ವದಲ್ಲಿ ಆಡಲಿದ್ದಾರೆ. ಅಲ್ಲದೆ, ಆಯ್ಕೆ ಸಮಿತಿಯು ಈ ಟೂರ್ನಿಗೆ ಅನೇಕ ಯುವ ಆಟಗಾರರಿಗೆ ಅವಕಾಶ ನೀಡಿದೆ.

4 / 7
ಈ ಟೂರ್ನಿಯಲ್ಲಿ ಹೈದರಾಬಾದ್ ತಂಡವು ತನ್ನ ಮೊದಲ 3 ಪಂದ್ಯಗಳಲ್ಲಿ ದೆಹಲಿ, ಪುದುಚೇರಿ ಮತ್ತು ಹಿಮಾಚಲ ಪ್ರದೇಶ ತಂಡಗಳನ್ನು ಎದುರಿಸಲಿದೆ. ತಿಲಕ್ ವರ್ಮಾ ನಾಯಕತ್ವದಲ್ಲಿ ಹೈದರಾಬಾದ್ ತಂಡ ಹೇಗೆ ಪ್ರದರ್ಶನ ನೀಡುತ್ತದೆ? ನೋಡಲು ಆಸಕ್ತಿದಾಯಕವಾಗಿರುತ್ತದೆ.

5 / 7
ತನ್ಮಧ್ಯೆ, ತಿಲಕ್ ವರ್ಮಾ ಇದುವರೆಗೆ 22 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ 22 ಪಂದ್ಯಗಳಲ್ಲಿ ತಿಲಕ್ 52 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 1,562 ರನ್ ಗಳಿಸಿದ್ದಾರೆ. ತಿಲಕ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7 ಶತಕಗಳು ಮತ್ತು 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ ತಿಲಕ್ 8 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

6 / 7
ಹೈದರಾಬಾದ್ ತಂಡ: ತಿಲಕ್ ವರ್ಮಾ (ನಾಯಕ), ರಾಹುಲ್ ಸಿಂಗ್ (ಉಪನಾಯಕ), ಸಿವಿ ಮಿಲಿಂದ್, ತನ್ಮಯ್ ಅಗರ್ವಾಲ್, ಎಂ ಅಭಿರತ್ ರೆಡ್ಡಿ, ಹಿಮ್ತೇಜ, ವರುಣ್ ಗೌಡ್, ತನಯ್ ತ್ಯಾಗರಾಜನ್, ರೋಹಿತ್ ರಾಯುಡು, ಸರನು ನಿಶಾಂತ್, ಪುನ್ನಯ್ಯ, ಅನಿಕೇತ್ ರೆಡ್ಡಿ, ಕಾರ್ತಿಕೇಯ ಕಾಕಂದ್ ಎ. ರಾದೇಶ್ (ವಿಕೆಟ್ ಕೀಪರ್). ಮೀಸಲು ಆಟಗಾರರು: ಪಿ.ನಿತೀಶ್ ರೆಡ್ಡಿ, ಸಾಯಿ ಪ್ರಜ್ಞಾ ರೆಡ್ಡಿ, ರಕ್ಷಣಾ ರೆಡ್ಡಿ, ನಿತೇಶ್ ಕನಾಲಾ ಮತ್ತು ಮಿಖಿಲ್ ಜೈಸ್ವಾಲ್.

7 / 7