ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡಕ್ಕೆ ಟಿಮ್ ಡೇವಿಡ್ ಎಂಟ್ರಿ..!
Tim David: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 12 ಪಂದ್ಯಗಳನ್ನಾಡಿದ್ದ ಟಿಮ್ ಡೇವಿಡ್ 9 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದರು. ಈ ವೇಳೆ 14 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ ಒಟ್ಟು 187 ರನ್ ಕಲೆಹಾಕಿದ್ದರು. ಈ ಮೂಲಕ ಆರ್ಸಿಬಿ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Updated on:Jun 19, 2025 | 12:13 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಟಿಮ್ ಡೇವಿಡ್ ಇದೀಗ ಮತ್ತೊಂದು ಲೀಗ್ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಅದು ಕೂಡ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡದ ಪರ ಎಂಬುದು ವಿಶೇಷ.

ಆಗಸ್ಟ್ 15 ರಿಂದ ಶುರುವಾಗಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟಿಮ್ ಡೇವಿಡ್ ಸೇಂಟ್ ಲೂಸಿಯಾ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಸೇಂಟ್ ಲೂಸಿಯಾ ಕಿಂಗ್ಸ್ ಐಪಿಎಲ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ತಂಡ. ಈ ಫ್ರಾಂಚೈಸಿಯು ಇದೀಗ ಟಿಮ್ ಡೇವಿಡ್ ಅವರನ್ನು ಮುಂದಿನ ಸೀಸನ್ಗಾಗಿ ಲೂಸಿಯಾ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

ಈ ಹಿಂದೆ ಟಿಮ್ ಡೇವಿಡ್ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಈ ಮೂಲಕ ಭರ್ಜರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ನ 13ನೇ ಸೀಸನ್ಗಾಗಿ ಡ್ರಾಫ್ಟ್ ಪ್ರಕ್ರಿಯೆಗಳು ಮುಗಿದಿದ್ದು, ಆಸ್ಟ್ರೇಲಿಯಾದ ಹೊಡಿಬಡಿ ದಾಂಡಿಗನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಯಶಸ್ವಿಯಾಗಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟಿಮ್ ಡೇವಿಡ್ ಈವರೆಗೆ 24 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 21 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 453 ರನ್ ಕಲೆಹಾಕಿದ್ದಾರೆ. ಇದೇ ವೇಳೆ ಟಿಮ್ ಬ್ಯಾಟ್ನಿಂದ 30 ಭರ್ಜರಿ ಸಿಕ್ಸ್ ಹಾಗೂ 28 ಫೋರ್ಗಳು ಮೂಡಿಬಂದಿವೆ. ಈ ಬಾರಿ ಸೇಂಟ್ ಲೂಸಿಯಾ ಕಿಂಗ್ಸ್ ಪರ ಕಣಕ್ಕಿಳಿಯಲಿರುವ ಟಿಮ್ ಡೇವಿಡ್ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಸೇಂಟ್ ಲೂಸಿಯಾ ಕಿಂಗ್ಸ್ ತಂಡ: ಟಿಮ್ ಡೇವಿಡ್, ರೋಸ್ಟನ್ ಚೇಸ್, ಟಿಮ್ ಸೈಫರ್ಟ್, ಜಾನ್ಸನ್ ಚಾರ್ಲ್ಸ್, ಅಲ್ಝಾರಿ ಜೋಸೆಫ್, ತಬ್ರೇಝ್ ಶಮ್ಸಿ, ಡೇವಿಡ್ ವೀಝ, ಡೆಲಾನೊ ಪೊಟ್ಗೀಟರ್, ಮ್ಯಾಥ್ಯೂ ಫೋರ್ಡ್, ಆರೋನ್ ಜೋನ್ಸ್, ಖಾರಿ ಪಿಯರೆ, ಜಾವೆಲ್ಲೆ ಗ್ಲೆನ್, ಮೈಕಾ ಮೆಕೆಂಜಿ, ಶಾಡ್ರ್ಯಾಕ್ ಡೆಸ್ಕಾರ್ಟೆ, ಜೋಹಾನ್ ಜೆರೆಮಿಯಾ, ಕಿಯೋನ್ ಗ್ಯಾಸ್ಟನ್, ಅಕೀಮ್ ಆಗಸ್ಟೆ.
Published On - 11:58 am, Thu, 19 June 25
