ನಿವೃತ್ತಿ ಘೋಷಿಸಿದ ನ್ಯೂಝಿಲೆಂಡ್​ನ ಸ್ಟಾರ್ ಆಟಗಾರ

| Updated By: ಝಾಹಿರ್ ಯೂಸುಫ್

Updated on: Nov 16, 2024 | 10:23 AM

New Zealand vs England: ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 28 ರಿಂದ ಶುರುವಾಗಲಿದೆ. ಈ ಸರಣಿಯ ಎರಡನೇ ಪಂದ್ಯದ ಮೂಲಕ 35 ವರ್ಷದ ಕಿವೀಸ್ ವೇಗಿ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

1 / 5
ನ್ಯೂಝಿಲೆಂಡ್ ತಂಡದ ಖ್ಯಾತ ಆಟಗಾರ ಟಿಮ್ ಸೌಥಿ (Tim Southee) ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ದೀರ್ಘಾವಧಿಯ ಕ್ರಿಕೆಟ್​ಗೆ ವಿದಾಯ ಹೇಳುವುದಾಗಿ ಸೌಥಿ ತಿಳಿಸಿದ್ದಾರೆ.

2 / 5
ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಈ ಪಂದ್ಯವು ಹ್ಯಾಮಿಲ್ಟನ್​​ನ ಸೆಡನ್ ಪಾರ್ಕ್​ ಮೈದಾನದಲ್ಲಿ ನಡೆಯಲಿದೆ. ತಮ್ಮ ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್​​ಗೆ ವಿದಾಯ ಹೇಳಲು ಟಿಮ್ ಸೌಥಿ ನಿರ್ಧರಿಸಿದ್ದು, ಅದರಂತೆ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯವು ನ್ಯೂಝಿಲೆಂಡ್ ವೇಗಿಯ ಪಾಲಿಗೆ ಕೊನೆಯ ಪಂದ್ಯವಾಗಿರಲಿದೆ.

3 / 5
ಟಿಮ್ ಸೌಥಿ ನ್ಯೂಝಿಲೆಂಡ್ ಪರ ಈವರೆಗೆ 104 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 197 ಇನಿಂಗ್ಸ್​ಗಳಲ್ಲಿ 23082 ಎಸೆತಗಳನ್ನು ಎಸೆದಿರುವ ಅವರು ಒಟ್ಟು 385 ವಿಕೆಟ್ ಕಬಳಿಸಿದ್ದಾರೆ. ಇದೀಗ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದರೆ 400 ವಿಕೆಟ್​ ಸಾಧನೆ ಮಾಡಬಹುದು.

4 / 5
ಅಲ್ಲದೆ ಈ ಸಾಧನೆ ಮಾಡಿದ ನ್ಯೂಝಿಲೆಂಡ್​ನ 2ನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಬಹುದು. ಈ ಪಟ್ಟಿಯಲ್ಲಿ ಸರ್ ರಿಚರ್ಡ್ ಹ್ಯಾಡ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿವೀಸ್ ಪರ 86 ಟೆಸ್ಟ್ ಪಂದ್ಯಗಳನ್ನಾಡಿರುವ ಹ್ಯಾಡ್ಲಿ 431 ವಿಕೆಟ್ ಕಬಳಿಸಿ ಟೆಸ್ಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ನ್ಯೂಝಿಲೆಂಡ್ ಬೌಲರ್ ಎನಿಸಿಕೊಂಡಿದ್ದಾರೆ.

5 / 5
ಇದೀಗ ನಿವೃತ್ತಿಯ ಹಂಚಿನಲ್ಲಿರುವ ಟಿಮ್ ಸೌಥಿ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಮೂಲಕ 400 ವಿಕೆಟ್​ಗಳ ಸಾಧಕರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶ ಹೊಂದಿದ್ದಾರೆ. ಈ ವಿಶೇಷ ಸಾಧನೆಯೊಂದಿಗೆ ಕಿವೀಸ್ ವೇಗಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.