AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರವೇಗದ ಶತಕ ಬಾರಿಸಿ 60,000 ಮಂದಿಯ ಕ್ಷಮೆ ಕೇಳಿದ ಟ್ರಾವಿಸ್ ಹೆಡ್

Australia vs England: ಪರ್ತ್​ನಲ್ಲಿ ನಡೆದ ಆ್ಯಶಸ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ 172 ರನ್​ ಕಲೆಹಾಕಿದರೆ, ಆಸ್ಟ್ರೇಲಿಯಾ 132 ರನ್​ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡ 164 ರನ್​ಗಳಿಗೆ ಆಲೌಟ್ ಆಗಿದ್ದರು. ಅದರಂತೆ ಕೊನೆಯ ಇನಿಂಗ್ಸ್​ನಲ್ಲಿ 205 ರನ್​ ಬಾರಿಸಿ ಆಸೀಸ್ ಪಡೆ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Nov 22, 2025 | 5:58 PM

Share
ಆ್ಯಶಸ್ ಸರಣಿಯ ಮೊದಲ ಪಂದ್ಯವು ಕೇವಲ 2 ದಿನಗಳಲ್ಲೇ ಮುಗಿದಿದೆ. ಪರ್ತ್​ ಆಪ್ಟಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವನ್ನು ಎರಡೇ ದಿನದಲ್ಲಿ ಕೊನೆಗೊಳಿಸಿ ಇದೀಗ ಟ್ರಾವಿಸ್ ಹೆಡ್ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಾಳೆ (ನ.23)  ಭಾನುವಾರ ಆಗಿರುವುದು.

1 / 5
ವೀಕೆಂಡ್​ನಲ್ಲಿ ಆ್ಯಶಸ್ ಸರಣಿಯ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿರುತ್ತಾರೆ. ಅದರಂತೆ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಪಂದ್ಯದ ಮೂರನೇ ದಿನದಾಟದ (ನ.23)  ಟಿಕೆಟ್​ಗಳು ಸಂಪೂರ್ಣ ಮಾರಾಟವಾಗಿದ್ದವು. ಆದರೆ ಟ್ರಾವಿಸ್ ಹೆಡ್ ಅಬ್ಬರದೊಂದಿಗೆ ಈ ಪಂದ್ಯವು ಕೇವಲ 2 ದಿನಗಳಲ್ಲೇ ಮುಗಿದಿದೆ.

2 / 5
ಇಂಗ್ಲೆಂಡ್ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ಟ್ರಾವಿಸ್ ಹೆಡ್, ಭಾನುವಾರದ ಟಿಕೆಟ್ ಖರೀದಿಸಿರುವ 60 ಸಾವಿರ ಮಂದಿಗೆ ನನ್ನ ಕ್ಷಮಾಪಣೆ. ನಾವು ಪಂದ್ಯವನ್ನು 2ನೇ ದಿನಕ್ಕೆ ಮುಗಿಸಿದ್ದೇವೆ. ಹೀಗಾಗಿ ನಾಳೆ ಮ್ಯಾಚ್ ನೋಡಲು ಬರಲು ಉದ್ದೇಶಿಸಿರುವವರು ನನ್ನನ್ನು ಮನ್ನಿಸಬೇಕೆಂದು ಕೇಳಿಕೊಂಡಿದ್ದಾರೆ. ಇದೀಗ ಹೆಡ್ ಅವರ ಈ ತಮಾಷೆಯ ಹೇಳಿಕೆಯು ಸಿಕ್ಕಾಪಟ್ಟೆ ವೈರಲ್ ಆಗಿದೆ.

3 / 5
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 172 ರನ್​ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು ಕಲೆಹಾಕಿದ್ದು ಕೇವಲ 132 ರನ್​ಗಳು. 40 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡರಂಭಿಸಿದ ಇಂಗ್ಲೆಂಡ್ ತಂಡವನ್ನು 164 ರನ್​ಗಳಿಗೆ ಆಸೀಸ್ ವೇಗಿಗಳು ಆಲೌಟ್ ಮಾಡಿದ್ದಾರೆ.

4 / 5
ಅದರಂತೆ ಕೊನೆಯ ಇನಿಂಗ್ಸ್​ನಲ್ಲಿ 205 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆಂಗ್ಲ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್ ಕೇವಲ 83 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 123 ರನ್ ಬಾರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ಕೇವಲ 28.2 ಓವರ್​ಗಳಲ್ಲಿ 205 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 5 ದಿನಗಳ ಮ್ಯಾಚ್ ಕೇವಲ 2 ದಿನಗಳಲ್ಲೇ ಕೊನೆಗೊಂಡಿದೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ