- Kannada News Photo gallery Cricket photos U19 Women’s T20 World Cup IND vs SL Soumya Tiwari help India to seven-wicket win over Sri Lanka
INDW vs SLW: 59 ರನ್ಗೆ ಲಂಕಾ ಕಟ್ಟಿ ಹಾಕಿದ ಶಫಾಲಿ ಪಡೆ: ಅಂಡರ್-19 ವಿಶ್ವಕಪ್ನಲ್ಲಿ ಭಾರತೀಯ ಮಹಿಳೆಯರ ಭರ್ಜರಿ ಕಮ್ಬ್ಯಾಕ್
India vs Sri Lanka U19 Women’s T20 World Cup: ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಶಫಾಲಿ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ ಹೀನಾಯ ಸೋಲು ಕಂಡಿತು. ಈ ಗೆಲುವಿನ ಮೂಲಕ ಭಾರತ ಸೂಪರ್ 6 ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
Updated on:Jan 23, 2023 | 9:06 AM

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ವನಿತಾ ತಂಡ ಗುಂಪು ಹಂತದ ಎಲ್ಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಸೂಪರ್ 6 ಹಂತಕ್ಕೆ ತೇರ್ಗಡೆ ಆಗಿತ್ತು. ಆದರೆ, ಸೂಪರ್ ಸಿಕ್ಸ್ನ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ಮಹಿಳೆಯರ ವಿರುದ್ಧ ಸೋಲು ಕಂಡು ಹಿನ್ನಡೆ ಅನುಭವಿಸಿತು.

ಇದೀಗ ಶ್ರೀಲಂಕಾ ವಿರುದ್ಧ ಆಡಿದ ದ್ವಿತೀಯ ಪಂದ್ಯದಲ್ಲಿ ಬೊಂಬಾಟ್ ಕಮ್ಬ್ಯಾಕ್ ಮಾಡಿರುವ ಭಾರತ ಮಹಿಳಾ ತಂಡ 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದೆ.

ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಶಫಾಲಿ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ ಹೀನಾಯ ಸೋಲು ಕಂಡಿತು. ಈ ಗೆಲುವಿನ ಮೂಲಕ ಭಾರತ ಸೂಪರ್ 6 ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಂಕಾ ಅರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಟೈಟಾಸ್ ಸಾಧು ಅವರ ಮೊದಲ ಓವರ್ನ ಮೊದಲ ಎಸೆತದಲ್ಲೇ ನೆಥ್ಮಿ ಸೇನರತ್ನೆ ಔಟಾದರು.

ಇನ್ನಿಂಗ್ಸ್ನ ದ್ವಿತೀಯ ಓವರ್ನಲ್ಲಿ ಸುಮುದು ನಿಸಂಸಲ(2) ನಿರ್ಗಮಿಸಿದರು. ತಂಡದ ಪರ ನಾಯಕಿ ವಿಶ್ಮಿ ಗುಣರತ್ನೆ 28 ಎಸೆತಗಳಲ್ಲಿ 25 ರನ್ ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್ಗಳ ಸ್ಕೋರ್ 15ರ ಗಡಿ ದಾಟಲಿಲ್ಲ.

ಶ್ರೀಲಂಕಾ ಅಂಡರ್-19 ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 59 ರನ್ಗಳನ್ನಷ್ಟೆ ಕಲೆಹಾಕಿತು. ಭಾರತ ಪರ ಪಾರ್ಶವಿ ಚೋಪ್ರಾ 4 ಓವರ್ನಲ್ಲಿ 1 ಮೇಡನ್ ಹಾಗೂ ಕೇವಲ 5 ರನ್ ನೀಡಿ 4 ವಿಕೆಟ್ ಕಿತ್ತರು. ಮನ್ನತ್ ಕಶ್ಯಪ್ 2, ಟೈಟಾಸ್ ಸಾಧು ಹಾಗೂ ಅರ್ಚನಾ ದೇವಿ ತಲಾ 1 ವಿಕೆಟ್ ಪಡೆದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ 3 ವಿಕೆಟ್ ಕಳೆದುಕೊಂಡಿತಾದರೂ ತಂಡಕ್ಕೆ ಯಾವುದೇ ಹಿನ್ನಡೆ ಆಗಲಿಲ್ಲ. ನಾಯಕಿ ಶಫಾಲಿ ವರ್ಮಾ 15 ರನ್ಗೆ ಔಟಾದರೆ, ಶ್ವೇತಾ ಸೆಹ್ರಾವತ್ 13 ರನ್ ಗಳಿಸಿದರು.

ರಿಚ್ಚಾ ಘೋಷ್ 4 ರನ್ಗೆ ನಿರ್ಗಮಿಸಿದರು. ಸೌಮ್ಯ ತಿವಾರಿ 15 ಎಸೆತಗಳಲ್ಲಿ ಅಜೇಯ 28 ರನ್ ಕಲೆಹಾಕಿ ವಿನ್ನಿಂಗ್ ಶಾಟ್ ಹೊಡೆದರು.

ಭಾರತ ಮಹಿಳಾ ತಂಡ ಕೇವಲ 7.2 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ 60 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಲಂಕಾ ಪರ ದೇವ್ಮಿ ವಿಹಂಗಾ 3 ವಿಕೆಟ್ ಪಡೆದರು.
Published On - 9:06 am, Mon, 23 January 23
