2021 ರ ಡಬ್ಲ್ಯುಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ, ನಂತರ ಕಳೆದ ತಿಂಗಳು ನಡೆದ ಇತ್ತೀಚಿನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳ ಮುಜುಗರದ ಸೋಲನ್ನು ಅನುಭವಿಸಿತು. ಆದರೆ ರೋಹಿತ್ ಶರ್ಮಾ ನೇತೃತ್ವದ ತಂಡವು ತಮ್ಮ ಅಭಿಯಾನವನ್ನು ಪರಿಪೂರ್ಣ ಗೆಲುವಿನೊಂದಿಗೆ ಪ್ರಾರಂಭಿಸಿದೆ. ಹಾಗೆಯೇ ಪಾಯಿಂಟ್ ಪಟ್ಟಿಯಲ್ಲಿ ಈಗ ಪಡೆದಿರುವ ಅಗ್ರಸ್ಥಾನವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ.