- Kannada News Photo gallery Cricket photos Usa cricketer saurabh netravalkar career biography details in kannada
2010 ರ ಸೋಲಿಗೆ ಈಗ ಪ್ರತಿಕಾರ; ಪಾಕ್ ತಂಡಕ್ಕೆ ಸೋಲುಣಿಸಿದ ಭಾರತ ಮೂಲದ ಸೌರಭ್ ಬಗ್ಗೆ ನಿಮಗೆಷ್ಟು ಗೊತ್ತು?
T20 World Cup 2024: ತನ್ನ ಮೊದಲ ಪಂದ್ಯದಲ್ಲಿಯೇ ಬಾಬರ್ ಆಝಂ ಸಾರಥ್ಯದ ಪಾಕಿಸ್ತಾನ, ಯುಎಸ್‌ಎಯಂತಹ ದುರ್ಬಲ ತಂಡದ ವಿರುದ್ಧ ಸೋಲನ್ನು ಎದುರಿಸಿದೆ. ಸೂಪರ್ ಓವರ್‌ನಿಂದ ನಿರ್ಧಾರವಾದ ಈ ಪಂದ್ಯದಲ್ಲಿ ಯುಎಸ್ಎ ತಂಡ ಗೆಲ್ಲುವುದಕ್ಕೆ ವೇಗಿ ಸೌರಭ್ ನೇತ್ರವಾಲ್ಕರ್ ನೀಡಿದ ಕೊಡುಗೆ ಅಪಾರವಾಗಿತ್ತು.
Updated on: Jun 07, 2024 | 7:11 PM

ತನ್ನ ಮೊದಲ ಪಂದ್ಯದಲ್ಲಿಯೇ ಬಾಬರ್ ಆಝಂ ಸಾರಥ್ಯದ ಪಾಕಿಸ್ತಾನ, ಯುಎಸ್‌ಎಯಂತಹ ದುರ್ಬಲ ತಂಡದ ವಿರುದ್ಧ ಸೋಲನ್ನು ಎದುರಿಸಿದೆ. ಸೂಪರ್ ಓವರ್‌ನಿಂದ ನಿರ್ಧಾರದ ಈ ಪಂದ್ಯದಲ್ಲಿ ಯುಎಸ್ಎ ತಂಡ ಗೆಲ್ಲುವುದಕ್ಕೆ ವೇಗಿ ಸೌರಭ್ ನೇತ್ರವಾಲ್ಕರ್ ನೀಡಿದ ಕೊಡುಗೆ ಅಪಾರವಾಗಿತ್ತು.

ಪಾಕಿಸ್ತಾನದ ವಿರುದ್ಧ ಅದ್ಭುತ ಬೌಲಿಂಗ್ ಮಾಡುವ ಮೂಲಕ ಯುಎಸ್ಎಗೆ ಜಯ ತಂದುಕೊಟ್ಟ ಸೌರಭ್ ನೇತ್ರವಾಲ್ಕರ್ ಭಾರತೀಯ ಮೂಲದವರು ಎಂದರೆ ನಂಬುತ್ತೀರ?. ಹೌದು,, ಸೌರಭ್ 16 ಅಕ್ಟೋಬರ್ 1991 ರಂದು ಮುಂಬೈನಲ್ಲಿ ಜನಿಸಿದರು.

ಸೌರಭ್ ನೇತ್ರವಾಲ್ಕರ್ ಟೀಂ ಇಂಡಿಯಾ ಪರ ದೇಶೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲ ಆಡಿದ್ದರು. ಅಲ್ಲದೆ 2010ರಲ್ಲಿ ಆಡಿದ ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಿದ್ದರು. ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಸಂದೀಪ್ ಶರ್ಮಾ ಅವರಂತಹ ಆಟಗಾರರು ಸೌರಭ್ ಅವರ ಮಾಜಿ ಸಹ ಆಟಗಾರರಾಗಿದ್ದಾರೆ.

ಟೀಂ ಇಂಡಿಯಾದಲ್ಲಿ ಅವಕಾಶ ಸಿಗದಿದ್ದಾಗ ಸೌರಭ್ 2015ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಆ ನಂತರ ಅವರು 2019 ರಲ್ಲಿ ಯುಎಸ್ಎ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅಷ್ಟೇ ಅಲ್ಲ ಸೌರಭ್ ಯುಎಸ್ಎ ತಂಡದ ನಾಯಕನೂ ಆಗಿದ್ದರು.

ಇನ್ನು 2010ರಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ ಆಡಿದ ಸೌರಭ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ ಆ ಆವೃತ್ತಿಯಲ್ಲಿ ಭಾರತ ತಂಡ, ಪಾಕಿಸ್ತಾನ ವಿರುದ್ಧ ಸೋಲು ಎದುರಿಸಿತ್ತು. ಆದರೆ ಇದೀಗ ಅಂದಿನ ಸೋಲಿಗೆ ಸೌರಭ್ ಇಂದು ಸೇಡು ತೀರಿಸಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಸೌರಭ್, 4 ಓವರ್ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಹಾಗೆಯೇ ಸೂಪರ್ ಓವರ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಅವರು ಪಾಕಿಸ್ತಾನವನ್ನು ಸೋಲಿಸುವಲ್ಲಿ ಪ್ರಮುಖ ಕೊಡುಗೆ ನೀಡಿದರು. ಸೂಪರ್ ಓವರ್‌ನಲ್ಲಿ ಯುಎಸ್‌ಎ, ಪಾಕಿಸ್ತಾನಕ್ಕೆ ಗೆಲ್ಲಲು 19 ರನ್‌ಗಳ ಗುರಿಯನ್ನು ನೀಡಿತ್ತು, ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡವು ಕೇವಲ 13 ರನ್ ಗಳಿಸಲು ಸಾಧ್ಯವಾಯಿತು.




