
ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 192 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 81 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 19 ರನ್ಗಳಿಂದ ಚೊಚ್ಚಲ ಅಂತರರಾಷ್ಟ್ರೀಯ ಶತಕದಿಂದ ವೈಭವ್ ವಂಚಿತರಾದರೂ ಮತ್ತೊಂದು ವಿಶ್ವದಾಖಲೆಯನ್ನು ಸೃಷ್ಟಿಸಿದರು(PC-BCCI).

ಜಿಂಬಾಬ್ವೆ ವಿರುದ್ಧದ ಈ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಬಾರಿಸಿದ ಎರಡನೇ ಶತಕ ಇದಾಗಿದೆ. ಮೊದಲ ಅರ್ಧಶತಕ ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಅತಿ ಕಿರಿಯ ಆಟಗಾರನೆಂಬ ವಿಶ್ವ ದಾಖಲೆ ನಿರ್ಮಿಸಿದ್ದ ವೈಭವ್ ಇದೀಗ ಎರಡನೇ ಅರ್ಧಶತಕದೊಂದಿಗೆ, ನೇಪಾಳದ ಬ್ಯಾಟ್ಸ್‌ಮನ್ ಕುಶಾಲ್ ಮಾಲಾ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸಹ ಮುರಿದರು(PC-BCCI).

ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯದಲ್ಲಿ ವೈಭವ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ 16 ವರ್ಷ ವಯಸ್ಸಿಗೂ ಮುನ್ನ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಬಾರಿ 50+ ಸ್ಕೋರ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ವೈಭವ್ ಪಾಲಾಗುದೆ. 16 ವರ್ಷ ವಯಸ್ಸಿಗೂ ಮುನ್ನ ಒಮ್ಮೆ 50+ ಸ್ಕೋರ್ ಗಳಿಸಿದ್ದ ನೇಪಾಳದ ಬ್ಯಾಟ್ಸ್‌ಮನ್ ಕುಶಾಲ್ ಮಾಲಾ ಅವರ ದಾಖಲೆಯನ್ನು ವೈಭವ್ ಮುರಿದರು(PC-BCCI).

ವೈಭವ್ 15 ವರ್ಷ 118 ದಿನಗಳಲ್ಲಿ ಜಿಂಬಾಬ್ವೆ ತಂಡದ ವಿರುದ್ಧ ತಮ್ಮ ಮೊದಲ ಅಂತರರಾಷ್ಟ್ರೀಯ ಅರ್ಧಶತಕವನ್ನು ಬಾರಿಸಿದರೆ, ಇದೀಗ 15 ವರ್ಷ 121 ದಿನಗಳಲ್ಲಿ ಎರಡನೇ ಅರ್ಧಶತಕ ಕಲೆಹಾಕಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೂರನೇ ಪಂದ್ಯದಲ್ಲಿ ವೈಭವ್ 49 ಎಸೆತಗಳಲ್ಲಿ 81 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ವೈಭವ್ ತಮ್ಮ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳನ್ನು ಬಾರಿಸಿದರು. ಇದು ಜಿಂಬಾಬ್ವೆ ವಿರುದ್ಧದ ಟಿ20ಕ್ರಿಕೆಟ್‌ನಲ್ಲಿ ವೈಭವ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ(PC-BCCI).

ಹಾಗೆಯೇ ಮೊದಲ ಐದು ಅಥವಾ ಆರು ಅಂತರರಾಷ್ಟ್ರೀಯ ಪಂದ್ಯಗಳ ನಂತರ ವೈಭವ್ ಸೂರ್ಯವಂಶಿ ಅವರ ಸ್ಟ್ರೈಕ್ ರೇಟ್ 211 ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ವೈಭವ್ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೆಲವೇ ಎಸೆತಗಳಲ್ಲಿ ಇಷ್ಟು ವೇಗವಾಗಿ ರನ್ ಗಳಿಸಿದ ಏಕೈಕ ಯುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ(PC-BCCI).