ICC ODI Rankings: ಬರೋಬ್ಬರಿ 143 ಬೌಲರ್‌ಗಳನ್ನು ಹಿಂದಿಕ್ಕಿದ ವರುಣ್ ಚಕ್ರವರ್ತಿ

|

Updated on: Mar 05, 2025 | 3:59 PM

Varun Chakravarthy's Meteoric Rise: ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವರುಣ್ ಚಕ್ರವರ್ತಿ ಅವರು ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ 143 ಸ್ಥಾನಗಳ ಏರಿಕೆ ಕಂಡು ಟಾಪ್ 100ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಆಡಿರುವ 2 ಪಂದ್ಯಗಳಲ್ಲಿ ವರುಣ್ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ, ಅವರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಗೆ ಸೇರಿದ್ದಾರೆ.

1 / 7
ಟೀಂ ಇಂಡಿಯಾದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಬೆರಳೆಣಿಕೆಯಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದರೂ ಅವರ ಅಮೋಘ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್​ನ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ವರುಣ್, ಐಸಿಸಿಯಿಂದ ಭರ್ಜರಿ ಉಡುಗೊರೆ ಪಡೆದಿದ್ದಾರೆ.

2 / 7
ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ವಿಶ್ವದ 143 ಬೌಲರ್‌ಗಳನ್ನು ಹಿಂದಿಕ್ಕುವ ಮೂಲಕ ಭಾರತೀಯ ಸ್ಪಿನ್ನರ್ ಸಂಚಲನ ಸೃಷ್ಟಿಸಿದ್ದಾರೆ. ಬಲಗೈ ಸ್ಪಿನ್ನರ್ ವರುಣ್ ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿದ್ದು, ಇಲ್ಲಿಯವರೆಗೆ ಸಿಕ್ಕ ಎರಡು ಅವಕಾಶಗಳಲ್ಲಿ ಸಾಕಷ್ಟು ವಿಕೆಟ್ ಪಡೆದಿದ್ದಾರೆ.

3 / 7
ವರುಣ್ ಚಕ್ರವರ್ತಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ ಆಡಿದ 2 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ 7 ವಿಕೆಟ್‌ಗಳಲ್ಲಿ 5 ವಿಕೆಟ್‌ಗಳು ಒಂದೇ ಪಂದ್ಯದಲ್ಲಿ ಬಂದಿವೆ. ಇದರೊಂದಿಗೆ, ಅವರು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಗೆ ಸೇರಿದ್ದಾರೆ.

4 / 7
ಈ ಅದ್ಭುತ ಪ್ರದರ್ಶನದ ಲಾಭ ಪಡೆದಿರುವ ವರುಣ್ ಚಕ್ರವರ್ತಿ ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ 143 ಸ್ಥಾನಗಳ ಜಿಗಿತ ಕಂಡಿದ್ದು ಇದೀಗ ಅಗ್ರ 100ರೊಳಗೆ ಪ್ರವೇಶಿಸಿದ್ದಾರೆ. ವರುಣ್ ಚಕ್ರವರ್ತಿ ಈಗ 97 ನೇ ಸ್ಥಾನವನ್ನು ತಲುಪಿದ್ದಾರೆ.

5 / 7
ಐಸಿಸಿ ಏಕದಿನ ಬೌಲರ್‌ಗಳಲ್ಲಿ ಅಗ್ರ ಸ್ಥಾನದ ಬಗ್ಗೆ ಹೇಳುವುದಾದರೆ, ಶ್ರೀಲಂಕಾದ ಮಹೀಶ್ ತೀಕ್ಷಣ 680 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಎರಡು ಸ್ಥಾನ ಏರಿಕೆ ಕಂಡು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಏತನ್ಮಧ್ಯೆ, ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಮೂರು ಸ್ಥಾನ ಜಿಗಿದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

6 / 7
ಐಸಿಸಿ ಏಕದಿನ ಬೌಲರ್‌ಗಳ ಟಾಪ್ 10 ರೊಳಗೆ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬೌಲರ್ ಕುಲ್ದೀಪ್ ಯಾದವ್. ಕುಲ್ದೀಪ್ ಇತ್ತೀಚಿನ ಶ್ರೇಯಾಂಕದಲ್ಲಿ ಮೂರು ಸ್ಥಾನ ಕುಸಿದು ಆರನೇ ಸ್ಥಾನಕ್ಕೆ ತಲುಪಿದ್ದಾರೆ.

7 / 7
ಹಾಗೆಯೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವೇಗದ ಬೌಲರ್ ಮೊಹಮ್ಮದ್ ಶಮಿ, ಐಸಿಸಿ ಇತ್ತೀಚಿನ ಶ್ರೇಯಾಂಕದಲ್ಲಿ ಮೂರು ಸ್ಥಾನಗಳ ಜಿಗಿತವನ್ನು ಕಂಡು 11 ನೇ ಸ್ಥಾನಕ್ಕೆ ತಲುಪಿದ್ದರೆ, ರವೀಂದ್ರ ಜಡೇಜಾ 13ನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಎರಡು ಸ್ಥಾನ ಕುಸಿದು 14ನೇ ಸ್ಥಾನಕ್ಕೆ ಇಳಿದಿದ್ದಾರೆ.