Virat Kohli: ಖಾತೆ ತೆರೆದು ಕ್ರಿಕೆಟ್ ದೇವರ ದಾಖಲೆಯನ್ನು ಪುನರಾವರ್ತಿಸಿದ ಕಿಂಗ್ ಕೊಹ್ಲಿ

Updated on: Dec 24, 2025 | 3:47 PM

Virat Kohli's 16,000 List A Runs: ವಿಜಯ್ ಹಜಾರೆ ಟ್ರೋಫಿ ಆರಂಭಗೊಂಡಿದ್ದು, ವಿರಾಟ್ ಕೊಹ್ಲಿ 15 ವರ್ಷಗಳ ನಂತರ ಆಡುತ್ತಿದ್ದಾರೆ. ಒಂದು ರನ್ ಗಳಿಸುವ ಮೂಲಕ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್ ಪೂರೈಸಿದ್ದಾರೆ. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯರಾಗಿದ್ದಾರೆ. ಇದು ಮುಂಬರುವ ಏಕದಿನ ಸರಣಿಗೆ ಅವರ ಸಿದ್ಧತೆಗೆ ನಿರ್ಣಾಯಕವಾಗಿದೆ.

1 / 5
ಮತ್ತೊಂದು ಪ್ರಸಿದ್ಧ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಇಂದಿನಿಂದ ಆರಂಭವಾಗಿದೆ. ದೇಶದ ನಾನಾ ಸ್ಥಳಗಳಲ್ಲಿ ಹಲವು ತಂಡಗಳು ಕಣಕ್ಕಿಳಿದಿವೆ. ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯ ವಿಶೇಷತೆಯೆಂದರೆ, ಟೀಂ ಇಂಡಿಯಾದ ಇಬ್ಬರು ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ.

2 / 5
ಬರೋಬ್ಬರಿ 15 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಪುನಾರವರ್ತಿಸಿದರು. ವಾಸ್ತವವಾಗಿ ಕೊಹ್ಲಿ ಒಂದು ರನ್‌ ಕಲೆಹಾಕುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ಪೂರ್ಣಗೊಳಿಸಿದರು.

3 / 5
ಆಂಧ್ರಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಆಡುವ ಮೊದಲು, ವಿರಾಟ್ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 15,999 ರನ್ ಗಳಿಸಿದ್ದರು. 342 ಪಂದ್ಯಗಳ 329 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ, 57 ಶತಕಗಳು ಮತ್ತು 54 ಅರ್ಧಶತಕಗಳೊಂದಿಗೆ ಇಷ್ಟು ರನ್ ಕಲೆಹಾಕಿದ್ದರು. ಇದೀಗ ಆಂಧ್ರಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ 330 ನೇ ಲಿಸ್ಟ್ ಎ ಇನ್ನಿಂಗ್ಸ್ ಆಡಿದ ಕೊಹ್ಲಿ 16,000 ರನ್ ಪೂರೈಸಿದರು.

4 / 5
ಲಿಸ್ಟ್ ಎ ಕ್ರಿಕೆಟ್​ನಲ್ಲಿ 16,000 ರನ್ ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ತಮ್ಮ 343 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿರುವ ವಿರಾಟ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಹೊಂದಿದ್ದ ಮೈಲಿಗಲ್ಲನ್ನು ಮೀರಿದ್ದಾರೆ. ಲಿಸ್ಟ್ ಎ ಕ್ರಿಕೆಟ್​ನಲ್ಲಿ 16,000 ರನ್ ಕಲೆಹಾಕಿದ ಮೊದಲ ಭಾರತೀಯ ಸಚಿನ್ ತೆಂಡೂಲ್ಕರ್.

5 / 5
ವಿರಾಟ್ ಕೊಹ್ಲಿ 15 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಕೊನೆಯ ಬಾರಿಗೆ ಈ ಪಂದ್ಯಾವಳಿಯಲ್ಲಿ 2010-11ರಲ್ಲಿ ಆಡಿದ್ದ ಕೊಹ್ಲಿ ಇದೀಗ ಆಡಿದ ಮೊದಲ ಪಂದ್ಯದಲ್ಲೇ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಪುನಾರವರ್ತಿಸಿದ್ದಾರೆ. ಕೊಹ್ಲಿಗೆ, ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯು 2027 ರ ಜನವರಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಸಿದ್ಧತೆಗಾಗಿ ನಿರ್ಣಾಯಕವಾಗಿದೆ.

Published On - 3:46 pm, Wed, 24 December 25