RCB: 2019 ರಲ್ಲಿಯೇ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ತೀರ್ಮಾನಿಸಿತ್ತು ಆರ್​ಸಿಬಿ..!

Updated on: Jul 28, 2025 | 10:34 PM

Virat Kohli captaincy: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಗೆಲುವಿನ ಹಿನ್ನೆಲೆಯಲ್ಲಿ ಆಸಕ್ತಿದಾಯಕ ಮಾಹಿತಿ ಹೊರಬಿದ್ದಿದೆ. 2019ರಲ್ಲಿ ಗ್ಯಾರಿ ಕರ್ಸ್ಟನ್ ತಂಡದ ಕೋಚ್ ಆಗಿದ್ದಾಗ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಪಾರ್ಥಿವ್ ಪಟೇಲ್ ಅವರನ್ನು ನೇಮಿಸುವ ಯೋಜನೆ ಹೊಂದಿದ್ದರು . ಆದರೆ ಯಾಕೆ ಅದು ಆಗಲಿಲ್ಲ ಎಂಬುದು ತಿಳಿದಿಲ್ಲ ಎಂದು ಮಾಜಿ ಆಟಗಾರ ಮೊಯಿನ್ ಅಲಿ ಹೇಳಿದ್ದಾರೆ.

1 / 5
ಬರೋಬ್ಬರಿ 18 ವರ್ಷಗಳ ಬಳಿಕ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಗೆಲ್ಲುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಯಿತು. ಆದಾಗ್ಯೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಅವಘಡದಿಂದಾಗಿ ಪ್ರಸ್ತುತ ಆರ್​ಸಿಬಿ ಫ್ರಾಂಚೈಸಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಇದೆಲ್ಲದರ ನಡುವೆ ತಂಡದ ಮಾಜಿ ನಾಯಕ ಕೊಹ್ಲಿ ಬಗ್ಗೆ ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ.

2 / 5
ವಾಸ್ತವವಾಗಿ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲೇ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದ ವಿರಾಟ್ ಕೊಹ್ಲಿಗೆ 2013 ರಲ್ಲಿ ಈ ತಂಡದ ನಾಯಕತ್ವ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ಕೊಹ್ಲಿ 2021 ರವರೆಗೂ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಕೊಹ್ಲಿ ನಾಯಕತ್ವದಲ್ಲಿ ತಂಡ ಒಮ್ಮೆ ಮಾತ್ರ ಫೈನಲ್​ಗೇರಿದ್ದನ್ನು ಬಿಟ್ಟರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

3 / 5
2016 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ ತಂಡ ಫೈನಲ್​ಗೇರಿತ್ತು. ಆದರೆ ಫೈನಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆ ಬಳಿಕವೂ ಕೊಹ್ಲಿ 2021 ರವರೆಗೆ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ಆದರೀಗ ಕೊಹ್ಲಿಯನ್ನು 2019ರಲ್ಲೇ ನಾಯಕತ್ವದಿಂದ ಕೆಳಗಿಳಿಸಲು ತೀರ್ಮಾನಿಸಲಾಗತ್ತು ಎಂಬ ಸ್ಫೋಟಕ ಮಾಹಿತಿಯನ್ನು ಆರ್​ಸಿಬಿ ತಂಡದ ಮಾಜಿ ಆಲ್‌ರೌಂಡರ್ ಮೊಯಿನ್ ಅಲಿ ಬಹಿರಂಗಪಡಿಸಿದ್ದಾರೆ.

4 / 5
ಸ್ಪೋರ್ಟ್ಸ್ ಟಕ್ ಜೊತೆ ಈ ಬಗ್ಗೆ ಮಾತನಾಡಿರುವ ಮೊಯಿನ್ ಅಲಿ, ‘ 2019 ರಲ್ಲಿ ಗ್ಯಾರಿ ಕರ್ಸ್ಟನ್ ತಂಡದ ಮುಖ್ಯ ಕೋಚ್ ಆಗಿದ್ದಾಗ, ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಪಾರ್ಥಿವ್ ಪಟೇಲ್ ಅವರನ್ನು ನಾಯಕನನ್ನಾಗಿ ನೇಮಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಆ ಬಳಿಕ ಪಾರ್ಥಿವ್ ಪಟೇಲ್​ಗೆ ಏಕೆ ನಾಯಕತ್ವ ನೀಡಲಿಲ್ಲ ಎಂದು ನನಗೆ ತಿಳಿದಿಲ್ಲ. ಆದರೆ ಅವರನ್ನು ಆ ಪಾತ್ರಕ್ಕೆ ಗಂಭೀರವಾಗಿ ಪರಿಗಣಿಸಲಾಗಿತ್ತು ಎಂದು ನನಗೆ ಗೊತ್ತಿತ್ತು ಎಂದಿದ್ದಾರೆ.

5 / 5
2019 ರ ನಂತರವೂ ನಾಯಕನಾಗಿ ಮುಂದುವರೆದಿದ್ದ ಕೊಹ್ಲಿ ಐಪಿಎಲ್ 2021 ರ ನಂತರ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಆರ್‌ಸಿಬಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಫಾಫ್ ಡುಪ್ಲೆಸಿಸ್‌ಗೆ ಹಸ್ತಾಂತರಿಸಲಾಯಿತು. ಡುಪ್ಲೆಸಿಸ್ ನಾಯಕತ್ವದಲ್ಲೂ ತಂಡಕ್ಕೆ ಟ್ರೋಫಿ ಸಿಗಲಿಲ್ಲ. ಆದರೆ ಡುಪ್ಲೆಸಿಸ್ ಬಳಿಕ ತಂಡದ ನಾಯಕತ್ವವನ್ನು ವಹಿಸಿಕೊಂಡ ರಜತ್ ಪತಿದಾರ್ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದರು.