IPL 2023: ವೈಮನಸ್ಸು ಮರೆತು ಒಂದಾದ್ರಾ ವಿರಾಟ್ ಕೊಹ್ಲಿ-ಗಂಭೀರ್? ಈ ಫೋಟೋ ಅಸಲಿಯತ್ತೇನು?
TV9 Web | Updated By: ಝಾಹಿರ್ ಯೂಸುಫ್
Updated on:
May 02, 2023 | 5:22 PM
Virat Kohli vs Gautam Gambhir: ಈ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಪಿಎಲ್ ಸಮಿತಿಯು, ಇದೀಗ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದೆ.
1 / 8
IPL 2023: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯವು ಭರ್ಜರಿ ಪೈಪೋಟಿಗೆ ಸಾಕ್ಷಿಯಾಗಿತ್ತು. ಹಳೆಯ ಸೋಲಿನ ಸೇಡನ್ನು ಮನಸ್ಸಲ್ಲಿಟ್ಟುಕೊಂಡು ಆಡಿದ ಆರ್ಸಿಬಿ ಆಟಗಾರರು ಪ್ರತಿ ನಿಮಿಷದಲ್ಲೂ ಕಿಚ್ಚಿನ ಪ್ರದರ್ಶನ ನೀಡಿದ್ದರು.
2 / 8
ಅಲ್ಲದೆ ಲಕ್ನೋ ತಂಡವನ್ನು ಅವರದ್ದೇ ತವರು ಮೈದಾನದಲ್ಲಿ 18 ರನ್ಗಳಿಂದ ಸೋಲಿಸಿ ಭರ್ಜರಿಯಾಗಿ ಸಂಭ್ರಮಿಸಿದರು. ಆದರೆ ಈ ಸಂಭ್ರಮದ ಬೆನ್ನಲ್ಲೇ ಮೈದಾನದಲ್ಲಿ ಆಟಗಾರರ ನಡುವಣ ಕೂಡ ಕಿಚ್ಚು ಹೊತ್ತಿಕೊಂಡಿತು.
3 / 8
ಲಕ್ನೋ ತಂಡದ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಜೊತೆ ಜಗಳಕ್ಕಿಳಿದರೆ, ಆ ಬಳಿಕ ಗೌತಮ್ ಗಂಭೀರ್ ವಾಗ್ವಾದಕ್ಕೆ ಮುಂದಾದರು. ಇದರಿಂದ ಕೆಲ ಹೊತ್ತು ಪರಿಸ್ಥಿತಿ ಬಿಗಡಾಯಿಸಿತು. ಅದರಲ್ಲೂ ಗಂಭೀರ್ ಹಾಗೂ ಕೊಹ್ಲಿ ನಡುವೆ ಮಾತಿನ ಚಕಮಕಿಯೇ ನಡೆದು ಹೋಯಿತು. ಅಷ್ಟರಲ್ಲಾಗಲೇ ಇತರೆ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
4 / 8
ಈ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಪಿಎಲ್ ಸಮಿತಿಯು, ಇದೀಗ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದೆ. ಹಾಗೆಯೇ ನವೀನ್ ಉಲ್ ಹಕ್ಗೆ ಶೇ.50 ರಷ್ಟು ದಂಡ ವಿಧಿಸಲಾಗಿದೆ.
5 / 8
ಈ ಎಲ್ಲಾ ಘಟನೆಗಳ ಬಳಿಕ ಇದೀಗ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಪರಸ್ಫರ ಆಲಿಂಗನ ಮಾಡಿಕೊಳ್ಳುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಜಗಳದ ಬಳಿಕ ಗೌತಿ ಹಾಗೂ ಕೊಹ್ಲಿ ಪರಸ್ಪರ ಕ್ಷಮೆಯಾಚಿಸಿದ್ದಾರೆ ಎಂದು ಹೇಳಲಾಗಿದೆ.
6 / 8
ಆದರೆ ಅಸಲಿಗೆ ಈ ಫೋಟೋಗಳು ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತೆಗೆದ ಚಿತ್ರಗಳು. ಆರ್ಸಿಬಿ ವಿರುದ್ಧದ ಪಂದ್ಯದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಈಗ ಹರಿ ಬಿಡಲಾಗಿದೆ. ಹೀಗಾಗಿ ಕೊಹ್ಲಿ-ಗಂಭೀರ್ ನಡುವೆ ಎಲ್ಲವೂ ಸರಿಯಾಗಿದೆ ಎಂಬುದು ಸುಳ್ಳು ಸುದ್ದಿ.
7 / 8
ಇನ್ನು ಲಕ್ನೋನದಲ್ಲಿ ನಡೆದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಪರಸ್ಪರ ಹಸ್ತಲಾಘವ ಮಾಡಿದ್ದರು. ಇದಾಗ್ಯೂ ಇಬ್ಬರು ಮುಖ-ಮುಖ ನೋಡಿಕೊಂಡಿರಲಿಲ್ಲ ಎಂಬುದು ವಿಶೇಷ.
8 / 8
ಒಟ್ಟಿನಲ್ಲಿ 2013 ರಲ್ಲಿ ಶುರುವಾದ ಗಂಭೀರ್-ಕೊಹ್ಲಿ ನಡುವಣ ವೈಮನಸ್ಸು ದಶಕಗಳ ಬಳಿಕ ಕೂಡ ಮುಂದುವರೆದಿದೆ ಎಂಬುದಕ್ಕೆ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಘಟನೆಯೇ ಸಾಕ್ಷಿ.