- Kannada News Photo gallery Cricket photos Virat Kohli IPL Fine Amount: Fines for breaching the IPL Code Of Conduct
Virat Kohli: ವಿರಾಟ್ ಕೊಹ್ಲಿ ಹಾಗೂ ಗಂಭೀರ್ ಕಟ್ಟಿದ ದಂಡದ ಮೊತ್ತವೆಷ್ಟು ಗೊತ್ತಾ?
IPL 2023 Kannada: ಐಪಿಎಲ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದನ್ನು ಒಪ್ಪಿಕೊಂಡಿದ್ದು, ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ಗೆ ಪಂದ್ಯದ ಶುಲ್ಕದ 100 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ.
Updated on: May 02, 2023 | 3:06 PM

IPL 2023: ಐಪಿಎಲ್ನ 43ನೇ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಃಘಿಸಿದಕ್ಕಾಗಿ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ಗೆ ಬಿಸಿಸಿಐ ದಂಡ ವಿಧಿಸಿದೆ.

ಈ ಪಂದ್ಯದ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಪರಸ್ಪರ ವಾಗ್ವಾದ ನಡೆಸಿದ್ದರು. ಇದರ ನಂತರ ರಂಗಕ್ಕೆ ಎಂಟ್ರಿ ಕೊಟ್ಟ ಗೌತಮ್ ಗಂಭೀರ್ ಹಾಗೂ ಕಿಂಗ್ ಕೊಹ್ಲಿಯ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.

ಮೈದಾನದಲೇ ಮೈಮರೆತ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ನಡುವಣ ವಾಕ್ಸಮರ ಪರಿಸ್ಥಿತಿಯನ್ನು ಕೈ ಮೀರುವಂತೆ ಮಾಡಿತ್ತು. ಆದರೆ ಎಚ್ಚೆತ್ತ ಇತರೆ ಆಟಗಾರರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಅಹಿತಕರ ಘಟನೆಯನ್ನು ಬಿಸಿಸಿಐನ ಐಪಿಎಲ್ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದೆ.

ಇದೀಗ ಐಪಿಎಲ್ ಆರ್ಟಿಕಲ್ 2.21 ರಂತೆ ಆಟಗಾರರು ಐಪಿಎಲ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದನ್ನು ಒಪ್ಪಿಕೊಂಡಿದ್ದು, ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ಗೆ ಪಂದ್ಯದ ಶುಲ್ಕದ 100 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್ ಉಲ್ ಹಕ್ಗೆ ಪಂದ್ಯದ ಶುಲ್ಕದ ಶೇ.50 ರಷ್ಟು ದಂಡವಾಗಿ ಪಾವತಿಸಲು ಸೂಚಿಸಲಾಗಿದೆ.

ಅದರಂತೆ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿರುವ ಕಾರಣ ಅವರು ಒಟ್ಟು 1.07 ಕೋಟಿ ರೂ. ಫೈನ್ ಪಾವತಿಸಿದ್ದಾರೆ.

ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ಹವಹಿಸುತ್ತಿರುವ ಗೌತಮ್ ಗಂಭೀರ್ ತಮ್ಮ 25 ಲಕ್ಷ ರೂ. ದಂಡ ತೆತ್ತಿದ್ದಾರೆ.

ಇದಲ್ಲದೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್ ಹಕ್ 1.79 ಲಕ್ಷ ರೂ. ಪಾವತಿಸಿದ್ದಾರೆ.



















