- Kannada News Photo gallery Cricket photos Virat Kohli becomes the 2nd Asian to complete 20M likes on an Instagram post.
Virat Kohli: 20 ಮಿಲಿಯನ್ ಲೈಕ್ಸ್: ದಾಖಲೆ ಬರೆದ ಕಿಂಗ್ ಕೊಹ್ಲಿ
Virat Kohli: ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋವೊಂದು ಅತೀ ಹೆಚ್ಚು ಲೈಕ್ಸ್ ಪಡೆದು ದಾಖಲೆ ಬರೆದಿದೆ. ಈ ಹಿಂದೆ ಈ ದಾಖಲೆ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹೆಸರಿನಲ್ಲಿತ್ತು. ಈ ಜೋಡಿ ಹಂಚಿಕೊಂಡಿದ್ದ ಮದುವೆಯ ಫೋಟೋಗೆ 1 ಕೋಟಿ 40 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದರು. ಇದೀಗ ವಿರಾಟ್ ಕೊಹ್ಲಿ ಶೇರ್ ಮಾಡಿದ ಫೋಟೋ 2 ಕೋಟಿಗೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿದೆ.
Updated on: Jul 03, 2024 | 11:23 AM

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಆದರೆ ಈ ಬಾರಿ ದಾಖಲೆ ಸೃಷ್ಟಿಯಾಗಿರುವುದು ಮೈದಾನದಲ್ಲಿ ಅಲ್ಲ. ಬದಲಾಗಿ ಇನ್ಸ್ಟಾಗ್ರಾಮ್ನಲ್ಲಿ ಎಂಬುದು ವಿಶೇಷ.

ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋಗಳ ಪೋಸ್ಟ್ ಇದೀಗ 20 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಅಂದರೆ 2 ಕೋಟಿಗಿಂತ ಹೆಚ್ಚು ಮೆಚ್ಚುಗೆಗಳು ಈ ಫೋಟೋಗಳಿಗೆ ವ್ಯಕ್ತವಾಗಿವೆ.

ಇದರೊಂದಿಗೆ ಅತೀ ಹೆಚ್ಚು ಇನ್ಸ್ಟಾಗ್ರಾಮ್ ಲೈಕ್ಸ್ ಪಡೆದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಹಾಗೆಯೇ ಏಷ್ಯಾದಲ್ಲೇ ಅತೀ ಹೆಚ್ಚು ಲೈಕ್ಸ್ ಪಡೆದ 2ನೇ ಇನ್ಸ್ಟಾಗ್ರಾಮ್ ಪೋಸ್ಟ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು BTSನ ಕೊರಿಯನ್ ಪಾಪ್ ಸಿಂಗರ್ ಕಿಮ್ ಟೇಹ್ಯುಂಗ್. 2022 ರಲ್ಲಿ ಕಿಮ್ ಹಂಚಿಕೊಂಡ ಈ ಪೋಸ್ಟ್ಗೆ 2 ಕೋಟಿಗೂ ಅಧಿಕ ಲೈಕ್ಸ್ ಬಂದಿತ್ತು. ಈ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಮೊದಲ ಏಷ್ಯನ್ ಎಂಬ ದಾಖಲೆಯನ್ನು ಕಿಮ್ ಟೇಹ್ಯುಂಗ್ ಬರೆದಿದ್ದರು.

ಇದೀಗ 20 ಮಿಲಿಯನ್ ಲೈಕ್ಸ್ಗಳೊಂದಿಗೆ ವಿರಾಟ್ ಕೊಹ್ಲಿ ಈ ಹೆಗ್ಗಳಿಕೆಗೆ ಪಾತ್ರರಾದ ಏಷ್ಯಾದ 2ನೇ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಹಾಗೆಯೇ ಇನ್ಸ್ಟಾಗ್ರಾಮ್ ಪೋಸ್ಟ್ಗೆ 2 ಕೋಟಿ ಲೈಕ್ಸ್ ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅಂದಹಾಗೆ, ಇನ್ಸ್ಟಾಗ್ರಾಮ್ ಇತಿಹಾಸದಲ್ಲಿ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡ ಪೋಸ್ಟ್ ಲಿಯೋನೆಲ್ ಮೆಸ್ಸಿ ಅವರದ್ದು. 2022ರ ಫುಟ್ಬಾಲ್ ವಿಶ್ವಕಪ್ ಗೆದ್ದ ಬಳಿಕ ಮೆಸ್ಸಿ ಹಂಚಿಕೊಂಡ ಫೋಟೋಗೆ 75 ಮಿಲಿಯನ್ (7.5 ಕೋಟಿ) ಲೈಕ್ಸ್ ಸಿಕ್ಕಿದೆ. ಇದುವೇ ಇನ್ಸ್ಟಾಗ್ರಾಮ್ನಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದುಕೊಂಡ ಪೋಸ್ಟ್.



















