Virat Kohli: ಐಪಿಎಲ್​ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

IPL 2023 Kannada: ಐಪಿಎಲ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 219 ಇನಿಂಗ್ಸ್​ ಮೂಲಕ 6838 ರನ್​ಗಳಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:Apr 15, 2023 | 9:17 PM

IPL 2023 RCB vs DC: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 20ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ 34 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು.

1 / 6
ಈ ಅರ್ಧಶತಕದೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್​ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹೆಸರಿನಲ್ಲಿತ್ತು.

2 / 6
ಶಿಖರ್ ಧವನ್ 209 ಐಪಿಎಲ್ ಇನಿಂಗ್ಸ್​ಗಳಲ್ಲಿ 49 ಅರ್ಧಶತಕ ಹಾಗೂ 2 ಶತಕದೊಂದಿಗೆ ಒಟ್ಟು 51 ಬಾರಿ 50+ ಸ್ಕೋರ್​ ಕಲೆಹಾಕಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಭಾರತೀಯರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

3 / 6
ವಿರಾಟ್ ಕೊಹ್ಲಿ 219	ಐಪಿಎಲ್ ಇನಿಂಗ್ಸ್​ಗಳಲ್ಲಿ ಒಟ್ಟು 52 ಬಾರಿ 50+ ಸ್ಕೋರ್​ ಕಲೆಹಾಕಿದ್ದಾರೆ. ಈ ವೇಳೆ ಕೊಹ್ಲಿಯ ಬ್ಯಾಟ್​ನಿಂದ 5 ಶತಕಗಳು ಹಾಗೂ 47 ಅರ್ಧಶತಕಗಳು ಮೂಡಿಬಂದಿವೆ.

4 / 6
ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ವಾರ್ನರ್ 165 ಐಪಿಎಲ್​ ಇನಿಂಗ್ಸ್​ಗಳಲ್ಲಿ 4 ಶತಕ ಹಾಗೂ 58 ಅರ್ಧಶತಕಗಳೊಂದಿಗೆ ಒಟ್ಟು 62 ಬಾರಿ 50 ಪ್ಲಸ್ ಸ್ಕೋರ್​ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

5 / 6
ಹಾಗೆಯೇ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 219 ಇನಿಂಗ್ಸ್​ ಮೂಲಕ 6838 ರನ್​ಗಳಿಸಿದ್ದಾರೆ. ಇನ್ನು 162 ರನ್​ಗಳಿಸಿದರೆ ಐಪಿಎಲ್ ಇತಿಹಾಸದಲ್ಲೇ 7 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.

6 / 6

Published On - 7:12 pm, Sat, 15 April 23

Follow us