ಗೆದ್ದ ಟೀಮ್ ಇಂಡಿಯಾ: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Sep 13, 2023 | 6:57 PM

Virat Kohli Records: ವಿಶೆಷ ಎಂದರೆ ಈ ಪಟ್ಟಿಯಲ್ಲಿರುವುದು ಇಬ್ಬರೇ ಇಬ್ಬರು ಭಾರತೀಯರು. ಅದರಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರು. ವಿರಾಟ್ ಕೊಹ್ಲಿಗೂ ಮುಂಚಿತವಾಗಿ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300 ಪಂದ್ಯಗಳಲ್ಲಿ ಜಯದ ಭಾಗವಾಗಿದ್ದರು.

1 / 7
ಈ ಬಾರಿಯ ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಆಡಿದ 3 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ. ಭಾರತ ತಂಡದ ಈ ಮೂರು ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ.

2 / 7
ಅಂದರೆ ಶ್ರೀಲಂಕಾ ವಿರುದ್ಧದ ಜಯವು ವಿರಾಟ್ ಕೊಹ್ಲಿ ಪಾಲಿನ 300ನೇ ಗೆಲುವಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300 ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಿದ ವಿಶ್ವದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಕಿಂಗ್ ಕೊಹ್ಲಿ ಕೂಡ ಸೇರ್ಪಡೆಯಾಗಿದ್ದಾರೆ.

3 / 7
ವಿಶೆಷ ಎಂದರೆ ಈ ಪಟ್ಟಿಯಲ್ಲಿರುವುದು ಇಬ್ಬರೇ ಇಬ್ಬರು ಭಾರತೀಯರು. ಅದರಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರು. ವಿರಾಟ್ ಕೊಹ್ಲಿಗೂ ಮುಂಚಿತವಾಗಿ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300 ಪಂದ್ಯಗಳಲ್ಲಿ ಜಯದ ಭಾಗವಾಗಿದ್ದರು.

4 / 7
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 664 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 307 ಪಂದ್ಯಗಳನ್ನು ಗೆದ್ದಿದ್ದಾರೆ. ಇದೀಗ ಈ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ ಕಿಂಗ್ ಕೊಹ್ಲಿ.

5 / 7
ಏಕೆಂದರೆ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 505 ಪಂದ್ಯಗಳನ್ನು ಆಡಿದ್ದು, ಈ ವೇಳೆ ಭಾರತ ತಂಡವು 300 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ 300 ವಿಜಯಗಳ ಭಾಗವಾಗಿರುವ ವಿಶ್ವದ 6ನೇ ಆಟಗಾರ ಎಂಬ ವಿಶ್ವ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 8 ಬಾರಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಕಿಂಗ್ ಕೊಹ್ಲಿ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ.

6 / 7
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಪಾಂಟಿಂಗ್ 560 ಇಂಟರ್​ನ್ಯಾಷನಲ್ ಮ್ಯಾಚ್​ಗಳನ್ನು ಆಡಿದ್ದು, ಈ ವೇಳೆ 377 ಗೆದ್ದಿದ್ದಾರೆ.

7 / 7
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300+ ಪಂದ್ಯಗಳನ್ನು ಗೆದ್ದ ಆಟಗಾರರ ಪಟ್ಟಿ ಹೀಗಿದೆ- ರಿಕಿ ಪಾಂಟಿಂಗ್ (377), ಮಹೇಲಾ ಜಯವರ್ಧನೆ (336), ಸಚಿನ್ ತೆಂಡೂಲ್ಕರ್ (307), ಜಾಕ್ಸ್ ಕಾಲಿಸ್ (305), ಕುಮಾರ ಸಂಗಕ್ಕಾರ (305), ವಿರಾಟ್ ಕೊಹ್ಲಿ (300).