- Kannada News Photo gallery Cricket photos Virat Kohli Faf Du Plesiss: Most 100 plus opening partnerships in IPL
IPL 2023: ಫಾಫ್ ಜೊತೆಗೂಡಿ ಕ್ರಿಸ್ ಗೇಲ್ ಜೊತೆಗಿನ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ
Virat Kohli-Faf Du Plesiss: ಈ ಪಂದ್ಯದಲ್ಲಿ ಎಸ್ಆರ್ಹೆಚ್ ನೀಡಿದ 187 ರನ್ಗಳ ಟಾರ್ಗೆಟ್ ಬೆನ್ನತ್ತಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 64 ಕ್ಕೆ ಬಂದು ನಿಂತಿತು.
Updated on:May 18, 2023 | 11:30 PM

IPL 2023: ಹೈದರಾಬಾದ್ನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಕ್ರಿಸ್ ಗೇಲ್ ಅವರೊಂದಿಗಿನ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಎಸ್ಆರ್ಹೆಚ್ ನೀಡಿದ 187 ರನ್ಗಳ ಟಾರ್ಗೆಟ್ ಬೆನ್ನತ್ತಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 64 ಕ್ಕೆ ಬಂದು ನಿಂತಿತು.

ಪವರ್ಪ್ಲೇ ಬಳಿಕ ಸಿಡಿಲಬ್ಬರದ ಪ್ರದರ್ಶನ ನೀಡಿದ ಡುಪ್ಲೆಸಿಸ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಕಿಂಗ್ ಕೊಹ್ಲಿ ಕೂಡ 35 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಪರಿಣಾಮ 12ನೇ ಓವರ್ ವೇಳೆಗೆ ಆರ್ಸಿಬಿ ತಂಡದ ಮೊತ್ತ 100 ರ ಗಡಿದಾಟಿತು.

ಈ ಶತಕದ ಜೊತೆಯಾಟದೊಂದಿಗೆ ಆರ್ಸಿಬಿ ಪರ ಅತ್ಯಧಿಕ ಬಾರಿ ಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿಗಳ ಪಟ್ಟಿಯಲ್ಲಿ ಫಾಫ್ ಡುಪ್ಲೆಸಿಸ್-ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದರು.

ವಿಶೇಷ ಎಂದರೆ ಈ ಹಿಂದೆ ಅಗ್ರಸ್ಥಾನದಲ್ಲಿದ್ದದು ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್. ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಯೂನಿವರ್ಸ್ ಬಾಸ್-ಕಿಂಗ್ ಕೊಹ್ಲಿ ಜೋಡಿ ಒಟ್ಟು 4 ಬಾರಿ ಶತಕದ ಜೊತೆಯಾಟವಾಡಿದ್ದರು.

ಇದೀಗ ಫಾಫ್ ಡುಪ್ಲೆಸಿಸ್-ವಿರಾಟ್ ಕೊಹ್ಲಿ ಆರಂಭಿಕರಾಗಿ 4ನೇ ಬಾರಿಗೆ ಶತಕದ ಜೊತೆಯಾಟವಾಡಿದ್ದಾರೆ. ಈ ಮೂಲಕ ಆರ್ಸಿಬಿ ಪರ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟವಾಡಿದ ಓಪನರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ಈ ದಾಖಲೆಯ ಜೊತೆಯಾಟದ ಪಟ್ಟಿಯಲ್ಲಿ ಫಾಫ್ ಡುಪ್ಲೆಸಿಸ್ ಹಾಗೂ ಕ್ರಿಸ್ ಗೇಲ್ ಜೊತೆ ಜೊತೆಗಾರನಾಗಿ ವಿರಾಟ್ ಕೊಹ್ಲಿ ಇರುವುದು ವಿಶೇಷ.
Published On - 11:28 pm, Thu, 18 May 23




