AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಟೀಮ್ ಇಂಡಿಯಾ ಜೊತೆ ಅಮೆರಿಕಗೆ ತೆರಳದ ವಿರಾಟ್ ಕೊಹ್ಲಿ..!

T20 World Cup 2024: ಟಿ20 ವಿಶ್ವಕಪ್ 2024 ಜೂನ್ 2 ರಿಂದ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್​ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಜೂನ್ 9 ರಂದು ನಡೆಯಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 26, 2024 | 8:51 AM

ಟಿ20 ವಿಶ್ವಕಪ್​ಗಾಗಿ ಭಾರತ ತಂಡದ ಮೊದಲ ಬ್ಯಾಚ್ ಯುಎಸ್​ಎ (ಅಮೆರಿಕ) ಗೆ ತೆರಳಿದೆ. ನಾಯಕ ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ರಿಷಭ್ ಪಂತ್, ಶಿವಂ ದುಬೆ ಸೇರಿದಂತೆ ಪ್ರಮುಖ ಆಟಗಾರರನ್ನು ಒಳಗೊಂಡಿದ್ದ ಈ ಬ್ಯಾಚ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿಲ್ಲ.

1 / 6
ಇದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ ಅವರ ಯುಎಸ್​ಎ ವೀಸಾ ಪೇಪರ್​ ವರ್ಕ್​ಗಳು ವಿಳಂಬವಾಗಿರುವುದು. ಹೀಗಾಗಿ ಮೊದಲ ಬ್ಯಾಚ್​ ಜೊತೆ ಅವರು ಪ್ರಯಾಣಿಸಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ವಿರಾಟ್ ಕೊಹ್ಲಿ ಮೇ 30 ರಂದು ನ್ಯೂಯಾರ್ಕ್​ಗೆ ತೆರಳುವ ಸಾಧ್ಯತೆಯಿದೆ.

2 / 6
ಒಂದು ವೇಳೆ ಮೇ 30 ರ ಬಳಿಕ ವಿರಾಟ್ ಕೊಹ್ಲಿ ಅಮೆರಿಕದತ್ತ ಪ್ರಯಾಣ ಬೆಳೆಸಿದರೆ, ಅಭ್ಯಾಸ ಪಂದ್ಯಕ್ಕೆ ಗೈರಾಗಲಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಅಭ್ಯಾಸ ಪಂದ್ಯವು ಜೂನ್ 1 ರಂದು ನಡೆಯಲಿದ್ದು, ಅದಕ್ಕೂ ಮುನ್ನ ಅವರು ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

3 / 6
ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ, ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಮೊದಲ ಬ್ಯಾಚ್ ಆಟಗಾರರೊಂದಿಗೆ ತೆರಳಿಲ್ಲ. ಹಾರ್ದಿಕ್ ಸದ್ಯ ಲಂಡನ್‌ನಲ್ಲಿದ್ದು, ಅಲ್ಲಿಂದಲೇ ನೇರವಾಗಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

4 / 6
ಇನ್ನು ಈ ಬಾರಿಯ ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದೆ. ಭಾರತ ತಂಡವು ಜೂನ್ 4 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಣಸಲಿದೆ.

5 / 6
ಭಾರತ ಟಿ20 ವಿಶ್ವಕಪ್​ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.|||ಮೀಸಲು ಆಟಗಾರರು: ಶುಭ್​ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.

6 / 6
Follow us
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​

ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್

ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ

ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!

ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು

ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್

ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ

ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ

ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ

Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?