Virat Kohli: ಮತ್ತೊಂದು ವಿಶ್ವದಾಖಲೆಯ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ! ಬೇಕಿರುವುದು ಎರಡಂಕಿ ರನ್ ಮಾತ್ರ

| Updated By: ಪೃಥ್ವಿಶಂಕರ

Updated on: Oct 27, 2022 | 10:49 AM

Virat Kohli: ವಾಸ್ತವವಾಗಿ ಕೊಹ್ಲಿ ಇನ್ನು 90 ರನ್ ಗಳಿಸಿದರೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲನೇಯ ಸ್ಥಾನಕ್ಕೇರಲಿದ್ದಾರೆ.

1 / 5
ಟಿ20 ವಿಶ್ವಕಪ್​ನಲ್ಲಿ ನೂತನ ದಾಖಲೆ ಬರೆಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ ಇದ್ದಾರೆ. ಇಂದು ಸಿಡ್ನಿಯಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ ನಡುವೆ ನಡೆಯುವ ಪಂದ್ಯದಲ್ಲಿ ಕಿಂಗ್ ಕೊಹ್ಲಿ 90 ರನ್ ಗಳಿಸಿದರೆ ಸಾಕು, ಟಿ20 ವಿಶ್ವಕಪ್​ನಲ್ಲಿ ಯಾರು ಮಾಡಿರದ ದಾಖಲೆಯೊಂದು ಕಿಂಗ್ ಕೊಹ್ಲಿ ಹೆಸರಲ್ಲಿ ದಾಖಲಾಗಲಿದೆ.

2 / 5
ವಾಸ್ತವವಾಗಿ ಕೊಹ್ಲಿ ಇನ್ನು 90 ರನ್ ಗಳಿಸಿದರೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲನೇಯ ಸ್ಥಾನಕ್ಕೇರಲಿದ್ದಾರೆ. ಇದುವರೆಗೆ ಈ ದಾಖಲೆ ಲಂಕಾದ ಜಯವರ್ಧನೆ ಹೆಸರಿನಲ್ಲಿದ್ದು, ಮಹೇಲಾ 2007 ಮತ್ತು 2014 ರ ನಡುವೆ 31 ಟಿ20 ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 1016 ರನ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.

3 / 5
2021 ರ ಟಿ20 ವಿಶ್ವಕಪ್‌ನಲ್ಲಿ, ವಿಂಡೀಸ್ ದೈತ್ಯ ಕ್ರಿಸ್ ಗೇಲ್, ಜಯವರ್ಧನೆ ಅವರ ದಾಖಲೆಯನ್ನು ಮುರಿಯುವ ಸಮೀಪಕ್ಕೆ ಬಂದಿದ್ದರು. ಆದರೆ 51 ರನ್‌ಗಳ ಅಂತರದಿಂದ ಗೇಲ್​ಗೆ ಈ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಗೇಲ್ 2007-2021ರ ನಡುವೆ 33 ಟಿ20ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 965 ರನ್ ಗಳಿಸಿದ್ದಾರೆ.

4 / 5
ಈ ರನ್ ಮಾಸ್ಟರ್ಸ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದು, ಕೊಹ್ಲಿ ಇದುವರೆಗೆ 22 ಟಿ20 ಪಂದ್ಯಗಳ 20 ಇನ್ನಿಂಗ್ಸ್‌ಗಳಲ್ಲಿ 927 ರನ್ ಗಳಿಸಿದ್ದಾರೆ. ಅಂದರೆ, ವಿರಾಟ್ ಇನ್ನು 39 ರನ್ ಗಳಿಸಿದರೆ, ಈ ಪಟ್ಟಿಯಲ್ಲಿ ಗೇಲ್ ಅವರನ್ನು ಹಿಂದಿಕ್ಕಲಿದ್ದಾರೆ. ಹಾಗೆಯೇ 90 ರನ್ ಗಳಿಸಿದರೆ, ಕಳೆದ 8 ವರ್ಷಗಳಿಂದ ಮಹೇಲಾ ಜಯವರ್ಧನೆ ಹೆಸರಿನಲ್ಲಿರುವ ಟಿ20 ವಿಶ್ವಕಪ್‌ನ ಅತಿದೊಡ್ಡ ದಾಖಲೆಯನ್ನು ಸಹ ಮುರಿಯಲಿದ್ದಾರೆ.

5 / 5
ಇನ್ನು ಈ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಗೆಲುವಿನ ಇನ್ನಿಂಗ್ಸ್ ಆಡಿದ್ದ ಚೇಸ್ ಕಿಂಗ್ ಕೊಹ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಸಿಡಿಸಿದ್ದರು. ಅದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಕೊಹ್ಲಿ ಪಾಲಾಗಿತ್ತು.

Published On - 10:43 am, Thu, 27 October 22