VHT 2025-26: ಕೇವಲ ಬೌಂಡರಿಗಳಿಂದಲೇ ಅರ್ಧಶತಕ ಚಚ್ಚಿದ ವಿರಾಟ್ ಕೊಹ್ಲಿ

Updated on: Dec 26, 2025 | 7:55 PM

Virat Kohli's Vijay Hazare Trophy Dominance: ವಿಜಯ್ ಹಜಾರೆ ಟ್ರೋಫಿಗೆ 15 ವರ್ಷಗಳ ಬಳಿಕ ಮರಳಿದ ವಿರಾಟ್ ಕೊಹ್ಲಿ, ದೆಹಲಿ ಪರ ಅಬ್ಬರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದರೆ, ಎರಡನೇ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸಿದರು. ಎರಡು ಪಂದ್ಯಗಳಲ್ಲಿ 208 ರನ್ ಕಲೆಹಾಕಿ, ವಿಜಯ್ ಹಜಾರೆ ಟ್ರೋಫಿಯಲ್ಲಿ 1000 ರನ್ ಗಡಿ ದಾಟಿದ್ದಾರೆ. ಕೊಹ್ಲಿಯ ಪ್ರದರ್ಶನ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

1 / 5
ಸುಮಾರು 15 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ಟೀಂ ಇಂಡಿಯಾದ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್​ ಅನ್ನು ಮುಂದುವರೆಸಿದ್ದಾರೆ. ದೆಹಲಿ ತಂಡದ ಪರ ಆಡುತ್ತಿರುವ ವಿರಾಟ್ ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಶತಕ ಬಾರಿಸಿದರೆ, ಪಂದ್ಯಾವಳಿಯ ತಮ್ಮ ಎರಡನೇ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

2 / 5
ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಎರಡನೇ ಪಂದ್ಯದಲ್ಲಿ ದೆಹಲಿ ತಂಡವು ಡಿಸೆಂಬರ್ 26 ರ ಶುಕ್ರವಾರದಂದು ಗುಜರಾತ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ಪರ ಹಿಂದಿನ ಪಂದ್ಯದಲ್ಲಿ ಕೇವಲ 101 ಎಸೆತಗಳಲ್ಲಿ 131 ರನ್  ಬಾರಿಸಿದ್ದ ವಿರಾಟ್ ಕೊಹ್ಲಿ , ಈ ಪಂದ್ಯದಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು.

3 / 5
ಎರಡನೇ ಓವರ್‌ನಲ್ಲಿ ದೆಹಲಿ ಮತ್ತೊಮ್ಮೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇದರಿಂದ ಬೇಗನೇ ಕ್ರೀಸ್​ಗಿಳಿದ ವಿರಾಟ್ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆ ತೆರೆದರು. ಆ ನಂತರ ಬೌಂಡರಿಗಳ ಮಳೆ ಸುರಿಸಿದ ಕೊಹ್ಲಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ವಿರಾಟ್ ಅವರ ಲಿಸ್ಟ್ ಎ ವೃತ್ತಿಜೀವನದ 85 ನೇ ಅರ್ಧಶತಕವಾಗಿದೆ ಎಂಬುದು ವಿಶೇಷ

4 / 5
ಬೌಂಡರಿ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದ ಕೊಹ್ಲಿ ಕಲೆಹಾಕಿದ 53 ರನ್​ಗಳಲ್ಲಿ 50 ರನ್‌ಗಳು ಕೇವಲ ಬೌಂಡರಿಗಳಿಂದಲೇ ಬಂದವು. ಅಂದರೆ ಕೊಹ್ಲಿ ತಮ್ಮ ಅರ್ಧಶತಕದ ಇನ್ನಿಂಗ್ಸ್​ನಲ್ಲಿ 11 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಬಾರಿಸಿದ್ದರು. ಆದಾಗ್ಯೂ, ಈ ಬಾರಿ ಶತಕ ಬಾರಿಸಲು ವಿಫಲರಾದ ಕೊಹ್ಲಿ 58 ಎಸೆತಗಳಲ್ಲಿ 77 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿ ಔಟಾದರು.

5 / 5
ಇದುವರೆಗೆ ಈ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನಾಡಿರುವ ಕೊಹ್ಲಿ 100 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 208 ರನ್ ಬಾರಿಸಿದ್ದಾರೆ. ಒಟ್ಟಾರೆ ವಿಜಯ್ ಹಜಾರೆ ಟ್ರೋಫಿಯಲ್ಲಿ 15 ಪಂದ್ಯಗಳನ್ನಾಡಿರುವ ಕೊಹ್ಲಿ 1,000 ರನ್ ಕಲೆಹಾಕಿದ್ದಾರೆ. ಆದಾಗ್ಯೂ ಕೊಹ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂದೆ ಆಡುವುದು ಅನುಮಾನವಾಗಿದ್ದು, ಮುಂದಿನ ವರ್ಷ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.