Virat Kohli: 100 ಪಂದ್ಯಗಳ ಬಳಿಕ ವಿರಾಟ್ ಕೊಹ್ಲಿ-ಬಾಬರ್ ಆಝಂ ದಾಖಲೆ ಹೀಗಿವೆ

Edited By:

Updated on: May 10, 2023 | 5:29 PM

Virat Kohli vs Babar Azam: ಬಾಬರ್ 100 ಏಕದಿನ ಪಂದ್ಯಗಳಲ್ಲಿ 18 ಶತಕ ಮತ್ತು 26 ಅರ್ಧಶತಕಗಳೊಂದಿಗೆ 5,089 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ಹಾದಿಯಲ್ಲೇ ದಾಪುಗಾಲಿಟ್ಟಿದ್ದಾರೆ.

1 / 9
ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಏಕದಿನ ಕ್ರಿಕೆಟ್​ನಲ್ಲಿ 100 ಪಂದ್ಯಗಳನ್ನು ಪೂರೈಸಿದ್ದಾರೆ. ಈ ನೂರು ಪಂದ್ಯಗಳ ಬೆನ್ನಲ್ಲೇ ವಿರಾಟ್ ಕೊಹ್ಲಿ ಜೊತೆಗಿನ ದಾಖಲೆಗಳ ತುಲನೆಯು ಮುನ್ನಲೆಗೆ ಬಂದಿದೆ.

ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಏಕದಿನ ಕ್ರಿಕೆಟ್​ನಲ್ಲಿ 100 ಪಂದ್ಯಗಳನ್ನು ಪೂರೈಸಿದ್ದಾರೆ. ಈ ನೂರು ಪಂದ್ಯಗಳ ಬೆನ್ನಲ್ಲೇ ವಿರಾಟ್ ಕೊಹ್ಲಿ ಜೊತೆಗಿನ ದಾಖಲೆಗಳ ತುಲನೆಯು ಮುನ್ನಲೆಗೆ ಬಂದಿದೆ.

2 / 9

ಬಾಬರ್ ಆಝಂ 100 ಏಕದಿನ ಪಂದ್ಯಗಳ ಬಳಿಕ ಒಟ್ಟು 5089 ರನ್​ ಕಲೆಹಾಕಿದ್ದಾರೆ. ಅಂದರೆ ಏಕದಿನ ಕ್ರಿಕೆಟ್​ನಲ್ಲಿ 59.17 ರ ಸರಾಸರಿಯಲ್ಲಿ ರನ್​ಗಳಿಸಿ ಮಿಂಚಿದ್ದಾರೆ.

3 / 9

ಇನ್ನೊಂದೆಡೆ ವಿರಾಟ್ ಕೊಹ್ಲಿ 100 ಏಕದಿನ ಪಂದ್ಯಗಳ ಬಳಿಕ ಕಲೆಹಾಕಿರುವುದು 4107 ರನ್​ಗಳು ಮಾತ್ರ. ಅಂದರೆ ಬಾಬರ್​ಗಿಂತ ಕೊಹ್ಲಿ ಸಾವಿರ ರನ್​ ಕಡಿಮೆ ರನ್ ಬಾರಿಸಿದ್ದರು.

4 / 9

ಇನ್ನು ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ ಏಕದಿನ ಕ್ರಿಕೆಟ್​ನಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆಯನ್ನು ಕೂಡ ಬಾಬರ್ ಆಝಂ ನಿರ್ಮಿಸಿದ್ದಾರೆ.

5 / 9

ಏಕದಿನ ಕ್ರಿಕೆಟ್​​ನಲ್ಲಿ 97 ಇನಿಂಗ್ಸ್​ಗಳ ಮೂಲಕ ಬಾಬರ್ ಆಝಂ 5 ಸಾವಿರ ರನ್ ಪೂರೈಸಿದ್ದರು. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾದ ಹಾಶಿಮ್ ಆಮ್ಲಾ ಹೆಸರಿನಲ್ಲಿತ್ತು. ಆಮ್ಲ ಈ ಸಾಧನೆ ಮಾಡಲು 101 ಇನಿಂಗ್ಸ್ ತೆಗೆದುಕೊಂಡಿದ್ದರು.

6 / 9

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 5 ಸಾವಿರ ರನ್ ಪೂರೈಸಲು ಬರೋಬ್ಬರಿ 114 ಇನಿಂಗ್ಸ್ ಆಡಿದ್ದರು. ಅಂದರೆ ಕೊಹ್ಲಿಗಿಂತ ಕಡಿಮೆ ಇನಿಂಗ್ಸ್ ಮೂಲಕ ಬಾಬರ್ ಆಝಂ (97 ಇನಿಂಗ್ಸ್​) ಈ ಸಾಧನೆ ಮಾಡಿದ್ದಾರೆ.

7 / 9

ಇನ್ನು ಏಕದಿನ ಕ್ರಿಕೆಟ್​ನಲ್ಲಿ 100 ಪಂದ್ಯಗಳ ಬಳಿಕ ಅತೀ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆ ಕೂಡ ಬಾಬರ್ ಆಝಂ ಪಾಲಾಗಿದೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಕೂಡ ಹಶೀಮ್ ಆಮ್ಲಾ (4808 ರನ್) ಹೆಸರಿನಲ್ಲಿತ್ತು.

8 / 9

ಇದೀಗ 100 ಏಕದಿನ ಪಂದ್ಯಗಳ ಬಳಿಕ 5089 ರನ್​ ಬಾರಿಸುವ ಮೂಲಕ ಬಾಬರ್ ಆಝಂ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

9 / 9

ಸದ್ಯ ವಿರಾಟ್ ಕೊಹ್ಲಿ 274 ಏಕದಿನ ಪಂದ್ಯಗಳಲ್ಲಿ 57.32 ಸರಾಸರಿಯಲ್ಲಿ 46 ಶತಕಗಳು ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ. ಇದೇ ವೇಳೆ ಬಾಬರ್ 100 ಏಕದಿನ ಪಂದ್ಯಗಳಲ್ಲಿ 18 ಶತಕ ಮತ್ತು 26 ಅರ್ಧಶತಕಗಳೊಂದಿಗೆ 5,089 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ಹಾದಿಯಲ್ಲೇ ದಾಪುಗಾಲಿಟ್ಟಿದ್ದಾರೆ.

Published On - 5:29 pm, Wed, 10 May 23

Loading...
Unable to load recommendations.
Follow Us