Virat Kohli: ಐಸಿಸಿ ಪ್ರಶಸ್ತಿ ಸ್ವೀಕರಿಸಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Virat Kohli: 2022 ರ ಐಸಿಸಿ ಟಿ20 ತಂಡದ ಭಾಗವಾಗಿದ್ದರು. ಅಂದರೆ ಐಸಿಸಿ ಪ್ರಕಟಿಸಿರುವ ಮೂರು ಮಾದರಿಯ ತಂಡದಲ್ಲೂ ಕಾಣಿಸಿಕೊಂಡ ಆಟಗಾರ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. . ಒಟ್ಟಿನಲ್ಲಿ ಮೈದಾನಕ್ಕಿಳಿಯುವ ಮೂಲಕ ಒಂದಲ್ಲ ಒಂದು ದಾಖಲೆ ಬರೆಯುವ ಕಿಂಗ್ ಕೊಹ್ಲಿ ಈ ಬಾರಿ ಐಸಿಸಿ ಪ್ರಶಸ್ತಿಗಳ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ.
1 / 7
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) 2023ರ ಐಸಿಸಿ ಏಕದಿನ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಟಿ20 ವಿಶ್ವಕಪ್ಗಾಗಿ ನ್ಯೂಯಾರ್ಕ್ನಲ್ಲಿರುವ ಕೊಹ್ಲಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ಇದರೊಂದಿಗೆ ಅತೀ ಹೆಚ್ಚು ಬಾರಿ ಏಕದಿನ ಆಟಗಾರನ ಪ್ರಶಸ್ತಿ ಪಡೆದ ದಾಖಲೆಯೊಂದು ಕಿಂಗ್ ಕೊಹ್ಲಿ ಪಾಲಾಗಿದೆ. ಹಾಗೆಯೇ ಅತ್ಯಧಿಕ ಬಾರಿ ಐಸಿಸಿ ಪ್ರಶಸ್ತಿ ಪಡೆದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2 / 7
ವಿರಾಟ್ ಕೊಹ್ಲಿ ಇದುವರೆಗೆ 4 ಬಾರಿ ಐಸಿಸಿ ಏಕದಿನ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ ಒಟ್ಟು 10 ಬಾರಿ ICC ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿಯನ್ನು ಹೊರತುಪಡಿಸಿ ವಿಶ್ವದ ಯಾವುದೇ ಆಟಗಾರ ಇಷ್ಟೊಂದು ಪ್ರಶಸ್ತಿ ಪಡೆದಿಲ್ಲ ಎಂಬುದು ವಿಶೇಷ.
3 / 7
2012, 2017, 2018 ಮತ್ತು 2023 ರಲ್ಲಿ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ 2018 ರಲ್ಲಿ ಐಸಿಸಿ ಟೆಸ್ಟ್ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು.
4 / 7
ಇನ್ನು 2017 ಮತ್ತು 2018 ರಲ್ಲಿ ವಿರಾಟ್ ಕೊಹ್ಲಿ ಐಸಿಸಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿದ್ದರು. ಇದಲ್ಲದೆ 2010 ರಲ್ಲಿ ಕಿಂಗ್ ಕೊಹ್ಲಿ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು.
5 / 7
ಹಾಗೆಯೇ 2010 ರಲ್ಲಿ ದಶಕದ ಅತ್ಯುತ್ತಮ ಏಕದಿನ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಇನ್ನು 2019 ರಲ್ಲಿ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೂ ಭಾಜನರಾಗಿದ್ದರು. ಈ ಮೂಲಕ ಒಟ್ಟು 10 ಐಸಿಸಿ ಪ್ರಶಸ್ತಿಗಳನ್ನು ಪಡೆದ ವಿಶ್ವದ ಏಕೈಕ ಆಟಗಾರ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
6 / 7
ಇದಲ್ಲದೆ, 2012, 2014, 2016, 2017, 2018, 2019 ಮತ್ತು 2023 ರ ಐಸಿಸಿ ಏಕದಿನ ತಂಡದ ಭಾಗವಾಗಿದ್ದಾರೆ. ಹಾಗೆಯೇ 2017, 2018 ಮತ್ತು 2019 ರಲ್ಲಿ ಐಸಿಸಿ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು.
7 / 7
2022 ರ ಐಸಿಸಿ ಟಿ20 ತಂಡದ ಭಾಗವಾಗಿದ್ದರು. ಅಂದರೆ ಐಸಿಸಿ ಪ್ರಕಟಿಸಿರುವ ಮೂರು ಮಾದರಿಯ ತಂಡದಲ್ಲೂ ಕಾಣಿಸಿಕೊಂಡ ಆಟಗಾರ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ಒಟ್ಟಿನಲ್ಲಿ ಮೈದಾನಕ್ಕಿಳಿಯುವ ಮೂಲಕ ಒಂದಲ್ಲ ಒಂದು ದಾಖಲೆ ಬರೆಯುವ ಕಿಂಗ್ ಕೊಹ್ಲಿ ಈ ಬಾರಿ ಐಸಿಸಿ ಪ್ರಶಸ್ತಿಗಳ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ.