Virat Kohli: RCB ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಭಾವನಾತ್ಮಕ ಸಂದೇಶ

| Updated By: ಝಾಹಿರ್ ಯೂಸುಫ್

Updated on: May 24, 2023 | 8:30 PM

IPL 2023 Kannada: ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ 2 ಭರ್ಜರಿ ಶತಕಗಳು ಮೂಡಿಬಂದಿರುವುದು ವಿಶೇಷ. ಅಂದರೆ 2019 ರ ಬಳಿಕ ಕಿಂಗ್ ಕೊಹ್ಲಿ ಐಪಿಎಲ್​ನಲ್ಲಿ ಶತಕ ಬಾರಿಸಿರಲಿಲ್ಲ.

1 / 6
IPL 2023: ಐಪಿಎಲ್ ಸೀಸನ್​ 16 ಅನ್ನು ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಆರಂಭಿಸಿದ್ದ ಆರ್​ಸಿಬಿ ತಂಡವು ಲೀಗ್ ಹಂತದಲ್ಲೇ ಹೊರಬಿದ್ದಿದೆ. ಆಡಿದ 14 ಪಂದ್ಯಗಳಲ್ಲಿ 7 ಜಯ ಹಾಗೂ 7 ಸೋಲಿನೊಂದಿಗೆ ಫಾಫ್ ಡುಪ್ಲೆಸಿಸ್ ಪಡೆ ಅಭಿಯಾನ ಅಂತ್ಯಗೊಳಿಸಿತ್ತು.

2 / 6
ಅದರಲ್ಲೂ ಪ್ಲೇಆಫ್​ಗೇರಲು ಉತ್ತಮ ಅವಕಾಶವಿತ್ತಾದರೂ ಕೊನೆಯ ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆ ಮೂಡಿಸಿತ್ತು. ಇದರೊಂದಿಗೆ ಈ ಸಲ ಕಪ್ ಗೆಲ್ಲಲಿದೆ ಎಂಬ ಆರ್​ಸಿಬಿ ಅಭಿಮಾನಿಗಳ ಬಹುದೊಡ್ಡ ಕನಸು ಕೂಡ ಕಮರಿದೆ.

3 / 6
ಈ ಸೋಲಿನ ಹತಾಶೆಯಲ್ಲಿರುವ ಆರ್​ಸಿಬಿ ಅಭಿಮಾನಿಗಳಿಗಾಗಿ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಅದು ಕೂಡ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುವ ಮೂಲಕ ಎಂಬುದು ವಿಶೇಷ.

4 / 6
ಅತ್ಯುತ್ತಮ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಐಪಿಎಲ್ ಸೀಸನ್...ದುರಾದೃಷ್ಟವಶಾತ್, ನಾವು ಗುರಿ ತಲುಪಲು ಸಾಧ್ಯವಾಗಿಲ್ಲ. ನಿರಾಸೆಯಂತು ಆಗಿದೆ, ಆದರೆ ನಾವು ತಲೆ ಎತ್ತಿಕೊಂಡೇ ಓಡಾಡಬೇಕು. ನಮ್ಮ ನಿಷ್ಠಾವಂತ ಬೆಂಬಲಿಗರಿಗೆ, ಪ್ರತಿ ಹಂತದಲ್ಲೂ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಕೃತಜ್ಞರಾಗಿರುತ್ತೇವೆ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

5 / 6
ಇನ್ನು ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ 2 ಭರ್ಜರಿ ಶತಕಗಳು ಮೂಡಿಬಂದಿರುವುದು ವಿಶೇಷ. ಅಂದರೆ 2019 ರ ಬಳಿಕ ಕಿಂಗ್ ಕೊಹ್ಲಿ ಐಪಿಎಲ್​ನಲ್ಲಿ ಶತಕ ಬಾರಿಸಿರಲಿಲ್ಲ. ಆದರೆ ಈ ಸಲ ಎಸ್​ಆರ್​ಹೆಚ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಕಿಂಗ್ ಕೊಹ್ಲಿ ದಾಖಲೆ ನಿರ್ಮಿಸಿದ್ದರು.

6 / 6
ಹಾಗೆಯೇ 14 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ 2 ಭರ್ಜರಿ ಶತಕದೊಂದಿಗೆ ಒಟ್ಟು 639 ರನ್ ಕಲೆಹಾಕಿದ್ದರು. ಅಲ್ಲದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ಆರ್​ಸಿಬಿ ತಂಡಕ್ಕೆ ಪ್ಲೇಆಫ್ಸ್ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂಬುದೇ ಬೇಸರದ ಸಂಗತಿ.

Published On - 8:30 pm, Tue, 23 May 23