2 ವರ್ಷ ಆಡಿದ್ರೆ ವಿರಾಟ್ ಕೊಹ್ಲಿಗೆ ಸಿಗೋದು ಕೇವಲ 1.62 ಕೋಟಿ ರೂ. ಮಾತ್ರ..!

Updated on: May 14, 2025 | 10:24 AM

Virat Kohli: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಎರಡು ಸ್ವರೂಪಗಳ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. 2024ರ ಟಿ20 ವಿಶ್ವಕಪ್ ಫೈನಲ್ ಬೆನ್ನಲ್ಲೇ ಕೊಹ್ಲಿ ಟಿ20ಐ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು. ಇದೀಗ ಟೆಸ್ಟ್ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಕಿಂಗ್ ಕೊಹ್ಲಿ ಕಾಣಿಸಿಕೊಳ್ಳಲಿರುವುದು ಏಕದಿನ ಕ್ರಿಕೆಟ್​ನಲ್ಲಿ ಮಾತ್ರ.

1 / 6
ವಿರಾಟ್ ಕೊಹ್ಲಿ (Virat Kohli) ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ನಿವೃತ್ತಿಯ ಹೊರತಾಗಿಯೂ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಮುಂದಿನ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಆಡಲಿರುವುದು ಕೇವಲ 27 ಪಂದ್ಯಗಳನ್ನು ಮಾತ್ರ.

ವಿರಾಟ್ ಕೊಹ್ಲಿ (Virat Kohli) ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ನಿವೃತ್ತಿಯ ಹೊರತಾಗಿಯೂ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಮುಂದಿನ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಆಡಲಿರುವುದು ಕೇವಲ 27 ಪಂದ್ಯಗಳನ್ನು ಮಾತ್ರ.

2 / 6

2027ರ ಏಕದಿನ ವಿಶ್ವಕಪ್​ವರೆಗೆ ಟೀಮ್ ಇಂಡಿಯಾ 9 ಸರಣಿಗಳನ್ನು ಆಡಲಿದೆ. ಈ ಸರಣಿಗಳ ಮೂಲಕ ಭಾರತ ತಂಡವು ಒಟ್ಟು 27 ಏಕದಿನ ಪಂದ್ಯಗಳನ್ನಾಡಲಿದೆ. ಈ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಂಡರೆ ವಿರಾಟ್ ಕೊಹ್ಲಿಗೆ ಸಿಗಲಿರುವುದು ಕೇವಲ 1.62 ಕೋಟಿ ರೂ. ಮಾತ್ರ ಎಂದರೆ ನಂಬಲೇಬೇಕು.

3 / 6

ಏಕೆಂದರೆ ವಿರಾಟ್ ಕೊಹ್ಲಿಗೆ ಏಕದಿನ ಪಂದ್ಯವಾಡಿದರೆ, ಪಂದ್ಯ ಶುಲ್ಕವಾಗಿ 6 ಲಕ್ಷ ರೂ. ನೀಡಲಾಗುತ್ತಿದೆ. ಅದರಂತೆ ಮುಂದಿನ 27 ಪಂದ್ಯಗಳಲ್ಲಿ ಕಣಕ್ಕಿಳಿದರೆ ಅವರಿಗೆ ಒಟ್ಟು 1.62 ಕೋಟಿ ರೂ. ಸಂಭಾವನೆ ಸಿಗಲಿದೆ. ಇನ್ನು ಈ ಪಂದ್ಯಗಳನ್ನು ಆಡುವುದು ಕೂಡ ವಿರಾಟ್ ಕೊಹ್ಲಿ ಪಾಲಿಗೆ ಅನಿವಾರ್ಯ.

4 / 6

2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ವಿರಾಟ್ ಕೊಹ್ಲಿ ಒಡಿಐ ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇದಾಗ್ಯೂ ಅವರಿಗೆ ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗಬೇಕಿದ್ದರೆ, ಉಳಿದಿರುವ 27 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ.

5 / 6

ಅದರಂತೆ ಬಾಂಗ್ಲಾದೇಶ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಳಲ್ಲಿ ಮಿಂಚಿದರೆ ಮಾತ್ರ ವಿರಾಟ್ ಕೊಹ್ಲಿಗೆ ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗಬಹುದು. ಹೀಗಾಗಿ ಕಿಂಗ್ ಕೊಹ್ಲಿ ಪಾಲಿಗೆ ಮುಂದಿನ 27 ಪಂದ್ಯಗಳು ಮಾಡು ಇಲ್ಲವೇ ಮಡಿ ಎಂದರೆ ತಪ್ಪಾಗಲಾರದು.

6 / 6

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಈವರೆಗೆ 302 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 290 ಇನಿಂಗ್ಸ್ ಆಡಿರುವ ಅವರು ಒಟ್ಟು 14181 ರನ್ ಕಲೆಹಾಕಿದ್ದಾರೆ. ಇದರ ನಡುವೆ 51 ಶತಕ ಹಾಗೂ 74 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

Loading...
Unable to load recommendations.
Follow Us