ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಯಾರೆಂದು ತಿಳಿಸಿದ ಸೆಹ್ವಾಗ್
TV9 Web | Updated By: ಝಾಹಿರ್ ಯೂಸುಫ್
Updated on:
Jun 04, 2023 | 4:11 PM
Virender Sehwag: ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಎಂಬ ಪ್ರಶ್ನೆ ಮುಂದಿಟ್ಟರೆ ಒಂದಷ್ಟು ಹೆಸರುಗಳು ಕಣ್ಮುಂದೆ ಬರಬಹುದು. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಮೊಹಮ್ಮದ್ ಯೂಸುಫ್, ಇಂಝಮಾಮ್ ಉಲ್ ಹಕ್ ಹೀಗೆ ಸ್ಟಾರ್ ಕ್ರಿಕೆಟಿಗರ ಹೆಸರು ಕಾಣಸಿಗುತ್ತವೆ.
1 / 9
ವಿಶ್ವ ಕ್ರಿಕೆಟ್ನ ಬೆಸ್ಟ್ ಬ್ಯಾಟ್ಸ್ಮನ್ ಯಾರು? ಈ ಪ್ರಶ್ನೆಗೆ ಸಾಮಾನ್ಯವಾಗಿ ಕೇಳಿ ಬರುವ ಉತ್ತರ..ಡಾನ್ ಬ್ರಾಡ್ಮನ್, ವಿವಿ ರಿಚರ್ಡ್ಸ್, ಸಚಿನ್ ತೆಂಡೂಲ್ಕರ್...ಅದೇ ಏಷ್ಯಾದ ಅತ್ಯುತ್ತಮ ಬ್ಯಾಟರ್ ಯಾರೆಂದರೆ ಥಟ್ಟನೆ ಬರುವ ಉತ್ತರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.
2 / 9
ಇನ್ನು ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಎಂಬ ಪ್ರಶ್ನೆ ಮುಂದಿಟ್ಟರೆ ಒಂದಷ್ಟು ಹೆಸರುಗಳು ಕಣ್ಮುಂದೆ ಬರಬಹುದು. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ಮಹೇಲ ಜಯವರ್ಧನೆ, ಮೊಹಮ್ಮದ್ ಯೂಸುಫ್, ಕುಮಾರ್ ಸಂಗಾಕ್ಕರ, ಇಂಝಮಾಮ್ ಉಲ್ ಹಕ್ ಹೀಗೆ ಸ್ಟಾರ್ ಕ್ರಿಕೆಟಿಗರ ಹೆಸರು ಕಾಣಸಿಗುತ್ತವೆ. ಇವರಲ್ಲಿ ಯಾರು ಬೆಸ್ಟ್ ಎಂಬುದನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದಾರೆ.
3 / 9
ಗೌರವ್ ಕಪೂರ್ ಅವರ ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಸಂದರ್ಶನದಲ್ಲಿ ಮಾತನಾಡಿದ ಸೆಹ್ವಾಗ್, ಸಾಮಾನ್ಯವಾಗಿ ಎಲ್ಲರೂ ಬೆಸ್ಟ್ ಬ್ಯಾಟ್ಸ್ಮನ್ ಆಗಿರುವ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಮಾತನಾಡುತ್ತಾರೆ. ಆದರೆ ಮಧ್ಯಮ ಕ್ರಮಾಂಕದ ಅತ್ಯುತ್ತಮ ಬ್ಯಾಟ್ಸ್ಮನ್ ಬಗ್ಗೆ ಚರ್ಚಿಸುವುದಿಲ್ಲ.
4 / 9
ನನ್ನ ಪ್ರಕಾರ ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಏಷ್ಯಾ ಕಂಡಂತಹ ಬೆಸ್ಟ್ ಮಿಡಲ್ ಆರ್ಡರ್ ಬ್ಯಾಟ್ಸ್ಮನ್. ಏಕೆಂದರೆ ಪ್ರತಿ ಓವರ್‌ಗೆ ಎಂಟು ರನ್‌ಗಳ ಅವಶ್ಯಕತೆಯಿದ್ದರೂ ಅವರು ಯಾವತ್ತೂ ಭಯಪಡುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ನಾನು ಇಂಝಮಾಮ್ ಉಲ್ ಹಕ್ ಅವರನ್ನು ಆಯ್ಕೆ ಮಾಡುತ್ತೇನೆ ಸೆಹ್ವಾಗ್ ಹೇಳಿದ್ದಾರೆ.
5 / 9
ಇಲ್ಲಿ ಸಚಿನ್ ತೆಂಡಲ್ಕೂರ್ ಇತರೆ ಬ್ಯಾಟ್ಸ್ಮನ್ಗಳಿಗಿಂತ ಮೇಲಿದ್ದರು. ಹೀಗಾಗಿ ಅವರನ್ನು ಅತ್ಯುತ್ತಮ ಬ್ಯಾಟರ್ಗಳ ಗುಂಪಿನಲ್ಲಿ ಸೇರಿಸಲಾಗುವುದಿಲ್ಲ. ಸಚಿನ್ ಅವರ ಲೆವೆಲೇ ಬೇರೆ. ಹೀಗಾಗಿ ಇತರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಗಣನೆಗೆ ತೆಗೆದುಕೊಂಡರೆ, ಇಂಝಮಾಮ್ ಉಲ್ ಹಕ್ ಅಗ್ರಸ್ಥಾನದಲ್ಲಿದ್ದಾರೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
6 / 9
ಅಲ್ಲದೆ ಭಾರತ, ಶ್ರೀಲಂಕಾ, ಪಾಕಿಸ್ತಾನದ ಅತ್ಯಂತ ಶ್ರೇಷ್ಠ-ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ನ ವಿಷಯಕ್ಕೆ ಬಂದರೂ, ನಾನು ಇಂಝಮಾಮ್ ಉಲ್ ಹಕ್ ಅವರನ್ನು ಮೀರಿಸುವ ಮತ್ತೊಬ್ಬ ಬ್ಯಾಟರ್ ಅನ್ನು ನೋಡಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
7 / 9
ಇಂಝಮಾಮ್ ಉಲ್ ಹಕ್ ಅವರನ್ನು ಆತ್ಯುತ್ತಮ ಬ್ಯಾಟರ್ ಎನ್ನಲು ಏನು ಕಾರಣ ಎಂಬುದನ್ನು ಸಹ ಸೆಹ್ವಾಗ್ ವಿವರಿಸಿದರು. ಚೇಸಿಂಗ್ ಮಾಡುವಾಗ ಇಂಜಮಾಮ್-ಉಲ್-ಹಕ್ ನಿರ್ಭೀತರಾಗಿದ್ದರು. 2003-04 ರಲ್ಲೇ ಪ್ರತಿ ಓವರ್‌ಗೆ 8 ರನ್ ಗಳಿಸಬೇಕಿದ್ದರೂ ಅವರು ಯಾವುದೇ ಟೆನ್ಶನ್ ಆಗುತ್ತಿರಲಿಲ್ಲ.
8 / 9
ಯಾವುದೇ ಚಿಂತೆ ಮಾಡಬೇಡಿ. ನಾವು ಸುಲಭವಾಗಿ ಸ್ಕೋರ್ ಮಾಡುತ್ತೇವೆ. 10 ಓವರ್‌ಗಳಲ್ಲಿ 80 ರನ್ ಅಗತ್ಯವಿದೆ ಅಷ್ಟೇ. ಆ ಒಂದು ಆತ್ಮ ವಿಶ್ವಾಸದಲ್ಲಿ ಇಂಝಮಾಮ್ ಉಲ್ ಹಕ್ ಬ್ಯಾಟ್ ಬೀಸುತ್ತಿದ್ದರು ಎಂದು ಪಾಕ್ ತಂಡದ ಮಾಜಿ ನಾಯಕನ ಆಟವನ್ನು ಸೆಹ್ವಾಗ್ ನೆನಪಿಸಿಕೊಂಡಿದ್ದಾರೆ.
9 / 9
ಇದೇ ಕಾರಣದಿಂದಾಗಿ ಏಷ್ಯಾ ಕಂಡಂತಹ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಇಂಝಮಾಮ್ ಉಲ್ ಹಕ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸೆಹ್ವಾಗ್ ತಿಳಿಸಿದರು.
Published On - 4:06 pm, Sun, 4 June 23