ಇನ್ನು ಚೇತನ್ಗೆ ಉತ್ತಮ ಸಾಥ್ ನೀಡಿದ ನಿಕಿನ್ ಜೋಸ್ ಕೂಡ ಅದ್ಭುತ ಇನಿಂಗ್ಸ್ ಆಡಿದರು. ನಮೀಬಿಯಾದ ಅನುಭವಿ ಬೌಲರ್ಗಳನ್ನು ದಿಟ್ಟತನದಿಂದಲೇ ಎದುರಿಸಿದ ನಿಕಿನ್ 109 ಎಸೆತಗಳಲ್ಲಿ 103 ರನ್ ಬಾರಿಸಿ ಮಿಂಚಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಕರ್ನಾಟಕ ತಂಡವು 4 ವಿಕೆಟ್ ನಷ್ಟಕ್ಕೆ 360 ರನ್ ಕಲೆಹಾಕಿದೆ.