ಆಸ್ಟ್ರೇಲಿಯಾದ 7 ಮೈದಾನಗಳಲ್ಲಿ ಟಿ20 ವಿಶ್ವಕಪ್ ಆಯೋಜನೆ; ಯಾವ ಮೈದಾನದಲ್ಲಿ ಎಷ್ಟು ಪಂದ್ಯ? ಇಲ್ಲಿದೆ ಮಾಹಿತಿ
TV9 Web | Updated By: ಪೃಥ್ವಿಶಂಕರ
Updated on:
Oct 21, 2022 | 7:30 AM
T20 World Cup 2022: 8ನೇ ಆವೃತ್ತಿಯ ಟಿ20 ವಿಶ್ವಕಪ್ ಆಯೋಜನೆಗೆ ಆಸ್ಟ್ರೇಲಿಯ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಪಂದ್ಯಾವಳಿಯ ಅರ್ಹತಾ ಸುತ್ತು ಈಗಾಗಲೇ ಆರಂಭವಾಗಿದ್ದು, ಸೂಪರ್ 12 ಸುತ್ತಿನ ಪಂದ್ಯಗಳು ಅ.22 ರಿಂದ ಆರಂಭವಾಗಲಿವೆ.
1 / 8
8ನೇ ಆವೃತ್ತಿಯ ಟಿ20 ವಿಶ್ವಕಪ್ ಆಯೋಜನೆಗೆ ಆಸ್ಟ್ರೇಲಿಯ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಪಂದ್ಯಾವಳಿಯ ಅರ್ಹತಾ ಸುತ್ತು ಈಗಾಗಲೇ ಆರಂಭವಾಗಿದ್ದು, ಸೂಪರ್ 12 ಸುತ್ತಿನ ಪಂದ್ಯಗಳು ಅ.22 ರಿಂದ ಆರಂಭವಾಗಲಿವೆ. ಈ ಚುಟುಕು ಸಮರ ಆಸ್ಟ್ರೇಲಿಯಾದ ಪ್ರಮುಖ 7 ಕ್ರೀಡಾಂಗಣಗಳಲ್ಲಿ ನಡೆಯಲ್ಲಿದ್ದು, ಆ ಕ್ರೀಡಾಂಗಣಗಳ ಬಗೆಗಿನ ಪೂರ್ಣ ಮಾಹಿತಿ ಹೀಗಿದೆ.
2 / 8
ಮೆಲ್ಬೋರ್ನ್ ಕ್ರಿಕೆಟ್ ಮೈದಾನ: ನರೇಂದ್ರ ಮೋದಿ ಕ್ರೀಡಾಂಗಣವನ್ನು ನವೀಕರಿಸುವವರೆಗೂ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿತ್ತು. ಮೆಲ್ಬೋರ್ನ್‌ನ ಯರ್ರಾ ಪಾರ್ಕ್‌ನಲ್ಲಿರುವ ಈ ಕ್ರೀಡಾಂಗಣ ಸಾಕಷ್ಟು ಕ್ರಿಕೆಟ್ ಇತಿಹಾಸಕ್ಕೆ ಸಾಕ್ಷಿಯಾಗಿದೆ. 1 ಲಕ್ಷದ 24 ಸಾವಿರ ಪ್ರೇಕ್ಷಕರು ಕೂರವ ಸಾಮಥ್ಯ್ರ ಹೊಂದಿರುವ ಈ ಕ್ರೀಡಾಂಗಣ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಜ್ಜಾಗಿದೆ. ಈ ಕ್ರೀಡಾಂಗಣವನ್ನು ಸ್ಥಳೀಯವಾಗಿ 'ದಿ ಜಿ' ಎಂದು ಕರೆಯಲಾಗುತ್ತದೆ.
3 / 8
ಸಿಡ್ನಿ ಕ್ರಿಕೆಟ್ ಮೈದಾನ: ವಿಶ್ವದ ಅತ್ಯಂತ ಸುಂದರವಾದ ಮತ್ತು ಜನಪ್ರಿಯ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿದ್ದು, ಸಿಡ್ನಿಯು ಕಳೆದ 150 ವರ್ಷಗಳಿಂದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುತ್ತಿದೆ. 48,600 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿದ್ದು, ಈ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್‌ನ 7 ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ ನವೆಂಬರ್ 9 ರಂದು ನಡೆಯುವ ಸೆಮಿಫೈನಲ್ ಪಂದ್ಯವೂ ಒಳಗೊಂಡಿದೆ.
4 / 8
ಅಡಿಲೇಡ್ ಓವಲ್: ಅಡಿಲೇಡ್ ನಗರದಲ್ಲಿರುವ ಈ ಕ್ರೀಡಾಂಗಣದಲ್ಲಿ 2017 ರಲ್ಲಿ ಮೊದಲ ಹಗಲು-ರಾತ್ರಿ ಪಂದ್ಯವನ್ನು ಆಯೋಜಿಸಲಾಗಿತ್ತು. ಒಟ್ಟು 50,500 ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇರುವ ಈ ಕ್ರೀಡಾಂಗಣದಲ್ಲಿ 7 ಪಂದ್ಯಗಳು ನಡೆಯಲಿವೆ. ಅವುಗಳಲ್ಲಿ ನವೆಂಬರ್ 10 ರಂದು ನಡೆಯುವ ಎರಡನೇ ಸೆಮಿಫೈನಲ್ ಪಂದ್ಯವೂ ಸೇರಿದೆ.
5 / 8
ಗಬ್ಬಾ: ಕ್ವೀನ್ಸ್‌ಲ್ಯಾಂಡ್‌ನ ಬ್ರಿಸ್ಬೇನ್‌ನಲ್ಲಿರುವ ಗಬ್ಬಾ ಸ್ಟೇಡಿಯಂ ಒಟ್ಟು 42,000 ಪ್ರೇಕ್ಷಕರು ಕೂರುವ ಸಾಮರ್ಥ್ಯ ಹೊಂದಿದೆ. ಗಬ್ಬಾ ಮೈದಾನ ಬೌನ್ಸಿ ವಿಕೆಟ್ಗೆ ಹೆಸರುವಾಸಿಯಾಗಿದ್ದು, ಈ ಮೈದಾನದಲ್ಲಿ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಜಗತ್ತು ಎದುರು ನೋಡುತ್ತಿದೆ. ಈ ಕ್ರೀಡಾಂಗಣದಲ್ಲಿ ಒಟ್ಟು 4 ಪಂದ್ಯಗಳು ನಡೆಯಲಿವೆ.
6 / 8
ಕಾರ್ಡಾನಿಯಾ ಪಾರ್ಕ್: ಕಾರ್ಡಾನಿಯಾ ಪಾರ್ಕ್ ವಿಕ್ಟೋರಿಯಾದ ಎರಡನೇ ದೊಡ್ಡ ನಗರವಾದ ಗೀಲಾಂಗ್‌ನಲ್ಲಿದೆ. 30,000 ಆಸನಗಳನ್ನು ಹೊಂದಿರುವ ಈ ಕ್ರೀಡಾಂಗಣವು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಕಾರ್ಡಿನಿಯಾ ಪಾರ್ಕ್ ಆಸ್ಟ್ರೇಲಿಯನ್ ಫುಟ್‌ಬಾಲ್ ಲೀಗ್‌ನ ಗೀಲಾಂಗ್ ಕ್ಯಾಟ್ಸ್ ತಂಡದ ತವರು ಮೈದಾನವಾಗಿದೆ. ಕಾರ್ಡಾನಿಯಾ ಪಾರ್ಕ್ನಲ್ಲಿ ಬಿಗ್ ಬ್ಯಾಷ್ ಲೀಗ್, ಇಂಟರ್ನ್ಯಾಷನಲ್ ಟಿ20, ಸೂಪರ್ ರಗ್ಬಿ, ಫುಟ್ಬಾಲ್ ಫ್ರೆಂಡ್ಲೀಸ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಸೂಪರ್ 12 ಪಂದ್ಯಕ್ಕೂ ಮುನ್ನ ಇಲ್ಲಿ 6 ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ.
7 / 8
ಪರ್ತ್ ಸ್ಟೇಡಿಯಂ: ಪಶ್ಚಿಮ ಆಸ್ಟ್ರೇಲಿಯಾದಲ್ಲಿರುವ ಪರ್ತ್ ಅಥವಾ ಆಪ್ಟಸ್ ಸ್ಟೇಡಿಯಂನಲ್ಲಿ 2018 ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಲಾಯಿತು. ಸೂಪರ್ 12 ಸುತ್ತಿನ ಮೊದಲ ದಿನ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. 60 ಸಾವಿರ ಪ್ರೇಕ್ಷಕರು ಕೂರವ ಸಾಮಥ್ಯ್ರ ಹೊಂದಿರುವ ಈ ಕ್ರೀಡಾಂಗಣ ಆಸ್ಟ್ರೇಲಿಯಾದ ಮೂರನೇ ಅತಿ ದೊಡ್ಡ ಕ್ರೀಡಾಂಗಣವಾಗಿದ್ದು, ಇಲ್ಲಿ 5 ವಿಶ್ವಕಪ್ ಪಂದ್ಯಗಳು ನಡೆಯಲಿವೆ.
8 / 8
ಬೆಲ್‌ರೈವ್ ಓವಲ್: ಡರ್ವೆಂಟ್ ನದಿಯ ದಡದಲ್ಲಿರುವ ಬೆಲ್‌ರೈವ್ ಓವಲ್ ಕ್ರೀಡಾಂಗಣವು ಮೊದಲ ವಿಶ್ವಕಪ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 20,000 ಪ್ರೇಕ್ಷಕರ ಸಾಮರ್ಥ್ಯದ ಈ ಕ್ರೀಡಾಂಗಣವು ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಬಾರಿ ನವೀಕರಣಗೊಂಡಿದೆ. ಬೆಲ್‌ರೈವ್ ಓವಲ್‌ನಲ್ಲಿ ಒಟ್ಟು 9 ವಿಶ್ವಕಪ್ ಪಂದ್ಯಗಳು ನಡೆಯಲಿವೆ.