IPL 2022: ವನಿಂದು ಹಸರಂಗ ವಿಭಿನ್ನ ಸಂಭ್ರಮಕ್ಕೆ ಇದುವೇ ಕಾರಣ..!
TV9 Web | Updated By: ಝಾಹಿರ್ ಯೂಸುಫ್
Updated on:
Mar 31, 2022 | 2:41 PM
Wanindu Hasaranga: 4 ವಿಕೆಟ್ ಉರುಳಿಸುವ ಮೂಲಕ ವನಿಂದು ಹಸರಂಗ ಹೊಸ ಸ್ಟ್ರೈಲ್ ಸೆಲೆಬ್ರೇಷನ್ ಮಾಡಿ ವೈರಲ್ ಆಗಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ.
1 / 5
ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವನಿಂದು ಹಸರಂಗ ಎಂದರೆ ತಪ್ಪಾಗಲಾರದರು. ಏಕೆಂದರೆ ಈ ಪಂದ್ಯದಲ್ಲಿ ಹಸರಂಗ ಭರ್ಜರಿ ಬೌಲಿಂಗ್ ಮಾಡಿದ್ದರು.
2 / 5
4 ಓವರ್ ಎಸೆದಿದ್ದ ಹಸರಂಗ ನೀಡಿದ್ದು ಕೇವಲ 20 ರನ್ ಮಾತ್ರ. ಹಾಗೆಯೇ 4 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದರು. ವಿಶೇಷ ಎಂದರೆ ಪ್ರತಿ ವಿಕೆಟ್ ಸಿಕ್ಕಾಗಲೂ ಹಸರಂಗ ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ್ದರು.
3 / 5
ವಿಕೆಟ್ ಸಿಗುತ್ತಿದ್ದಂತೆ ಕೈ ಮೇಲೆತ್ತಿ ಬೆರಳುಗಳನ್ನು ತೋರಿಸುತ್ತಾ ಹಸರಂಗ ಸಂಭ್ರಮಿಸಿದ್ದರು. ಹಸರಂಗ ಹೀಗೆ ಸೆಲೆಬ್ರೇಟ್ ಮಾಡಲು ಕಾರಣ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್. ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಗೋಲ್ ಹೊಡೆದ ಬಳಿಕ ಇದೇ ರೀತಿಯಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದರು.
4 / 5
ಹ್ಯಾಂಗ್ ಲೂಸ್ ಎಂದು ಕರೆಯುವ ಇದೇ ಸ್ಟೈಲ್ ಅನ್ನೇ ವನಿಂದು ಹಸರಂಗ ಕೂಡ ಮಾಡಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ವನಿಂದು ಹಸರಂಗ ಅವರ ಫೇವರೇಟ್ ಫುಟ್ಬಾಲ್ ಆಟಗಾರ ಕೂಡ ನೇಮರ್. ಹೀಗಾಗಿ ವಿಕೆಟ್ ಸಿಕ್ಕಾಗ ನೇಮರ್ ಅವರಂತೆ ಸಂಭ್ರಮಿಸಿದ್ದಾರೆ.
5 / 5
ಒಟ್ಟಿನಲ್ಲಿ ಇದೀಗ 4 ವಿಕೆಟ್ ಉರುಳಿಸುವ ಮೂಲಕ ವನಿಂದು ಹಸರಂಗ ಹೊಸ ಸ್ಟ್ರೈಲ್ ಸೆಲೆಬ್ರೇಷನ್ ಮಾಡಿ ವೈರಲ್ ಆಗಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ.