ವೆಸ್ಟ್ ಇಂಡೀಸ್ ಆರಂಭಿಕರಿಂದ ಟೆಸ್ಟ್​ ಕ್ರಿಕೆಟಿಗನಲ್ಲಿ ಹೊಸ ಇತಿಹಾಸ ಸೃಷ್ಟಿ

| Updated By: ಝಾಹಿರ್ ಯೂಸುಫ್

Updated on: Feb 07, 2023 | 2:27 PM

Brathwaite-Tagenarine Chanderpaul: ಈ ಪಂದ್ಯದಲ್ಲಿ ಕ್ರೇಗ್ ಬ್ರಾಥ್​ವೈಟ್ 312 ಎಸೆತಗಳಲ್ಲಿ 18 ಫೋರ್​ನೊಂದಿಗೆ 182 ರನ್​ ಬಾರಿಸಿದರೆ, ಟಾಗೆನರೈನ್ ಚಂದ್ರಪಾಲ್ 467 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 16 ಫೋರ್​ನೊಂದಿಗೆ 207 ರನ್​ಗಳಿಸಿದ್ದರು.

1 / 8
ವೆಸ್ಟ್ ಇಂಡೀಸ್ ಆರಂಭಿಕ ಆಟಗಾರರು ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 33 ವರ್ಷಗಳ ಐತಿಹಾಸಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

2 / 8
ಹೌದು, ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ ಆರಂಭಿಕರಾದ ಕ್ರೇಗ್ ಬ್ರಾಥ್​ವೈಟ್ ಹಾಗೂ ಟಾಗೆನರೈನ್ ಚಂದ್ರಪಾಲ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಈ ಜೋಡಿಯು ಮೊದಲ ವಿಕೆಟ್​ಗೆ 336 ರನ್​ಗಳನ್ನು ಕಲೆಹಾಕುವ ಮೂಲಕ ಹೊಸ ದಾಖಲೆಯನ್ನೂ ಬರೆದರು.

3 / 8
ಅಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್ ಪರ ಮೊದಲ ವಿಕೆಟ್​ನಲ್ಲಿ 300 ರನ್​ ಕಲೆಹಾಕಿದ ಮೊದಲ ಜೋಡಿ ಎಂಬ ದಾಖಲೆ ಬ್ರಾಥ್​ವೈಟ್ ಹಾಗೂ ಟಾಗೆನರೈನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ ಹೆಸರಿನಲ್ಲಿತ್ತು.

4 / 8
1990 ರಲ್ಲಿ ಸೇಂಟ್ ಜಾನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿಂಡೀಸ್ ಆರಂಭಿಕರಾದ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ 298 ರನ್​ಗಳ ಜೊತೆಯಾಟವಾಡಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಬ್ರಾಥ್​ವೈಟ್ ಹಾಗೂ ಟಾಗೆನರೈನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

5 / 8
ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾಲ್ ಎದುರಿಸಿದ ಆರಂಭಿಕ ಜೋಡಿಗಳ ದಾಖಲೆಯಲ್ಲೂ ಈ ಇಬ್ಬರು ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆಯನ್ನು ಶ್ರೀಲಂಕಾದ ಅಟ್ಟಾಪಟ್ಟು ಹಾಗೂ ಜಯಸೂರ್ಯ ನಿರ್ಮಿಸಿದ್ದರು.

6 / 8
2000 ರಲ್ಲಿ ಪಾಕಿಸ್ತಾನ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಮರ್ವಾನ್ ಅಟ್ಟಾಪಟ್ಟು ಹಾಗೂ ಸನತ್ ಜಯಸೂರ್ಯ ಬರೋಬ್ಬರಿ 686 ಎಸೆತಗಳನ್ನು ಎದುರಿಸಿ 335 ರನ್​ಗಳ ಜೊತೆಯಾಟವಾಡಿದ್ದರು.

7 / 8
ಇದೀಗ ಟಾಗೆನರೈನ್ ಚಂದ್ರಪಾಲ್ ಹಾಗೂ ಕ್ರೇಗ್ ಬ್ರಾಥ್​ವೈಟ್ ಜಿಂಬಾಬ್ವೆ ವಿರುದ್ಧ ಮೊದಲ ವಿಕೆಟ್​ನಲ್ಲಿ 685 ಎಸೆತಗಳನ್ನು ಎದುರಿಸಿ 336 ರನ್​ ಕಲೆಹಾಕಿದ್ದಾರೆ. ಈ ಮೂಲಕ 21ನೇ ಶತಮಾನದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 100 ಓವರ್​ ಆಡಿದ ಆರಂಭಿಕ ಜೋಡಿ ಎಂಬ ವಿಶೇಷ ದಾಖಲೆಯನ್ನು ಟಾಗೆನರೈನ್ ಚಂದ್ರಪಾಲ್ ಹಾಗೂ ಕ್ರೇಗ್ ಬ್ರಾಥ್​ವೈಟ್ ನಿರ್ಮಿಸಿದ್ದಾರೆ.

8 / 8
ಇನ್ನು ಈ ಪಂದ್ಯದಲ್ಲಿ ಕ್ರೇಗ್ ಬ್ರಾಥ್​ವೈಟ್ 312 ಎಸೆತಗಳಲ್ಲಿ 18 ಫೋರ್​ನೊಂದಿಗೆ 182 ರನ್​ ಬಾರಿಸಿದರೆ, ಟಾಗೆನರೈನ್ ಚಂದ್ರಪಾಲ್ 467 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 16 ಫೋರ್​ನೊಂದಿಗೆ 207 ರನ್​ಗಳಿಸಿದ್ದರು. ಈ ಮೂಲಕ ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ನಷ್ಟಕ್ಕೆ 447 ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

Published On - 10:58 pm, Mon, 6 February 23