AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಭ್ ಪಂತ್ ಬದಲಿಯಾಗಿ ಆಯ್ಕೆಯಾದ ಜಗದೀಸನ್ ಯಾರು ಗೊತ್ತಾ?

Rishabh Pant-N Jagadeesan: ಮ್ಯಾಂಚೆಸ್ಟರ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ ಬ್ಯಾಟಿಂಗ್ ವೇಳೆ ರಿಷಭ್ ಪಂತ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿತ್ತು. ಈ ಗಾಯದ ಕಾರಣ ಪಂತ್ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಅಲ್ಲದೆ ಅವರ ಬದಲಿಗೆ ಎನ್ ಜಗದೀಸನ್ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 29, 2025 | 8:04 AM

Share
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಂತ್​ಗೆ ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದಿಲ್ಲ.

1 / 5
ಇತ್ತ ರಿಷಭ್ ಪಂತ್ ತಂಡದಿಂದ ಹೊರಬೀಳುತ್ತಿದ್ದಂತೆ ಟೀಮ್ ಇಂಡಿಯಾಗೆ ಹೊಸ ವಿಕೆಟ್​ನ ಎಂಟ್ರಿಯಾಗಿದೆ. ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ 29 ವರ್ಷದ ನಾರಾಯಣ್ ಜಗದೀಸನ್ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಗೂಗಲ್​ನಲ್ಲಿ ಯಾರು ಈ ಜಗದೀಸನ್ ಎಂಬ ಹುಡುಕಾಟ ಕೂಡ ಶುರುವಾಗಿದೆ. ಅಷ್ಟಕ್ಕೂ ಈ ಜಗದೀಸನ್ ಯಾರು?

2 / 5
ನಾರಾಯಣ್ ಜಗದೀಸನ್ ಅಲಿಯಾಸ್ ಎನ್​ ಜಗದೀಸನ್, ತಮಿಳುನಾಡು ಮೂಲದ ವಿಕೆಟ್​ ಕೀಪರ್ ಬ್ಯಾಟರ್. ಈವರೆಗೆ ಒಟ್ಟು 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 10 ಶತಕಗಳು ಮತ್ತು 14 ಅರ್ಧಶತಕಗಳ ನೆರವಿನೊಂದಿಗೆ ಒಟ್ಟು 3373 ರನ್‌ಗಳನ್ನು ಗಳಿಸಿದ್ದಾರೆ. ಇದರ ನಡುವೆ ಒಂದು ತ್ರಿಶತಕವನ್ನೂ ಸಹ ಬಾರಿಸಿದ್ದಾರೆ.

3 / 5
2024 ರಲ್ಲಿ ಚಂಡೀಗಢ್ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ಪರ ಆರಂಭಿಕನಾಗಿ ಕಣಕ್ಕಿಳಿದ ಜಗದೀಸನ್ 403 ಎಸೆತಗಳಲ್ಲಿ 321 ರನ್ ಬಾರಿಸಿದ್ದರು. ಈ ವೇಳೆ ಎನ್​ಜೆ ಬ್ಯಾಟ್​ನಿಂದ ಮೂಡಿಬಂದ ಫೋರ್​ಗಳ ಸಂಖ್ಯೆ ಬರೋಬ್ಬರಿ 23. ಹಾಗೆಯೇ ಇದೇ ಇನಿಂಗ್ಸ್​ನಲ್ಲಿ 5 ಸಿಕ್ಸ್​ಗಳನ್ನು ಸಹ ಸಿಡಿಸಿದ್ದರು.

4 / 5
ಇನ್ನು ಎನ್ ಜಗದೀಸನ್ ಅವರ ವಿಕೆಟ್ ಕೀಪಿಂಗ್ ಬಗ್ಗೆ ಹೇಳುವುದಾದರೆ, 79 ಪ್ರಥಮ ದರ್ಜೆ ಇನಿಂಗ್ಸ್​ಗಳಲ್ಲಿ ಗ್ಲೌಸ್ ತೊಟ್ಟಿರುವ ಅವರು ಒಟ್ಟು 133 ರನ್​ ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಹಾಗೆಯೇ 14 ಸ್ಟಂಪ್​ಗಳನ್ನು ಸಹ ಮಾಡಿದ್ದಾರೆ. ಅತ್ತ ದೇಶೀಯ ಅಂಗಳದಲ್ಲಿ ಅನುಭವಿ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿರುವ ಜಗದೀಸನ್ ಅವರಿಗೆ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿದ್ದು, ಅದರಂತೆ 29ನೇ ವಯಸ್ಸಿನಲ್ಲೇ ಭಾರತದ ಪರ ಪಾದಾರ್ಪಣೆ ಮಾಡುವ ಅವಕಾಶ ದೊರೆಯಲಿದೆಯಾ ಕಾದು ನೋಡಬೇಕಿದೆ.

5 / 5