ಅಜಿಂಕ್ಯ ರಹಾನೆ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ರಹಾನೆ ಅವರನ್ನು ಉಪನಾಯಕ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಆದರೆ, ಈಗ ರೋಹಿತ್ ತಂಡದ ಭಾಗವಾಗಿಲ್ಲದ ಕಾರಣ, ಮ್ಯಾನೇಜ್‌ಮೆಂಟ್ ಅವರ ಹೆಸರನ್ನು ಮರುಪರಿಶೀಲಿಸಬಹುದು. ಅವರು ಉಳಿದ ಆಟಗಾರರಿಗಿಂತ ಉಪನಾಯಕನ ಅನುಭವವನ್ನು ಹೊಂದಿದ್ದಾರೆ. ರಹಾನೆ ಉಪನಾಯಕನಾದರೆ, ನಿಸ್ಸಂಶಯವಾಗಿ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇತ್ತೀಚೆಗೆ ರಹಾನೆ ಅತ್ಯಂತ ಕಳಪೆ ಫಾರ್ಮ್ ಹೊಂದಿದ್ದು, ಹೀಗಾಗಿ ಅವರನ್ನೇ ಮತ್ತೆ ಉಪನಾಯಕನಾಗಿ ಆಯ್ಕೆ ಮಾಡಲಿದೆಯಾ ಕಾದು ನೋಡಬೇಕಿದೆ.