- Kannada News Photo gallery Cricket photos WI vs IND 1st T20I India were fined five percent of their match fees by ICC for maintaining a slow over
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಯಲ್ಲಿ ಸೋಲುಂಡ ಭಾರತಕ್ಕೆ ಮತ್ತೊಂದು ಆಘಾತ
IND vs WI 1st T20I: ಸೋಲಿನ ಆಘಾತದಲ್ಲಿರುವ ಟೀಮ್ ಇಂಡಿಯಾಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ಹಾರ್ದಿಕ್ ಪಾಂಡ್ಯ ಪಡೆಗೆ ಐಸಿಸಿ ಫೈನ್ ಹಾಕಿದೆ. ಭಾರತವು ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಐಸಿಸಿ ತನ್ನ ಪಂದ್ಯದ ಶುಲ್ಕದ ಐದು ಪ್ರತಿಶತದಷ್ಟು ದಂಡವನ್ನು ವಿಧಿಸಿದೆ.
Updated on: Aug 05, 2023 | 7:37 AM

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ವಶಪಡಿಸಿಕೊಂಡ ಭಾರತ ಇದೀಗ ಟಿ20 ಸರಣಿ ಆಡುತ್ತಿದೆ. ಆದರೆ, ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು. ಟ್ರಿನಿಡಾಡ್ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ರನ್ಗಳ ರೋಚಕ ಜಯ ಸಾಧಿಸಿತು.

ಈ ಸೋಲಿನ ಆಘಾತದಲ್ಲಿರುವ ಟೀಮ್ ಇಂಡಿಯಾಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ಹಾರ್ದಿಕ್ ಪಾಂಡ್ಯ ಪಡೆಗೆ ಐಸಿಸಿ ಫೈನ್ ಹಾಕಿದೆ. ಭಾರತವು ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಐಸಿಸಿ ತನ್ನ ಪಂದ್ಯದ ಶುಲ್ಕದ ಐದು ಪ್ರತಿಶತದಷ್ಟು ದಂಡವನ್ನು ವಿಧಿಸಿದೆ.

ಅತ್ತ ವೆಸ್ಟ್ ಇಂಡೀಸ್ ತಂಡಕ್ಕೆ ಕೂಡ ಇದೇ ಅಪರಾಧಕ್ಕಾಗಿ ಪಂದ್ಯದ 10 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ರೋವ್‌ಮನ್ ಪೊವೆಲ್, ನಿಗದಿತ ಸಮಯದಲ್ಲಿ ಓವರ್‌ಗಳ ಸಂಖ್ಯೆಯನ್ನು ಪೂರ್ಣಗೊಳಿಸದಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.

ಭಾರತ ನಿಗದಿತ ಅವಧಿಗಿಂತ ಒಂದು ಓವರ್ ಹಿಂದಿದ್ದರೆ, ವೆಸ್ಟ್ ಇಂಡೀಸ್ 2 ಓವರ್ ಹಿಂದಿತ್ತು. ಆದ್ದರಿಂದ, ಪಾಂಡ್ಯ ಪಡೆಗೆ ಪಂದ್ಯದ ಶುಲ್ಕದ 5 ಪ್ರತಿಶತ ದಂಡ ವಿಧಿಸಲಾಯಿತು, ಅಂತೆಯೆ ಆತಿಥೇಯರು 10 ಪ್ರತಿಶತ ದಂಡವನ್ನು ಕಟ್ಟಬೇಕಾಗಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅನುಸಾರವಾಗಿ, ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಆಟಗಾರರು ತಮ್ಮ ಪಂದ್ಯದ ಶುಲ್ಕವನ್ನು ದಂಡವಾಗಿ ಕಟ್ಟವೇಕಿದೆ. ಈ ದಂಡವು ಶೇಕಡಾ 5 ರಿಂದ 50 ರ ವರೆಗೆ ತಲುಪುತ್ತದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ನಾಯಕ ರೋವ್‌ಮನ್ ಪೊವೆಲ್ 48 ರನ್, ಪೂರನ್ 41 ರನ್ ಬಾರಿಸಿದರು. ಭಾರತ ಪರ ಅರ್ಶ್ದೀಪ್ ಸಿಂಗ್ ಹಾಗೂ ಯುಜ್ವೇಂದ್ರ ಚಹಲ್ 2 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ತಂಡದ ಪರ ತಿಲಕ್ ವರ್ಮಾ 39 ಮತ್ತು ಸೂರ್ಯಕುಮಾರ್ 21 ರನ್ ಗಳಿಸಿದ್ದೇ ಹೆಚ್ಚು. ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಸೋಲುಂಡಿತು. ವಿಂಡೀಸ್ ಪರ ಶೆಫರ್ಡ್, ಹೋಲ್ಡರ್ ಮತ್ತು ಮೆಖಾಯ್ ತಲಾ 2 ವಿಕೆಟ್ ಪಡೆದರು.

ಇದೀಗ 4 ರನ್ಗಳ ರೋಚಕ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆದುಕೊಂಡಿದೆ. ಮುಂದಿನ ಪಂದ್ಯ ಆಗಸ್ಟ್ 6 ರಂದು ನಡೆಯಲಿದ್ದು, ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದೆ.




