IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Jan 16, 2023 | 10:07 PM

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ.

1 / 6
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WIPL) ನ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿದೆ. ರಿಲಯನ್ಸ್ ಮಾಲೀಕತ್ವದ Viacom18 ಕಂಪೆನಿಯು ಬರೋಬ್ಬರಿ 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್​ನ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

2 / 6
ಐದು ವರ್ಷಗಳ ಒಪ್ಪಂದಂತೆ ಮಹಿಳಾ ಐಪಿಎಲ್​ ಮಾಧ್ಯಮ ಹಕ್ಕುಗಳು ಮಾರಾಟವಾಗಿದ್ದು, ಅದರಂತೆ 2023 ರಿಂದ 2027 ರವರೆಗಿನ ಸೀಸನ್‌ಗಳು ಸ್ಪೋಟ್ಸ್​-18 ಹಾಗೂ ಜಿಯೋ ಆ್ಯಪ್​ಗಳಲ್ಲಿ ಪ್ರಸಾರವಾಗಲಿದೆ.

3 / 6
ಮಹಿಳಾ ಐಪಿಎಲ್​ನ ಪ್ರಸಾರ ಹಕ್ಕನ್ನು 951 ಕೋಟಿಗೆ ಮಾರಾಟ ಮಾಡಿರುವ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯಗಳಿಸಲಿದೆ. ಇದು ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕುಗಳ ಆದಾಯಕ್ಕಿಂತ ಹೆಚ್ಚು ಎಂಬುದೇ ಇಲ್ಲಿ ವಿಶೇಷ.

4 / 6
ಅಂದರೆ ಮಹಿಳಾ ಐಪಿಎಲ್​ನ ಪ್ರತಿ ಪಂದ್ಯದ ಪ್ರಸಾರದ ಹಕ್ಕು 7.09 ಕೋಟಿಗೆ ಮಾರಾಟವಾದರೆ, ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕು ಮಾರಾಟವಾಗಿರುವುದು ಕೇವಲ 2.44 ಕೋಟಿ ರೂ.ಗೆ ಮಾತ್ರ. ಅಂದರೆ ಪಿಎಸ್​ಎಲ್​ನ ಮೀಡಿಯಾ ರೈಟ್ಸ್​ಗಿಂತ ಮಹಿಳಾ ಐಪಿಎಲ್ ಮೂರು ಪಟ್ಟು ಹೆಚ್ಚು ಆದಾಯ ತರಲಿದೆ.

5 / 6
ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

6 / 6