194 ಎಸೆತಗಳು… ಸ್ಪಿನ್ನರ್​ಗಳೊಂದಿಗೆ ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ

Australia vs England: ಇಂಗ್ಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಆ್ಯಡಂ ಝಂಪಾ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ತಲಾ 10 ಓವರ್​ಗಳನ್ನು ಎಸೆದರು. ಇನ್ನು ಕೂಪರ್ ಕೊನೊಲಿ 4 ಓವರ್ ಎಸೆದರೆ, ಮ್ಯಾಥ್ಯೂ ಶಾರ್ಟ್ 2 ಓವರ್ ಬೌಲ್ ಮಾಡಿದರು. ಹಾಗೆಯೇ ಟ್ರಾವಿಸ್ ಹೆಡ್ 6.2 ಓವರ್ ಎಸೆದು 4 ವಿಕೆಟ್ ಕಬಳಿಸಿ ಮಿಂಚಿದರು.

|

Updated on: Sep 30, 2024 | 9:23 AM

ಬ್ರಿಸ್ಟಲ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವಿಶೇಷ ವಿಶ್ವ ದಾಖಲೆ ಬರೆದಿದೆ. ಅದು ಸಹ ಐವರು ಸ್ಪಿನ್ನರ್​ಗಳನ್ನು ಬಳಸಿಕೊಳ್ಳುವ ಮೂಲಕ ಎಂಬುದೇ ವಿಶೇಷ.

1 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಈ ಬ್ಯಾಟಿಂಗ್ ಅಬ್ಬರವನ್ನು ತಡೆಯಲು ಸ್ಮಿತ್ ಐವರು ಸ್ಪಿನ್ನರ್​ಗಳನ್ನು ಬಳಸಿಕೊಂಡರು.

2 / 7
ಆ್ಯಡಂ ಝಂಪಾರಿಂದ ಶುರುವಾದ ಸ್ಪಿನ್ ದಾಳಿಯು ವರ್ಕ್ ಆಗುತ್ತಿಲ್ಲ ಎಂದು ಕಂಡು ಬಂದಾಗ, ಸ್ಮಿತ್ ಚೆಂಡನ್ನು ಗ್ಲೆನ್ ಮ್ಯಾಕ್​​ವೆಲ್ ಕೈಗಿತ್ತರು. ಇದರ ಬೆನ್ನಲ್ಲೇ ಕೂಪರ್ ಕೊನೊಲಿ ಕೈಯಲ್ಲೂ ಸ್ಪಿನ್ ಬೌಲಿಂಗ್ ಮಾಡಿಸಿದರು. ಆ ಬಳಿಕ ಮ್ಯಾಥ್ಯೂ ಶಾರ್ಟ್ ಕೂಡ ಸ್ಪಿನ್ ಮೋಡಿ ಮಾಡಿದರು. ಇನ್ನು ಟ್ರಾವಿಸ್ ಹೆಡ್​ಗೂ ಚೆಂಡು ನೀಡುವ ಮೂಲಕ ಸ್ಮಿತ್ ಗಮನ ಸೆಳೆದರು.

3 / 7
ಈ ಮೂಲಕ ಆಸ್ಟ್ರೇಲಿಯಾದ ಐವರು ಸ್ಪಿನ್ನರ್​ಗಳು ಒಟ್ಟು 194 ಎಸೆತಗಳನ್ನು ಎಸೆದರು. ಇದು ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಅಂದರೆ 300 ಎಸೆತಗಳಲ್ಲಿ ಇದೇ ಮೊದಲ ಬಾರಿಗೆ ತಂಡವೊಂದರ ಪರ ಬೌಲರ್​ಗಳು 190+ ಎಸೆತಗಳನ್ನು ಸ್ಪಿನ್ನರ್​ಗಳು ಎಸೆದಿದ್ದಾರೆ.

4 / 7
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಒಟ್ಟು 8 ಬೌಲರ್​ಗಳನ್ನು ಸಹ ಬಳಸಿಕೊಂಡಿದ್ದಾರೆ. ಇಲ್ಲಿ ವೇಗಿಗಳಾಗಿ ಜೋಶ್ ಹ್ಯಾಝಲ್​ವುಡ್, ಮಿಚೆಲ್ ಸ್ಟಾರ್ಕ್​ ಹಾಗೂ ಆರೋನ್ ಹಾರ್ಡಿ ಕಾಣಿಸಿಕೊಂಡರೆ, ಸ್ಪಿನ್ನರ್​ಗಳಾಗಿ ಆ್ಯಡಂ ಝಂಪಾ, ಗ್ಲೆನ್ ಮ್ಯಾಕ್ಸ್​ವೆಲ್, ಕೂಪರ್ ಕೊನೊಲಿ, ಮ್ಯಾಥ್ಯೂ ಶಾರ್ಟ್​ ಹಾಗೂ ಟ್ರಾವಿಸ್ ಹೆಡ್ ಬೌಲಿಂಗ್ ಮಾಡಿದ್ದಾರೆ.

5 / 7
ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರ ಐವರು ಸ್ಪಿನ್ನರ್​ಗಳಿಂದ ಬೌಲಿಂಗ್ ಮಾಡಿಸಿದ ಮೊದಲ ನಾಯಕನೆಂಬ ಹೆಗ್ಗಳಿಕೆಯು ಸ್ಟೀವ್ ಸ್ಮಿತ್ ಪಾಲಾಗಿದೆ. ಅಷ್ಟೇ ಅಲ್ಲದೆ 194 ಸ್ಪಿನ್​ ಎಸೆತಗಳೊಂದಿಗೆ ಆಸ್ಟ್ರೇಲಿಯಾ ತಂಡವು ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸವನ್ನು ಸಹ ರಚಿಸಿದ್ದಾರೆ.

6 / 7
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 49.2 ಓವರ್​ಗಳಲ್ಲಿ 309 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 20.4 ಓವರ್​ಗಳಲ್ಲಿ 165 ರನ್​ ಕಲೆಹಾಕಿತು. ಇದೇ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿಯಿತು. ಆ ಬಳಿಕ ಮಳೆ ನಿಲ್ಲದ ಕಾರಣ ಫಲಿತಾಂಶ ನಿರ್ಣಯಕ್ಕಾಗಿ ಡಕ್ ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಇಂಗ್ಲೆಂಡ್ ತಂಡಕ್ಕಿಂತ 49 ರನ್​ಗಳ ಮುಂದಿದ್ದ ಆಸ್ಟ್ರೇಲಿಯಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

7 / 7
Follow us