WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಅಂಕ ಪಟ್ಟಿ
Women's Premier League 2026 Points Table: ವುಮೆನ್ಸ್ ಪ್ರೀಮಿಯರ್ ಲೀಗ್ನ ನಾಲ್ಕನೇ ಸೀಸನ್ನಲ್ಲಿ ಒಟ್ಟು 5 ತಂಡಗಳು ಕಣಕ್ಕಿಳಿಯುತ್ತಿವೆ. ಈ ಐದು ತಂಡಗಳಲ್ಲಿ ಈವರೆಗೆ ಅತ್ಯುತ್ತಮ ಪ್ರದರ್ಶನ ನೀಡಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಈ ಭರ್ಜರಿ ಪ್ರದರ್ಶನದೊಂದಿಗೆ ಆರ್ಸಿಬಿ ಪಡೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
Updated on: Jan 17, 2026 | 8:56 AM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ 9 ಪಂದ್ಯಗಳು ಮುಗಿದಿವೆ. ಎಲ್ಲಾ ತಂಡಗಳು ಕನಿಷ್ಠ 3 ಪಂದ್ಯಗಳನ್ನಾಡಿದೆ. ಈ ಪಂದ್ಯಗಳ ಮೂಲಕ ಐದು ತಂಡಗಳು ಕೂಡ ಗೆಲುವಿನ ಖಾತೆ ತೆರೆದಿದೆ. ಈ ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ನೋಡುವುದಾದರೆ....

1- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡವು ಈವರೆಗೆ 3 ಪಂದ್ಯಗಳನ್ನಾಡಿದೆ. ಈ ಮೂರು ಮ್ಯಾಚ್ಗಳಲ್ಲೂ ಭರ್ಜರಿ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟು 6 ಅಂಕಗಳನ್ನು ಪಡೆದಿರುವ ಆರ್ಸಿಬಿ ತಂಡದ ಪ್ರಸ್ತುತ ನೆಟ್ ರನ್ ರೇಟ್ +1.828 .

2- ಮುಂಬೈ ಇಂಡಿಯನ್ಸ್: ಹರ್ಮನ್ಪ್ರೀತ್ ಕೌರ್ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವು ಈವರೆಗೆ 4 ಮ್ಯಾಚ್ಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಈ ಮೂಲಕ ಒಟ್ಟು 4 ಅಂಕಗಳನ್ನು ಪಡೆದಿರುವ ಮುಂಬೈ ಇಂಡಿಯನ್ಸ್ ತಂಡವು +0.469 ನೆಟ್ ರನ್ ರೇಟ್ ಹೊಂದಿದೆ.

3- ಗುಜರಾತ್ ಜೈಂಟ್ಸ್: ಆಶ್ಲೀ ಗಾರ್ಡ್ನರ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಗುಜರಾತ್ ಜೈಂಟ್ಸ್ ತಂಡವು ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿದೆ. ಈ ಮೂಲಕ -0.319 ನೆಟ್ ರನ್ ರೇಟ್ನೊಂದಿಗೆ ಒಟ್ಟು 4 ಅಂಕಗಳನ್ನು ಪಡೆದುಕೊಂಡಿದೆ.

4- ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗಸ್ ನಾಯಕತ್ವದಲ್ಲಿ ಈಗಾಗಲೇ 3 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದು ಗೆಲುವು ಮಾತ್ರ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಪಡೆದಿರುವುದು ಕೇವಲ 2 ಅಂಕಗಳನ್ನು ಮಾತ್ರ. ಅಲ್ಲದೆ ಡಿಸಿ ಪಡೆಯ ಪ್ರಸ್ತುತ ನೆಟ್ ರನ್ ರೇಟ್ -0.833 .

5- ಯುಪಿ ವಾರಿಯರ್ಸ್: ಮೆಗ್ ಲ್ಯಾನಿಂಗ್ ಸಾರಥ್ಯದಲ್ಲಿ ಹೊಸ ಸೀಸನ್ ಆರಂಭಿಸಿರುವ ಯುಪಿ ವಾರಿಯರ್ಸ್ ಈವರೆಗೆ 4 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 1 ಮ್ಯಾಚ್ನಲ್ಲಿ ಮಾತ್ರ. ಈ ಮೂಲಕ 2 ಅಂಕಗಳನ್ನು ಪಡೆದಿರುವ ಯುಪಿ ವಾರಿಯರ್ಸ್ -0.906 ನೆಟ್ ರನ್ ರೇಟ್ ಹೊಂದಿದೆ.
