ಹೌದು, 92 ವರ್ಷಗಳ ಟೆಸ್ಟ್ ಇತಿಹಾಸ ಹೊಂದಿರುವ ಟೀಮ್ ಇಂಡಿಯಾ ಪರ ಒಂದೇ ವರ್ಷ ತವರಿನಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್ಗಳಿಸಿದ ವಿಶೇಷ ದಾಖಲೆಯೊಂದು ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ ಎರಡು ಇನಿಂಗ್ಸ್ಗಳಲ್ಲಿ ಕ್ರಮವಾಗಿ 72 ಮತ್ತು ರನ್ ಕಲೆಹಾಕಿದ್ದರು. ಈ ಮೂಲಕ ಯುವ ಎಡಗೈ ದಾಂಡಿಗ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಭಾರತದ ನಾಲ್ವರು ಬ್ಯಾಟರ್ಗಳು ಮಾತ್ರ ಒಂದು ಕ್ಯಾಲೆಂಡರ್ ವರ್ಷದೊಳಗೆ ತವರಿನಲ್ಲಿ ಏಳು 50+ ಸ್ಕೋರ್ಗಳಿಸಿದ್ದರು.