Year Ender 2022: ಭಾರತೀಯರದ್ದೇ ದರ್ಬಾರು; ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಈ ಐವರೇ ರನ್ ಸರದಾರರು
TV9 Web | Updated By: Digi Tech Desk
Updated on:
Dec 26, 2022 | 2:21 PM
Year Ender 2022: ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಇರಬಹುದು. ಆದರೆ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಟಿ20 ಯಲ್ಲಿ ರನ್ ಸರದಾರನಾಗಿ ಹೊರಹೊಮ್ಮಿದ್ದಾರೆ.
1 / 6
ಬಾಂಗ್ಲಾ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ ಇದರೊಂದಿಗೆ 2022ರ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದೆ. ಈ ವರ್ಷ ಟೀಂ ಇಂಡಿಯಾ ಹಲವು ಏಳು ಬೀಳುಗಳನ್ನು ಕಂಡಿದೆ. ಅದರಲ್ಲೂ 2 ಪ್ರಮುಖ ಈವೆಂಟ್ಗಳನ್ನು ಜಯಿಸುವಲ್ಲಿ ವಿಫಲವಾಗಿದೆ. ಆದರೂ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಹಲವು ಮೊದಲುಗಳಿಗೆ ನಾಂದಿ ಹಾಡಿದ್ದಾರೆ.
2 / 6
ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಇರಬಹುದು. ಆದರೆ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಟಿ20 ಯಲ್ಲಿ ರನ್ ಸರದಾರನಾಗಿ ಹೊರಹೊಮ್ಮಿದ್ದಾರೆ. ಈ ವರ್ಷ 31 ಟಿ20 ಪಂದ್ಯಗಳನ್ನಾಡಿರುವ ಸೂರ್ಯ 1164 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 9 ಅರ್ಧ ಶತಕ ಕೂಡ ಸೇರಿವೆ. ಅಲ್ಲದೆ ಅತಿ ಹೆಚ್ಚು ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್ ಪಟ್ಟಿಯಲ್ಲೂ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
3 / 6
ಐಸಿಸಿ ಶ್ರೇಯಾಂಕದಲ್ಲಿ ಭಾರತದ ಸೂರ್ಯಕುಮಾರ್ ನಂತರ ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಇದ್ದಾರೆ. ಅಲ್ಲದೆ ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿಯೂ ರಿಜ್ವಾನ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 2022 ರಲ್ಲಿ ಅವರು 25 ಪಂದ್ಯಗಳಲ್ಲಿ 996 ರನ್ ಗಳಿಸಿದ್ದಾರೆ.
4 / 6
ಈ ಇಬ್ಬರ ಬಳಿಕ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 20 ಪಂದ್ಯಗಳ 781 ರನ್ ಗಳಿಸಿದ್ದಾರೆ. ಜೊತೆಗೆ ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.
5 / 6
ಜಿಂಬಾಬ್ವೆಯ ಸಿಕಂದರ್ ರಜಾ ಅತಿ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ಎನಿಸಿಕೊಂಡಿದ್ದಾರೆ. ಸಿಕಂದರ್ 2022ರಲ್ಲಿ ಆಡಿದ 24 ಟಿ20 ಪಂದ್ಯಗಳ 23 ಇನ್ನಿಂಗ್ಸ್‌ಗಳಲ್ಲಿ 735 ರನ್ ಗಳಿಸಿದ್ದಾರೆ.
6 / 6
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಬಾಬರ್ ಆಡಿರುವ 26 ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ 735 ರನ್ ಗಳಿಸಿದ್ದಾರೆ.
Published On - 2:13 pm, Mon, 26 December 22