- Kannada News Photo gallery Cricket photos Rishabh Pant Hits Most Sixes For India In A Year Kannada News zp
Rishabh Pant: ಟೆಸ್ಟ್ ಕ್ರಿಕೆಟ್ನಲ್ಲಿ ಸಿಕ್ಸ್ ಸಿಡಿಸಿ ವಿಶೇಷ ದಾಖಲೆ ಬರೆದ ರಿಷಭ್ ಪಂತ್
Rishabh Pant: ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ರಿಷಭ್ ಪಂತ್ ಪಾಲಾಗಿದೆ. ಅಷ್ಟೇ ಅಲ್ಲದೆ ಸಿಕ್ಸ್ಗಳ ದಾಖಲೆಯಲ್ಲಿ ಸೆಹ್ವಾಗ್ ನಂತರದ ಸ್ಥಾನವನ್ನು ಪಂತ್ ಅಲಂಕರಿಸಿದ್ದಾರೆ.
Updated on: Dec 26, 2022 | 8:30 PM

2022ರಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಟೆಸ್ಟ್ ರನ್ ಕಲೆಹಾಕಿದ್ದು ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್. ಈ ವರ್ಷ 7 ಪಂದ್ಯಗಳಲ್ಲಿ 12 ಇನಿಂಗ್ಸ್ ಆಡಿರುವ ಪಂತ್ ಒಟ್ಟು 680 ರನ್ಗಳಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 4 ಅರ್ಧಶತಕಗಳನ್ನೂ ಸಹ ಬಾರಿಸಿದ್ದರು.

ವಿಶೇಷ ಎಂದರೆ ಪಂಟರ್ ಪಂತ್ ಬಾರಿಸಿರುವ 680 ರನ್ಗಳಲ್ಲಿ 21 ಸಿಕ್ಸ್ಗಳು ಮೂಡಿಬಂದಿದೆ. ಈ ಮೂಲಕ 2022ರಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ರಿಷಭ್ ಪಂತ್ ಪಾಲಾಗಿದೆ. ಅಷ್ಟೇ ಅಲ್ಲದೆ ಸಿಕ್ಸ್ಗಳ ದಾಖಲೆಯಲ್ಲಿ ಸೆಹ್ವಾಗ್ ನಂತರದ ಸ್ಥಾನವನ್ನು ಪಂತ್ ಅಲಂಕರಿಸಿದ್ದಾರೆ.

ಅಂದರೆ ವರ್ಷವೊಂದರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. ವೀರು 2008 ರಲ್ಲಿ ಬರೋಬ್ಬರಿ 22 ಸಿಕ್ಸ್ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.

ಇದೀಗ 2022 ರಲ್ಲಿ 21 ಸಿಕ್ಸ್ ಬಾರಿಸುವ ಮೂಲಕ ರಿಷಭ್ ಪಂತ್ 2ನೇ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಕೇವಲ 1 ಸಿಕ್ಸ್ಗಳ ಅಂತರದಿಂದ ಸೆಹ್ವಾಗ್ ಅವರ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದ್ದಾರೆ. ಹಿಟ್ಮ್ಯಾನ್ 2019 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಬರೋಬ್ಬರಿ 20 ಸಿಕ್ಸ್ಗಳನ್ನು ಸಿಡಿಸಿದ್ದರು.
