Cristiano Ronaldo: ಪೋರ್ಚುಗಲ್ ಔಟ್: ಮೈದಾನದಿಂದಲೇ ಕಣ್ಣೀರಿಡುತ್ತಾ ತೆರಳಿದ ಕ್ರಿಸ್ಟಿಯಾನೊ ರೊನಾಲ್ಡೊ

Edited By:

Updated on: Dec 11, 2022 | 8:45 AM

Morocco vs Portugal, FIFA World Cup: ಫಿಫಾ ವಿಶ್ವಕಪ್​ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಸೋಲುವ ಮೂಲಕ ಪೋರ್ಚುಗಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಸೋತ ದುಃಖದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು.

1 / 8
ಕತಾರ್​ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್​ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಪೋರ್ಚುಗಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು.

ಕತಾರ್​ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್​ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಪೋರ್ಚುಗಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು.

2 / 8

ಸೋತ ದುಃಖದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅವರು ಉಕ್ಕಿ ಬರುತ್ತಿರುವ ದುಃಖವನ್ನು ತಡೆದುಕೊಂಡು ಮೈದಾನದಿಂದ ಹೊರನಡೆದರು. ರೊನಾಲ್ಡೊ ಅಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

3 / 8

ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಈ ಪಂದ್ಯದಲ್ಲಿ ಕೂಡ ಹೊರಗಿಡಲಾಗಿತ್ತು. ಅವರ ಬದಲಿಗೆ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಗೊನ್ಕಾಲೊ ರಾಮೋಸ್‌ ಆಡಿದರು.

4 / 8

ತಂಡದ ಆಂತರಿಕ ಕಾರಣಗಳಿಂದಾಗಿ ರೊನಾಲ್ಡೊ ಆಟದ ಮೊದಲ 50 ನಿಮಿಷಗಳು ಬೆಂಚ್ ಕಾದರು. ಆಟದ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮೊರೊಕ್ಕೊ, ಪೋರ್ಚುಗಲ್ ಗೋಲು ಗಳಿಸಲು ಮಾಡಿದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. ಅಂತಿಮ ಕ್ಷಣದವರೆಗೂ ಪೋರ್ಚುಗಲ್ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ.

5 / 8

ರೊನಾಲ್ಡೊ ಫುಟ್ಬಾಲ್​ ಕ್ರೀಡೆಯಲ್ಲಿ ಇತಿಹಾಸವೇ ನಿರ್ಮಿಸಿದ್ದರೂ ಒಂದೇ ಒಂದು ವಿಶ್ವಕಪ್​ ಗೆದ್ದಿಲ್ಲ. ಪೋರ್ಚುಗಲ್​ ತಂಡವನ್ನು ಪ್ರತಿನಿಧಿಸುವ ರೊನಾಲ್ಡೊ ತಂಡವನ್ನು ಕನಿಷ್ಠ ಫೈನಲ್​ವರೆಗೂ ಕೊಂಡೊಯ್ದಿಲ್ಲ. ಮುಂದಿನ ವಿಶ್ವಕಪ್​ ವೇಳೆಗೆ ರೊನಾಲ್ಡೊ 41 ವರ್ಷ ಪೂರೈಸಲಿದ್ದು, ವಿಶ್ವಕಪ್​ ಗೆಲ್ಲುವ ಕನಸು ಈಡೇರುವ ಸಾಧ್ಯತೆ ತೀರಾ ಕಡಿಮೆಯಾಗಿದೆ.

6 / 8

ಶನಿವಾರ ರಾತ್ರಿ ನಡೆದ ರೋಚಕ ಕ್ವಾರ್ಟರ್‌ ಫೈನಲ್​ನ ಪಂದ್ಯದಲ್ಲಿ ಮುನ್ಪಡೆ ಆಟಗಾರ ಯೂಸೆಫ್ ಎನ್-ನೆಸೈರಿ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಮೊರಾಕ್ಕೊ ತಂಡ ಫಿಫಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಸೆಮೀಸ್ ತಲುಪಿದ ಮೊದಲ ಆಫ್ರಿಕನ್​ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು.

7 / 8

ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿತು. ಯೂಸುಫ್ ಅನ್ನಸ್ರಿ ಮೊರೊಕ್ಕೊ ಪರವಾಗಿ ಏಕೈಕ ಗೋಲು ದಾಖಲಿಸಿ ಐತಿಹಾಸಿಕ ಜಯಕ್ಕೆ ಕಾರಣರಾದರು. 42ನೇ ನಿಮಿಷದಲ್ಲಿ ಮೊರೊಕ್ಕೊ ಗೋಲು ದಾಖಲಿಸಿ ಸಂಭ್ರಮಿಸಿತು.

8 / 8

ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮೊರಾಕ್ಕೊ ಆಟಗಾರರು ಪೋರ್ಚುಗಲ್​ ವಿರುದ್ಧವೂ ಅದೇ ಗುಣಮಟ್ಟ ಕಾಪಾಡಿಕೊಂಡು ಸಾಗಿದರು.

Published On - 8:45 am, Sun, 11 December 22

Loading...
Unable to load recommendations.
Follow Us