
ಷೇರುಪೇಟೆಯಲ್ಲಿ ಕಳೆದ 6 ತಿಂಗಳಲ್ಲಿ ಉತ್ತಮವಾಗಿ ಬೆಳೆದಿರುವ ಕೆಲ ಕಂಪನಿಗಳು ಹಾಗೂ ಅದರ ಷೇರುಬೆಲೆಯ ವಿವರ ಇಲ್ಲಿ ಕೆಳಗಿನ ಸ್ಲೈಡ್ಗಳಲ್ಲಿ ನೋಡಬಹುದು.

ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್: ಕಳೆದ ಆರು ತಿಂಗಳಲ್ಲಿ ಇದರ ಷೇರು ಬೆಲೆ ಶೇ. 1700ರಷ್ಟು ಏರಿದೆ. ಕಳೆದ ಒಂದು ತಿಂಗಳಲ್ಲೇ ಶೇ. 50ರಷ್ಟು ಲಾಭ ತಂದಿದೆ. 2023ರ ಸೆಪ್ಟೆಂಬರ್ನಲ್ಲಿ ಇದರ ಬೆಲೆ ಕೇವಲ 23.30 ರೂ ಇತ್ತು. ಈಗ (ಮಾರ್ಚ್ 13) ಬರೋಬ್ಬರಿ 437 ರೂ ಆಗಿದೆ.

ಟೈನ್ ಆಗ್ರೋ: ಕಳೆದ ಆರು ತಿಂಗಳಲ್ಲಿ ಇದರ ಷೇರು ಒಂದು ಸಾವಿರ ಪ್ರತಿಶತದಷ್ಟು ಲಾಭ ತಂದು ಮಲ್ಟಿಬ್ಯಾಗರ್ ಎನಿಸಿದೆ. ಆರು ತಿಂಗಳ ಹಿಂದೆ 34 ರೂ ಇದ್ದ ಇದರ ಷೇರು ಬೆಲೆ ಇದೀಗ 424 ರೂಗೆ ಏರಿದೆ.

ಡಾಲ್ಫಿನ್ ಆಫ್ಶೋರ್ ಎಂಟರ್ಪ್ರೈಸಸ್: ಇದರ ಷೇರು ಕೂಡ ಆರು ತಿಂಗಳಲ್ಲಿ ಬರೋಬ್ಬರಿ 1,100 ಪ್ರತಿಶತದಷ್ಟು ಬೆಳೆದಿದೆ. ಇವತ್ತು ಅದರ ಬೆಲೆ 336 ರೂ ಆಗಿದೆ.

ಕ್ಯುಪಿಡ್ ಲಿ: ಕ್ಯುಪಿಡ್ ಕಂಪನಿ ಕಾಂಡೋಮ್ ಉತ್ಪನ್ನಗಳನ್ನು ತಯಾರಿಸುತ್ತದೆ. ಆರು ತಿಂಗಳ ಹಿಂದೆ 427 ರೂ ಇದ್ದ ಈ ಸಂಸ್ಥೆಯ ಷೇರುಬೆಲೆ ಇದೀಗ 2,335 ರೂ ಆಗಿದೆ. ಹೂಡಿಕೆದಾರರಿಗೆ ಆರು ತಿಂಗಳಲ್ಲಿ ಶೇ. 460ಕ್ಕೂ ಹೆಚ್ಚು ಲಾಭ ತಂದಿದೆ.

ನ್ಯೂಟೈಮ್ ಇನ್ಫ್ರಾಸ್ಟ್ರಕ್ಚರ್: ಇದರ ಷೇರು ಬೆಲೆ ಆರು ತಿಂಗಳಲ್ಲಿ ಶೇ. 260ರಷ್ಟು ಲಾಭ ಮಾಡಿದೆ. ಆರು ತಿಂಗಳ ಹಿಂದೆ ಕೇವಲ 12 ರೂ ಇದ್ದ ಇದರ ಬೆಲೆ ಇವತ್ತು 43 ರೂ ಆಗಿದೆ. ಮೂರು ಪಟ್ಟಿಗೂ ಹೆಚ್ಚು ಲಾಭ ಗಳಿಸಿದ್ದಾರೆ ಹೂಡಿಕೆದಾರರು.

ಆಲ್ಗೋಕ್ವಾಂಟ್ ಫಿನ್ಟೆಕ್ ಲಿ: ಆರು ತಿಂಗಳ ಹಿಂದೆ 657 ರೂ ಇದ್ದ ಇದರ ಷೇರು ಬೆಲೆ ಇವತ್ತು 1,368 ರೂ ಆಗಿದೆ. ಅಂದರೆ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವಾರ ಇದು 1,500 ರೂವರೆಗೂ ಏರಿತ್ತು. ಈ ವರ್ಷ ಷೇರುಬೆಲೆ ಶೇ. 35ರಷ್ಟು ಹೆಚ್ಚಿದೆ.

ಐಎಲ್ ಅಂಡ್ ಎಫ್ಎಸ್ ಎಂಜಿನಿಯರಿಂಗ್ ಅಂಡ್ ಕನ್ಸ್ಟ್ರಕ್ಷನ್: ಆರು ತಿಂಗಳ ಹಿಂದೆ 15.70 ರೂ ಇದ್ದ ಇದರ ಷೇರುಬೆಲೆ ಇದೀಗ 35.60 ರೂ ಆಗಿದೆ. ಮೊನ್ನೆಯವರೆಗೂ ಇದರ ಬೆಲೆ 40 ರೂ ಸಮೀಪ ಹೋಗಿತ್ತು. ಕಳೆದ ಆರು ತಿಂಗಳಲ್ಲಿ ಹೂಡಿಕೆದಾರರು ಎರಡು ಪಟ್ಟು ಲಾಭ ಮಾಡಿಕೊಂಡಿದ್ದಾರೆ.